SUDDIKSHANA KANNADA NEWS/ DAVANAGERE/ DATE:24-01-2025
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಎಂಬ ಕುತೂಹಲ ಗರಿಗೆದರಿದೆ. ಅಭಿಯನ ಚಕ್ರವರ್ತಿ, ಕಿಚ್ಚ ಸುದೀಪ್ ನಡೆಸಿಕೊಟ್ಟ 11ನೇ ಸೀಸನ್ ನ ಬಿಗ್ ಬಾಸ್ ಶೋ ಟಿಆರ್ ಪಿಯಲ್ಲೂ ದಾಖಲೆ ಬರೆದಿದೆ. ಕಳೆದ 10 ಸೀಸನ್ ಗೆ ಹೋಲಿಸಿದರೆ 11ನೇ ಸೀಸನ್ ಪಾಪ್ಯುಲರ್ ಆಗಿದೆ.
ಸೀಸನ್ ಆರಂಭಕ್ಕೆ ಮುನ್ನ ಸುದೀಪ್ ಇರುತ್ತಾರೋ ಇಲ್ಲವೋ ಎಂಬ ಗೊಂದಲದಲ್ಲಿ ಶುರುವಾದ ಬಿಗ್ ಬಾಸ್ ಈ ಬಾರಿ ಕೋಟ್ಯಂತರ ಜನರ ಮನ ಗೆದ್ದಿದೆ. ಮನೆ ಮನೆಯಲ್ಲೂ ಮಾತಾಗಿದೆ. ಸುದೀಪ್ ನಡೆಸಿಕೊಟ್ಟ ಪರಿಗೆ ಎಲ್ಲರೂ ನಿಬ್ಬೆರಗಾಗಿದ್ದಾರೆ. ಜೊತೆಗೆ ಇದೇ ನನ್ನ ಕೊನೆಯ ಬಿಗ್ ಬಾಸ್ ಸೀಸನ್ ಎಂದು ಕರುನಾಡ ಚಕ್ರವರ್ತಿ ಸುದೀಪ್ ಘೋಷಿಸಿಯೂ ಆಗಿದೆ. ಇನ್ನೆರಡು ದಿನಗಳಲ್ಲಿ ಬಿಗ್ ಬಾಸ್ ಫಿನಾಲೆ ಇದ್ದು, ಬಿಗ್ ಬಾಸ್ ಯಾರು ಎಂಬ ಚರ್ಚೆಯೂ ಜೋರಾಗಿದೆ.
ಈ ನಡುವೆ ಹನುಮಂತ್ ಇಲ್ಲವೇ ತ್ರಿವಿಕ್ರಮ್ ಬಿಗ್ ಬಾಸ್ ವಿನ್ನರ್ ಆಗಬಹುದು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಬಿಗ್ ಬಾಸ್ ಆಟಕ್ಕೆ ಈ ವಾರ ತೆರೆ ಬೀಳುತ್ತಿದ್ದು, ಗ್ರ್ಯಾಂಡ್ ಫಿನಾಲೆಗೆ ವೇದಿಕೆಯೂ ಸಜ್ಜಾಗಿದೆ. ಶನಿವಾರ ಮತ್ತು ಭಾನುವಾರ ಎರಡು ದಿನ ಮೆಗಾ ಮನರಂಜನೆ ಖಚಿತ. ಅದಕ್ಕೇನೆ ಎರಡು ದಿನವೂ ಸಂಜೆ 6 ಗಂಟೆಗೆ ಬಿಗ್ ಬಾಸ್ ಶೋ ಆರಂಭವಾಗಲಿದೆ. ಅದರ ಝಲಕ್ ಕೊಡುವ ಪ್ರೋಮೋ ಇದೀಗ ಹೊರ ಬಂದಿದೆ. ಇಲ್ಲಿವರೆಗೂ ನಡೆದ 17 ವಾರಗಳ ಒಟ್ಟು ಆಟಕ್ಕೆ ಈಗ ತೆರೆ ಬೀಳುತ್ತಿದೆ. ಈ ಮೂಲಕ ಬಿಗ್ ಬಾಸ್ ಸೀಸನ್-11 ಎಂಡ್ ಆಗುತ್ತಿದೆ. ಈ ಮೂಲಕ ಈ ಸಲ ಯಾರು ಗೆಲ್ತಾರೆ ಅನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ತ್ರಿವಿಕ್ರಮ್ ಗೆಲ್ತಾರಾ? ಉಗ್ರಂ ಮಂಜು ವಿನ್ ಆಗ್ತಾರಾ? ಅಥವಾ ಹನುಮಂತ್ನೇ ಗೆದ್ದು ಬೀಗ್ತಾರಾ? ಈ ಪ್ರಶ್ನೆಗಳ ಸುತ್ತ ಗ್ರ್ಯಾಂಡ್ ಫಿನಾಲೆ ಇದೆ.
ಹೆಚ್ಚು ಕಡಿಮೆ 120 ದಿನಗಳವರೆಗೂ ನಡೆದ ಈ ಒಂದು ಆಟದಲ್ಲಿ 17 ವಾರಗಳೇ ಕಳೆದಿವೆ. ಈ 17 ವಾರದ ಆಟಕ್ಕೆ ತೆರೆ ಬೀಳುತ್ತಿದೆ. ಮನೆ ಒಳಗೆ ಹೋದ ಸದಸ್ಯರಲ್ಲಿ ಕಡೆಯದಾಗಿ 6 ಜನ ಉಳಿದಿದ್ದಾರೆ. ಈ ಆರು ಜನರಲ್ಲಿ ಉಳಿದ ನಾಲ್ಕು ಜನರಲ್ಲಿ ಯಾರು ಮನೆಗೆ ಹೋಗುತ್ತಾರೆ. ವೇದಿಕೆ ಮೇಲೆ ಕಿಚ್ಚನ ಮುಂದೆ ನಿಲ್ಲುವವರು ಯಾರು? ಈ ಪ್ರಶ್ನೆ ಇದ್ದೇ ಇದೆ.
ಕೊನೆ ವಾರದಲ್ಲಿ ತ್ರಿವಿಕ್ರಮ್ ಜಾಸ್ತಿನೇ ಆ್ಯಕ್ಟೀವ್ ಆಗಿದ್ದಾರೆ. ಟಾಸ್ಕ್ ಬಿಟ್ರೆ ಮಾತೇ ಆಡದ ತ್ರಿವಿಕ್ರಮ್ ಈಗ ಹೆಚ್ಚು ಮಾತ್ ಆಡುತ್ತಿದ್ದಾರೆ. ಇದನ್ನ ನೋಡಿದ್ರೆ, ತ್ರಿವಿಕ್ರಮ್ ಗೆಲುವು ಗ್ಯಾರಂಟಿ ಅನ್ನುವ ಭಾವನೆ ಕೂಡ ಮೂಡುತ್ತಿದೆ. ಈ ನಡುವೆ ಇನ್ನೂ ನಾಲ್ಕು ಜನ ಇದ್ದಾರೆ ಅಲ್ವೇ? ಉಗ್ರಂ ಮಂಜು ಚೆನ್ನಾಗಿಯೇ ಆಡಿದ್ದಾರೆ. ಇಡೀ ಶೋದಲ್ಲಿ ಮಂಜಣ್ಣನ ಅಬ್ಬರ ಹೆಚ್ಚಾಗಿಯೇ ಇದೆ. ಗೌತಮಿ ಜೊತೆಗಿನ ದೋಸ್ತಿಯಿಂದ ಮಂಜಣ್ಣನ ಓಟದಲ್ಲಿ ಒಂದಷ್ಟು ವ್ಯತ್ಯಾಸ ಆಗಿರೋದು ಸತ್ಯ. ಆದರೆ, ಆಟ ಅಂತ ಬಂದ್ರೆ ಮಂಜು ಕೂಡ ಜೋರಾಗಿಯೇ ಆಡಿದ್ದಾರೆ.
ಹನುಮಂತ್ ವಿನ್ ಆಗುತ್ತಾರೆ. ಉಗ್ರಂ ಮಂಜು ಇಲ್ವೇ ತ್ರಿವಿಕ್ರಮ್ ರನ್ನರ್ಅಪ್ ಆಗ್ತಾರೆ ಅನ್ನುವ ಮಾತು ಕೇಳಿ ಬರುತ್ತಿದೆ. ಮೋಕ್ಷಿತಾ ಪೈ ಏನು? ರಜತ್ ಕಿಶನ್ ಚೆನ್ನಾಗಿಯೇ ಆಡಿದ್ದಾರೆ ಅಲ್ವೇ? ಹೌದು, ಈ ಒಂದಷ್ಟು ಪ್ರಶ್ನೆಗಳೂ ಇವೆ. ಮೋಕ್ಷಿತಾ ಪೈ ತಮ್ಮದೇ ಹಾದಿಯಲ್ಲಿ ಆಟ ಆಡಿದ್ದಾರೆ.