Home ಕ್ರೈಂ ನ್ಯೂಸ್ ಗೆಳತಿ ಹತ್ಯೆ ಮಾಡಿ ಬಿ.ಟೆಕ್ ಪದವೀಧರ ಪರಾರಿಯಾಗಿದ್ದ: 5 ಲೀಟರ್ ಮದ್ಯದೊಂದಿಗೆ ಲಾಕ್ ಆದ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಗೆಳತಿ ಹತ್ಯೆ ಮಾಡಿ ಬಿ.ಟೆಕ್ ಪದವೀಧರ ಪರಾರಿಯಾಗಿದ್ದ: 5 ಲೀಟರ್ ಮದ್ಯದೊಂದಿಗೆ ಲಾಕ್ ಆದ!

Share
ಗೆಳತಿ
Share

ನೋಯ್ಡಾ/ಕಟಿಹಾರ್: ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದ್ದ ಯುವತಿ ಮಹಕ್ ಅಹ್ಮದ್ ಕೊಲೆ ಪ್ರಕರಣದ ಮುಖ್ಯ ಆರೋಪಿ ರಮನ್ ರಾಜ್‌ನನ್ನು ಬಿಹಾರದ ಪೊಲೀಸರು ಬಂಧಿಸಿದ್ದಾರೆ. ಅಂದ ಹಾಗೆ ಈಕೆಯು ಈತನ ಗೆಳತಿ.

ನೋಯ್ಡಾ ಪೊಲೀಸರ ಕಣ್ಣಿಗೆ ಮಣ್ಣೆರೆಚಿ ಪರಾರಿಯಾಗಿದ್ದ ಆರೋಪಿ, ಬಿಹಾರದಲ್ಲಿ ಅಕ್ರಮವಾಗಿ ಮದ್ಯ ಇಟ್ಟುಕೊಂಡಿದ್ದ ಪ್ರಕರಣದಲ್ಲಿ ಅನಿರೀಕ್ಷಿತವಾಗಿ ಸಿಕ್ಕಿಬಿದ್ದಿದ್ದಾನೆ.

ಆಗಸ್ಟ್ 8 ರಂದು ನೋಯ್ಡಾದ ‘ಬರೌಲಾ ನೆಸ್ಟ್ ರೆಂಟಲ್ ಪನೋರಮಾ’ ಕಟ್ಟಡದಲ್ಲಿರುವ ರಮನ್‌ನ ಬಾಡಿಗೆ ಕೊಠಡಿಯಲ್ಲಿ ಮಹಕ್ ಅಹ್ಮದ್ ಕೊಲೆಯಾಗಿದ್ದರು. ಬಿ.ಟೆಕ್ ಪದವೀಧರನಾಗಿದ್ದ ರಮನ್ ಹಾಗೂ ಮಹಕ್ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದು, ಸ್ನೇಹಿತರಾಗಿದ್ದರು. ಕೊಲೆಯ ನಂತರ ಆರೋಪಿ ಸುಮಾರು ಒಂದು ವಾರದಿಂದ ತಲೆಮರೆಸಿಕೊಂಡಿದ್ದ.

ತನಿಖೆ ನಡೆಸುತ್ತಿದ್ದ ನೋಯ್ಡಾ ಪೊಲೀಸರು ಬಿಹಾರದ ಕಟಿಹಾರ್‌ನ ನಯಾ ಟೋಲಾ ಪ್ರದೇಶದಲ್ಲಿರುವ ಆತನ ಮನೆಗೆ ತಲುಪುವಷ್ಟರಲ್ಲಿ, ಮದ್ಯಪಾನ ನಿಷೇಧವಿರುವ ಬಿಹಾರದಲ್ಲಿ 5 ಲೀಟರ್ ಮದ್ಯದೊಂದಿಗೆ ಕಟಿಹಾರ್ ಪೊಲೀಸರು ಆತನನ್ನು ಬಂಧಿಸಿದ್ದರು. ಸದ್ಯ ನೋಯ್ಡಾ ಪೊಲೀಸರು ಕಟಿಹಾರ್ ತಲುಪಿದ್ದು, ಆರೋಪಿಯನ್ನು ಕಸ್ಟಡಿಗೆ ಪಡೆಯಲು ಪ್ರಕ್ರಿಯೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *