ದಾವಣಗೆರೆ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗುತ್ತಿರುವ ಸೈಬರ್ ಅಪರಾಧಗಳ ಕುರಿತು ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು ಜಾಗರೂಕರಾಗಿರಬೇಕೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಾಜಿ ಸೈನಿಕರಿಗೆ ಸುಲಭವಾಗಿ ಉದ್ಯೋಗ ಕೊಡಿಸುವುದು, ಶೀಘ್ರ ಹಣ ಗಳಿಕೆ, ಹೆಚ್ಚಿನ ಲಾಭದ ಹೂಡಿಕೆ, ಬ್ಯಾಂಕ್ ಖಾತೆ ನವೀಕರಣ, ಇ-ಕೆವೈಸಿ ಹಾಗೂ ಮೊಬೈಲ್‌ಗಳಿಗೆ ಸಂಶಯಾಸ್ಪದ APK ಫೈಲ್‌ಗಳನ್ನು ಕಳುಹಿಸುವ ಮೂಲಕ ಮಾಹಿತಿ ಕದಿಯುವ ಪ್ರಕರಣಗಳು ಹೆಚ್ಚುತ್ತಿವೆ. ಅಷ್ಟೇ ಅಲ್ಲದೆ, OTP ಪಡೆಯುವುದು, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹೆದರಿಸುವುದು ಮತ್ತು ವಾಟ್ಸಾಪ್ ಕರೆಗಳ ಮೂಲಕ ಬೆದರಿಕೆ ಹಾಕಿ ಹಣ ವಂಚಿಸುವ ಜಾಲ ಸಕ್ರಿಯವಾಗಿದೆ.
ಇಂತಹ ಯಾವುದೇ ಆಮಿಷ ಅಥವಾ ಬೆದರಿಕೆ ಕರೆಗಳಿಗೆ ಕಿವಿಗೊಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಒಂದು ವೇಳೆ ಯಾರಾದರೂ ಸೈಬರ್ ವಂಚನೆಗೆ ಒಳಗಾದಲ್ಲಿ ತಕ್ಷಣವೇ 1930 ಉಚಿತ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿ ದೂರು ನೋಂದಾಯಿಸಬೇಕೆಂದು ಇಲಾಖೆ ತಿಳಿಸಿದೆ.





Leave a comment