Home ದಾವಣಗೆರೆ “ರಾಧಿಕಾಗೆ ಖುಷಿಯಾಗಲ್ಲ, ಆದ್ರೆ ನನ್ನ ಮೇಲೆ ನಂಬಿಕೆ ಇದೆ”: ‘ಟಾಕ್ಸಿಕ್’ ಬೋಲ್ಡ್ ದೃಶ್ಯಗಳ ಬಗ್ಗೆ ಯಶ್ ಮುಕ್ತ ಮಾತು!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

“ರಾಧಿಕಾಗೆ ಖುಷಿಯಾಗಲ್ಲ, ಆದ್ರೆ ನನ್ನ ಮೇಲೆ ನಂಬಿಕೆ ಇದೆ”: ‘ಟಾಕ್ಸಿಕ್’ ಬೋಲ್ಡ್ ದೃಶ್ಯಗಳ ಬಗ್ಗೆ ಯಶ್ ಮುಕ್ತ ಮಾತು!

Share
ಯಶ್
Share

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’  ಸಿನಿಮಾದ ಟೀಸರ್ ಹಾಗೂ ಗೀತೆಗಳಲ್ಲಿನ ಬೋಲ್ಡ್ ಮತ್ತು ನಿಕಟ ದೃಶ್ಯಗಳು ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಈ ಕುರಿತು ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಪಷ್ಟನೆ ನೀಡಿರುವ ಯಶ್, ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರ ಪ್ರತಿಕ್ರಿಯೆ ಹಾಗೂ ಸಿನಿಮಾದ ಅಗತ್ಯತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಯಶ್ ಮಾತನಾಡಿ, “ಯಾವುದೇ ಪತ್ನಿಗೆ ಅಥವಾ ಸಂಗಾತಿಗೆ ತಮ್ಮ ಪತಿ ತೆರೆಮೇಲೆ ಇಂತಹ ದೃಶ್ಯಗಳಲ್ಲಿ ನಟಿಸುವುದನ್ನು ನೋಡಿದಾಗ ಮುಜುಗರ ಅಥವಾ ಅಸಮಾಧಾನವಾಗುವುದು ಸಹಜ. ರಾಧಿಕಾ ಕೂಡ ಖಂಡಿತವಾಗಿಯೂ ಈ ದೃಶ್ಯಗಳನ್ನು ನೋಡಿ ಖುಷಿಪಡುವುದಿಲ್ಲ, ಆದರೆ ನನ್ನ ಮೇಲೆ ಆಕೆಗೆ ಸಂಪೂರ್ಣ ನಂಬಿಕೆ ಇದೆ. ಆಕೆಯೂ ಒಬ್ಬ ಕಲಾವಿದೆಯಾಗಿದ್ದು, ಇದು ನನ್ನ ವೃತ್ತಿ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾಳೆ. ಅಲ್ಲಿ ನಟಿಸುತ್ತಿರುವುದು ಆಕೆಯ ಗಂಡನಲ್ಲ, ಒಬ್ಬ ನಟ” ಎಂದು ತಿಳಿಸಿದ್ದಾರೆ.

ತಮ್ಮ ಕಂಫರ್ಟ್ ಝೋನ್‌ನಿಂದ ಹೊರಬಂದು ಈ ದೃಶ್ಯಗಳಲ್ಲಿ ಅಭಿನಯಿಸಿರುವುದಾಗಿ ಹೇಳಿದ ಯಶ್, “ಕಥೆಗೆ ಇದು ಅತ್ಯಂತ ಅಗತ್ಯವಾಗಿತ್ತು. ಜನಪ್ರಿಯತೆಗಾಗಿ ಅಥವಾ ಗಿಮಿಕ್‌ಗಾಗಿ ಇದನ್ನು ಮಾಡಿಲ್ಲ, ಯುವ ಪೀಳಿಗೆಗೆ (Gen Z) ತಲುಪುವ ಮುಖ್ಯ ವಿಷಯಗಳು ಈ ಚಿತ್ರದಲ್ಲಿದ್ದು, ಇದು ಕಥೆಯ ಭಾಗವಾಗಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಸೇರಿದಂತೆ ಪ್ರಮುಖ ತಾರಾಗಣವಿದೆ.

Share

Leave a comment

Leave a Reply

Your email address will not be published. Required fields are marked *

Related Articles