ಇಸ್ಲಾಮಾಬಾದ್/ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಜೀವಕ್ಕೆ ಕಂಟಕ ಎದುರಾಗಿದೆ ಎಂಬ ವದಂತಿಗಳು ಮತ್ತೆ ಕಾಡ್ಗಿಚ್ಚಿನಂತೆ ಹಬ್ಬಿವೆ.
ರಾವಲ್ಪಿಂಡಿಯ ಜನರಲ್ ಹೆಡ್ಕ್ವಾರ್ಟರ್ಸ್ನ (GHQ) ಹಿರಿಯ ಸೇನಾಧಿಕಾರಿಗಳು ನೀಡಿದ ಮಾಹಿತಿಯಂತೆ, ಅದಿಯಾಲಾ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರು ಜೀವಂತವಾಗಿಲ್ಲದಿರಬಹುದು ಎಂದು ಅಮೆರಿಕ ಮೂಲದ ಪಾಕಿಸ್ತಾನಿ ಪತ್ರಕರ್ತ ವಜಾಹತ್ ಸಯೀದ್ ಖಾನ್ ಬಾಂಬ್ ಸಿಡಿಸಿದ್ದಾರೆ.
ಈ ವರದಿ ಹೊರಬಿದ್ದ ಬೆನ್ನಲ್ಲೇ ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಭಾರೀ ತಲಾಶ್ ಹಾಗೂ ಆತಂಕ ಶುರುವಾಗಿದೆ.
ಆಗಸ್ಟ್ 2023 ರಿಂದ ಜೈಲುವಾಸ ಅನುಭವಿಸುತ್ತಿರುವ 73 ವರ್ಷದ ಇಮ್ರಾನ್ ಖಾನ್, ತಮ್ಮ ಕುಟುಂಬ, ವೈದ್ಯರು ಮತ್ತು ವಕೀಲರ ಭೇಟಿಯಿಂದ ವಂಚಿತರಾಗಿದ್ದಾರೆ. ಖಾನ್ ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿದ್ದು, ಬಲಗಣ್ಣಿನ ಶೇಕಡಾ 85 ರಷ್ಟು ದೃಷ್ಟಿ ಕಳೆದುಕೊಂಡಿದ್ದಾರೆ ಎಂಬ ಆತಂಕಕಾರಿ ಸುದ್ದಿಯೂ ಕೇಳಿಬಂದಿದೆ. ಈ ವಿಚಾರವಾಗಿ ಅಮೆರಿಕದ 13 ಸಂಸದರು ಸ್ಟೇಟ್ ಸೆಕ್ರೆಟರಿ ಮಾರ್ಕೋ ರೂಬಿಯೋ ಅವರಿಗೆ ಪತ್ರ ಬರೆದು, ಪಾಕಿಸ್ತಾನ ಸರ್ಕಾರದ ಮೇಲಿನ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಯಿಂದ ಕೆರಳಿರುವ ಇಮ್ರಾನ್ ಖಾನ್ ಅವರ ಪಿಟಿಐ (PTI) ಪಕ್ಷವು ಬೃಹತ್ ದಂಗೆಗೆ ಕರೆ ನೀಡಿದೆ. ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿ ಮಾತನಾಡಿ, “ಸುಮಾರು 20 ಲಕ್ಷಕ್ಕೂ ಹೆಚ್ಚು ಯುವಕರು ಬೀದಿಗಿಳಿಯಲು ಸಜ್ಜಾಗಿದ್ದಾರೆ” ಎಂದು ಎಚ್ಚರಿಸಿದ್ದಾರೆ. ಇಮ್ರಾನ್ ಖಾನ್ ಅವರ ಭೇಟಿಗೆ ಅವಕಾಶ ನೀಡದಿದ್ದರೆ ಸೆಪ್ಟೆಂಬರ್ 27 ರಂದು ಇಸ್ಲಾಮಾಬಾದ್ ಚಲೋ ಮತ್ತು ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಪಿಟಿಐ ಘೋಷಿಸಿದೆ.
- Adiala Jail
- General Headquarters Rawalpindi
- Imran Khan
- Imran Khan Death Claim
- Imran Khan Health News
- Islamabad March 2026
- Pakistan Politics
- PTI Protest
- Sohail Afridi
- Wajahat Saeed Khan
- ಅದಿಯಾಲಾ ಜೈಲು
- ಅಸಿಮ್ ಮುನೀರ್
- ಇಮ್ರಾನ್ ಖಾನ್
- ಇಮ್ರಾನ್ ಖಾನ್ ಸಾವು ವದಂತಿ
- ಇಸ್ಲಾಮಾಬಾದ್ ಚಲೋ
- ಖೈಬರ್ ಪಖ್ತುಂಖ್ವಾ
- ಪಾಕಿಸ್ತಾನ ರಾಜಕೀಯ
- ಪಾಕಿಸ್ತಾನ ಸುದ್ದಿ
- ಪಿಟಿಐ ಪ್ರತಿಭಟನೆ
- ವಜಾಹತ್ ಸಯೀದ್ ಖಾನ್





Leave a comment