Home ದಾವಣಗೆರೆ 27ನೇ ವಯಸ್ಸಿಗೆ ಬಾಲಿವುಡ್ ನಟಿ ಅನನ್ಯಾ ರಾಜ್ ನಿದ್ರೆಯಲ್ಲೇ ಕೊನೆಯುಸಿರು: ಸತ್ತು ಹೋದ ಒಂದು ತಿಂಗಳ ಬಳಿಕ ಕುಟುಂಬ ಮಾಹಿತಿ ನೀಡಿದ್ಯಾಕೆ?
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರುಸಿನಿಮಾ

27ನೇ ವಯಸ್ಸಿಗೆ ಬಾಲಿವುಡ್ ನಟಿ ಅನನ್ಯಾ ರಾಜ್ ನಿದ್ರೆಯಲ್ಲೇ ಕೊನೆಯುಸಿರು: ಸತ್ತು ಹೋದ ಒಂದು ತಿಂಗಳ ಬಳಿಕ ಕುಟುಂಬ ಮಾಹಿತಿ ನೀಡಿದ್ಯಾಕೆ?

Share
ಅನನ್ಯಾ ರಾಜ್
Share

ಮುಂಬೈ: ಬಾಲಿವುಡ್, ತೆಲುಗು ಸೇರಿದಂತೆ ಪ್ರಾದೇಶಿಕ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದ ಯುವ ನಟಿ ಅನನ್ಯಾ ರಾಜ್ (27) ಜುಲೈ 15 ರಂದು ನಿಧನರಾಗಿದ್ದಾರೆ.

ಅವರು ಮಲಗಿದ್ದಾಗ ನಿದ್ರೆಯಲ್ಲೇ ಶಾಂತಿಯುತವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬಸ್ಥರು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸುಮಾರು ಒಂದು ತಿಂಗಳ ಬಳಿಕ ಮಾಹಿತಿ ನೀಡಿದ್ದಾರೆ.

ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಅನನ್ಯಾ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಕಷ್ಟದ ಸಮಯದಲ್ಲಿ ಕುಟುಂಬದ ಗೌಪ್ಯತೆಯನ್ನು ಕಾಯ್ದುಕೊಳ್ಳಲು ಅವರು ವಿನಂತಿಸಿದ್ದಾರೆ.

2016ರಲ್ಲಿ ‘7 ಅವರ್ಸ್ ಟು ಗೋ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ಅನನ್ಯಾ, ‘ದಿ ಫೈನಲ್ ಎಕ್ಸಿಟ್’, ‘ಘೋಸ್ಟ್’, ತೆಲುಗು ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles