ದಾವಣಗೆರೆ: ದಾವಣಗೆರೆ ನಗರದ ವಿವಿಧ ರಸ್ತೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಸುದೀರ್ಘ ಅವಧಿಯಿಂದ ಅನಾಮಧೇಯ ಹಾಗೂ ಅನುಪಯುಕ್ತವಾಗಿ ನಿಲ್ಲಿಸಲಾಗಿರುವ ವಾಹನಗಳ ವಿರುದ್ಧ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಸಮರ ಸಾರಿದೆ.
ನಗರದ ರಸ್ತೆಗಳನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಬೃಹತ್ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ದಾವಣಗೆರೆ ನಗರದ ಉತ್ತರ ಮತ್ತು ದಕ್ಷಿಣ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರಸ್ತೆ ಬದಿಗಳಲ್ಲಿ ಬ পে ಬಿದ್ದಿದ್ದ 95 ಅನಾಮಧೇಯ ವಾಹನಗಳನ್ನು ಪತ್ತೆ ಹಚ್ಚಿರುವ ಪೊಲೀಸರು, ಅವುಗಳ ಮಾಲೀಕರಿಗೆ ಅಧಿಕೃತ ನೋಟೀಸ್ ಜಾರಿ ಮಾಡಿದ್ದಾರೆ.
7 ದಿನಗಳ ಗಡುವು: ತಪ್ಪಿದರೆ ಕಠಿಣ ಕಾನೂನು ಕ್ರಮ!
ಪೋಲಿಸ್ ನೋಟೀಸ್ ನೀಡಿದ 7 ದಿನಗಳ ಒಳಗಾಗಿ ಸಂಬಂಧಪಟ್ಟ ವಾಹನ ಮಾಲೀಕರು ತಮ್ಮ ವಾಹನಗಳನ್ನು ಜಾಗದಿಂದ ತೆರವುಗೊಳಿಸಬೇಕಾಗಿದೆ. ಒಂದು ವೇಳೆ ನೀಡಿದ ಕಾಲಾವಕಾಶದಲ್ಲಿ ವಾಹನಗಳನ್ನು ತೆರವುಗೊಳಿಸದಿದ್ದಲ್ಲಿ:
ಕಲಂ 127 (ಭಾರತೀಯ ಮೋಟಾರು ವಾಹನ ಕಾಯ್ದೆ 1988) ಮತ್ತು ಕಲಂ 92(ಸಿ) (ಕರ್ನಾಟಕ ಪೊಲೀಸ್ ಕಾಯ್ದೆ) ರನ್ವಯ ಸದರಿ ವಾಹನಗಳನ್ನು “ಪರಿತ್ಯಕ್ತ/ಅನುಪಯುಕ್ತ” ಎಂದು ಪರಿಗಣಿಸಲಾಗುವುದು.
ಪೊಲೀಸರು ಟೋಯಿಂಗ್ (Towing) ಯಂತ್ರಗಳ ಮೂಲಕ ವಾಹನಗಳನ್ನು ವಶಪಡಿಸಿಕೊಂಡು ತೆರವುಗೊಳಿಸಲಿದ್ದಾರೆ.
ವಶಪಡಿಸಿಕೊಂಡ ವಾಹನಗಳನ್ನು ಸರಕಾರಿ ನಿಯಮಾವಳಿಗಳ ಪ್ರಕಾರ ಸಾರ್ವಜನಿಕ ಹರಾಜು ಅಥವಾ ಸೂಕ್ತ ವಿಲೆವಾರಿ ಮಾಡಲು ಕಾನೂನು ಕ್ರಮ ಜರುಗಿಸಲಾಗುವುದು.
ಸಾರ್ವಜನಿಕರು ಹಾಗೂ ವಾಹನ ಮಾಲೀಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ತಕ್ಷಣವೇ ತಮ್ಮ ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ದಾವಣಗೆರೆ ಜಿಲ್ಲಾ ಪೊಲೀಸರು ವಿನಂತಿಸಿದ್ದಾರೆ.





Leave a comment