Home ಕ್ರೈಂ ನ್ಯೂಸ್ ಬಿ‌ಸಿ‌ಐ ಅಧ್ಯಕ್ಷ ಮನನ್ ಮಿಶ್ರಾ ರಾಜೀನಾಮೆಗೆ ‘ಲೀಗಲ್ ಕಾಕ್‌ರೋಚಸ್’ ಪಟ್ಟು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಬಿ‌ಸಿ‌ಐ ಅಧ್ಯಕ್ಷ ಮನನ್ ಮಿಶ್ರಾ ರಾಜೀನಾಮೆಗೆ ‘ಲೀಗಲ್ ಕಾಕ್‌ರೋಚಸ್’ ಪಟ್ಟು!

Share
ಬಿ‌ಸಿ‌ಐ
Share

ನವದೆಹಲಿ: NALSAR Law University 2026ರ ಬ್ಯಾಚ್‌ ವಿದ್ಯಾರ್ಥಿಗಳ ನೋಂದಣಿ ತಡೆಹಿಡಿದು ಬಳಿಕ ಆದೇಶ ಹಿಂಪಡೆದಿದ್ದ Bar Council of India (ಬಿ‌ಸಿ‌ಐ ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ವಿರುದ್ಧ ಕಾನೂನು ವಲಯದಲ್ಲಿ ಆಕ್ರೋಶ ತೀವ್ರಗೊಂಡಿದೆ.

ಮಿಶ್ರಾ ಅವರ ರಾಜೀನಾಮೆಗೆ ಆಗ್ರಹಿಸಿ ‘ಆಲ್ ಇಂಡಿಯಾ ಯಂಗ್ ಅಡ್ವೋಕೇಟ್ಸ್ ಅಸೋಸಿಯೇಷನ್’ ಕರೆ ನೀಡಿದ್ದ ಪ್ರತಿಭಟನೆಗೆ Cockroach Janta Party (CJP) ಬಹಿರಂಗ ಬೆಂಬಲ ವ್ಯಕ್ತಪಡಿಸಿದೆ.

CJP ವಕ್ತಾರ ಸೌರವ್ ದಾಸ್ ಅವರು ‘ಲೀಗಲ್ ಕಾಕ್‌ರೋಚಸ್’ ಒಗ್ಗೂಡಿ ಜಂಟಿಯಾಗಿ ಬಿ‌ಸಿ‌ಐ ಅಧ್ಯಕ್ಷರ ವಿರುದ್ಧ ಧ್ವನಿ ಎತ್ತಲಿದ್ದಾರೆ ಎಂದು ತಿಳಿಸಿದ್ದಾರೆ.

Bombay Bar Association ಕೂಡಾ ಬಿ‌ಸಿ‌ಐ ಅಧ್ಯಕ್ಷರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಅವರ ರಾಜೀನಾಮೆಗೆ ಒತ್ತಾಯಿಸಿದೆ. ವಿದ್ಯಾರ್ಥಿಗಳ ಹಾಗೂ ಯುವ ವಕೀಲರ ಹಕ್ಕುಗಳನ್ನು ರಕ್ಷಿಸಲು ಮತ್ತು ಉತ್ತರದಾಯಿತ್ವವನ್ನು ಕಾಯ್ದುಕೊಳ್ಳಲು ಈ ಹೋರಾಟ ಅನಿವಾರ್ಯ ಎಂದು CJP ಪ್ರತಿಪಾದಿಸಿದೆ.

Share

Leave a comment

Leave a Reply

Your email address will not be published. Required fields are marked *