Home ದಾವಣಗೆರೆ ಅನನ್ಯಾ ರಾಜ್ ಧೈರ್ಯವಂತೆ, ರಾಣಿಯಂತೆ ಬಾಳಿದಳು: ಒಂದು ವರ್ಷದಿಂದಲೂ ಏನಾಗಿತ್ತು ಈ ಮನಮೋಹಕ ಚೆಲುವೆಗೆ?
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಅನನ್ಯಾ ರಾಜ್ ಧೈರ್ಯವಂತೆ, ರಾಣಿಯಂತೆ ಬಾಳಿದಳು: ಒಂದು ವರ್ಷದಿಂದಲೂ ಏನಾಗಿತ್ತು ಈ ಮನಮೋಹಕ ಚೆಲುವೆಗೆ?

Share
ಅನನ್ಯಾ ರಾಜ್
Share

ಮುಂಬೈ: ಬಾಲಿವುಡ್ ನಟಿ ಅನನ್ಯಾ ರಾಜ್ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ. ನಟರು, ಸಹನಟರು, ಸಿನಿಮಾ ಕಾರ್ಮಿಕ ಮಂಡಳಿ ಸದಸ್ಯರು ಸೇರಿದಂತೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. 

ಬಾಲಿವುಡ್ ಹಾಗೂ ಪ್ರಾದೇಶಿಕ ಚಿತ್ರರಂಗದ ಉದಯೋನ್ಮುಖ ನಟಿ ಅನನ್ಯ ರಾಜ್ (27) ಜುಲೈ 15, 2026 ರಂದು ನಿದ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಕುಟುಂಬಸ್ಥರು ಅವರ ಅಗಲಿಕೆಯ ಸುದ್ದಿಯನ್ನು ಆಗಸ್ಟ್ 16 ರಂದು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.

ಅನನ್ಯ ರಾಜ್ ಅವರ ನಿಧನಕ್ಕೆ ಆಲ್ ಇಂಡಿಯನ್ ಸಿನೆ ವರ್ಕರ್ಸ್ ಅಸೋಸಿಯೇಷನ್ ತೀವ್ರ ಸಂತಾಪ ವ್ಯಕ್ತಪಡಿಸಿದೆ. “ಅನನ್ಯ ಸಣ್ಣ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಧೈರ್ಯವಂತ ಹುಡುಗಿ. ಆಕೆ ರಾಣಿಯಂತೆ ಬಾಳಿದಳು” ಎಂದು ಅವರ ಕುಟುಂಬದ ಮಾತುಗಳನ್ನು ಸ್ಮರಿಸುತ್ತಾ ಸಂಘಟನೆಯು ಶ್ರದ್ಧಾಂಜಲಿ ಸಲ್ಲಿಸಿದೆ.

ಹಿಂದಿಯ ‘7 ಅವರ್ಸ್ ಟು ಗೋ’ (2016), ‘ದಿ ಫೈನಲ್ ಎಕ್ಸಿಟ್’ (2017), ‘ಗೋಸ್ಟ್’ (2019) ಹಾಗೂ ತೆಲುಗಿನ ‘ಥಗ್ಗೇಡೆ ಲೀ’ (2022) ಚಿತ್ರಗಳಲ್ಲಿ ಅನನ್ಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಯುವ ನಟಿಯ ಅಕಾಲಿಕ ಮರಣಕ್ಕೆ ಭಾರತೀಯ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles