ದಾವಣಗೆರೆ: ಭಾರತೀಯ ಜನತಾ ಪಾರ್ಟಿ ದಾವಣಗೆರೆ ಜಿಲ್ಲಾ ಮಹಿಳಾ ಮೋರ್ಚಾಗೆ ನೂತನವಾಗಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಧ್ಯಕ್ಷೆಯಾಗಿ ಚೇತನಾ ಶಿವಕುಮಾರ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶಕುಂತಲಮ್ಮ, ದ್ರಾಕ್ಷಾಯಣಿ ಅಂದಪ್ಪ, ಲೀಲಾವತಿ, ಅರುಣಾ ಬಾಬು, ಉಮಾ ರಾಜಪ್ಪ ಎಸ್, ಸವಿತಾ ಮಹೇಶ್ ಹುಡೇದ್, ಸುಧಾ ಸೋಳಂಕಿ, ಕವಿತಾ ಕಲ್ಲೇಶಪ್ಪ, ಸೀಮಾ ಸತೀಶ್ ಮತ್ತು ರೇಖಾ ರಾಜು, ಪ್ರಧಾನ ಕಾರ್ಯದರ್ಶಿಯಾಗಿ ಆರ್. ಎಲ್. ದೇವಿರಮ್ಮ ರಾಮಚಂದ್ರಪ್ಪ, ಗೌರಮ್ಮ ಪಾಟೀಲ್ ಮತ್ತು ರೇಣುಕಮ್ಮ ಕೃಷ್ಣ ನೇಮಕಗೊಂಡಿದ್ದಾರೆ.
ಕೋಶಾಧ್ಯಕ್ಷರಾಗಿ ರೇಖಾ ರಮೇಶ್, ಸಾಮಾಜಿಕ ಜಾಲತಾಣ ಪ್ರಮುಖರಾಗಿ ನೀತಾ ನಂದೀಶ್, ಮಾಧ್ಯಮ ಪ್ರಮುಖರಾಗಿ ಬಿ. ಎಸ್. ಸೃಷ್ಟಿ ಮತ್ತು ರೇಣುಕಮ್ಮ ಬಣಕಾರ್, ಕಾರ್ಯದರ್ಶಿಯಾಗಿ ಭಾಗ್ಯಮ್ಮ, ವೀಣಾ, ನಿರ್ಮಲಾಬಾಯಿ, ಸೌಮ್ಯ ವೀರೇಶ್ ಕುಮಾರ್, ಹೆಚ್. ಬಿ. ಸುಮಾ ಮಂಜುನಾಥ್, ಸಾಕ್ಷಿ ಸಿಂಧೆ, ರೇಖಾ ಶಿವಕುಮಾರ್ ಮತ್ತು ಅಮೃತ ನೇಮಕಗೊಂಡಿದ್ದಾರೆ.
ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಯಾಗಿ ಕುಮಾರಿ ಪ್ರಕೋಷ್ಟ ಪ್ರಮುಖರಾಗಿ ಪ್ರಭಾ, ಪ್ರಶಿಕ್ಷಣ ಪ್ರಮುಖರಾಗಿ ಚಂದ್ರಿಕಾ ಜಗನ್ನಾಥ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ನಾಗರತ್ನ, ಕಮಲ ಬಾಯಿ, ಶಾರದ ರಾಯರ್, ಯಶೋಧ ಉಮೇಶ್, ಅಶ್ವಿನಿ, ಕೆ. ಟಿ. ಜಿ. ಮಂಜುಳ, ಜ್ಯೋತಿ ಬಸಪ್ಪ, ಚಂದ್ರಕಲಾ, ಸವಿತಾ ನಾಯ್ಕ್ ಮತ್ತು ಸುಧಾಮಣಿ ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಎ. ಇ. ನಾಗರಾಜ ಮೇಳಕಟ್ಟೆ ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚೇತನಾ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.





Leave a comment