ಮುಂಬೈ: ಭಾರತದ ಪ್ರಮುಖ ಉದ್ಯಮ ಸಮೂಹವಾದ ಟಾಟಾ ಗ್ರೂಪ್ನ ಮಾತೃ ಸಂಸ್ಥೆ ‘ಟಾಟಾ ಸನ್ಸ್’ (Tata Sons) ಕಾರ್ಯಾಧ್ಯಕ್ಷ ಎನ್. ಚಂದ್ರಶೇಖರನ್ ಅವರು ತಮ್ಮ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಸಲ್ಲಿಸಿದ್ದರೂ ಸಹ, ತಮ್ಮ ಪ್ರಸ್ತುತ ಅಧಿಕಾರಾವಧಿ ಪೂರ್ಣಗೊಳ್ಳುವ ಮುಂಬರುವ ಫೆಬ್ರವರಿ ತಿಂಗಳವರೆಗೆ ಅವರು ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಆಗಸ್ಟ್ 18 ರಂದು ನಡೆಯಲಿರುವ ಟಾಟಾ ಸನ್ಸ್ ವಾರ್ಷಿಕ ಮಹಾಸಭೆಗೂ (AGM) ಮುನ್ನವೇ ಈ ಮಹತ್ವದ ಬೆಳವಣಿಗೆ ನಡೆದಿದೆ.
ರಾಜೀನಾಮೆಗೆ ಮುಖ್ಯ ಕಾರಣವೇನು?
ಟಾಟಾ ಸನ್ಸ್ನ 66% ಶೇರುಗಳನ್ನು ಹೊಂದಿರುವ ಧರ್ಮಾದಾಯ ಸಂಸ್ಥೆ ‘ಟಾಟಾ ಟ್ರಸ್ಟ್ಸ್’ ಮತ್ತು ‘ಟಾಟಾ ಸನ್ಸ್’ ಮಂಡಳಿಯ ನಡುವೆ ಮೂಡಿದ ಅಭಿಪ್ರಾಯ ಭೇದವೇ ಈ ರಾಜೀನಾಮೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಚಂದ್ರಶೇಖರನ್ ಅವರ ಮರುನೇಮಕಕ್ಕೆ ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ವಿರೋಧ ವ್ಯಕ್ತಪಡಿಸಿದ್ದರು.
ವಿಶೇಷವಾಗಿ, ಟಾಟಾ ಸನ್ಸ್ ಸಂಸ್ಥೆಯನ್ನು ಸಾರ್ವಜನಿಕ ಶೇರು ಮಾರುಕಟ್ಟೆಗೆ (Stock Market Listing) ತರದೇ ಇರುವುದು ಹಾಗೂ ಮಂಡಳಿಯ ಪ್ರಾತಿನಿಧ್ಯದ ವಿಚಾರದಲ್ಲಿ ಚಂದ್ರಶೇಖರನ್ ಅವರು ಟಾಟಾ ಟ್ರಸ್ಟ್ಸ್ ನೀಡಿದ ಕಟ್ಟುನಿಟ್ಟಿನ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿರಲಿಲ್ಲ.
ಚಂದ್ರಶೇಖರನ್ ಹೇಳಿಕೆ:
“ನಾನು ಟಾಟಾ ಗ್ರೂಪ್ನಲ್ಲಿ 40 ವರ್ಷಗಳ ವೃತ್ತಿಜೀವನವನ್ನು ಪೂರ್ಣಗೊಳಿಸಿದ್ದೇನೆ. ಕಳೆದ ಒಂದು ದಶಕದಿಂದ ಟಾಟಾ ಸನ್ಸ್ ಮುನ್ನಡೆಸಿರುವುದು ನನಗೆ ದೊರೆತ ಗೌರವ. ಸಂಸ್ಥೆಯ ಮುಂದಿನ ನಾಯಕತ್ವದ ಹಸ್ತಾಂತರ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಮಂಡಳಿಗೆ ಮನವಿ ಮಾಡಿದ್ದೇನೆ” ಎಂದು ಚಂದ್ರಶೇಖರನ್ ತಿಳಿಸಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ತಲ್ಲಣ:
ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಟಾಟಾ ಸಮೂಹದ ವಿವಿಧ ಕಂಪನಿಗಳ ಷೇರು ಮೌಲ್ಯದಲ್ಲಿ ಶೇಕಡಾ 4 ರಷ್ಟು ಕುಸಿತ ಕಂಡುಬಂದಿದೆ. ಪ್ರಮುಖವಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಷೇರುಗಳು ಶೇ. 4.1 ರಷ್ಟು ಹಾಗೂ ಟಾಟಾ ಮೋಟಾರ್ಸ್ ಷೇರುಗಳು ಶೇ. 2.8 ರಷ್ಟು ಕುಸಿತ ಕಂಡಿವೆ.
- Indian Corporate news
- N Chandrasekaran Resignation Kannada
- N Chandrasekaran resigns
- Noel Tata vs Chandrasekaran
- Tata Group stocks fall
- Tata Sons AGM 2026
- Tata Sons Chairman resignation
- Tata Trusts dispute
- TCS shares down
- ಎನ್ ಚಂದ್ರಶೇಖರನ್ ರಾಜೀನಾಮೆ
- ಟಾಟಾ ಗ್ರೂಪ್ ಸುದ್ದಿಗಳು
- ಟಾಟಾ ಟ್ರಸ್ಟ್ಸ್
- ಟಾಟಾ ಶೇರು ಮಾರುಕಟ್ಟೆ
- ಟಾಟಾ ಸನ್ಸ್
- ನೋಯೆಲ್ ಟಾಟಾ
- ಬಿಸಿನೆಸ್ ಸುದ್ದಿ





Leave a comment