ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಬಿಲ್ಡಿಂಗ್ನ ಟೆರೇಸ್ನಲ್ಲಿ ವಾಕಿಂಗ್ ಮಾಡುತ್ತಿದ್ದ 23 ವರ್ಷದ ಇಂಟೀರಿಯರ್ ಡಿಸೈನಿಂಗ್ ವಿದ್ಯಾರ್ಥಿನಿಯ ಮೇಲೆ ಸೆಕ್ಯುರಿಟಿ ಗಾರ್ಡ್ ಒಬ್ಬ ಭೀಕರವಾಗಿ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಕೃತ್ಯ ಎಸಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿ ಸ್ಥಳಕ್ಕೆ ಕರೆದೊಯ್ಯುವಾಗ ಆತ ಪರಾರಿಯಾಗಲು ಯತ್ನಿಸಿದ ಕಾರಣ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆಯ ಹಿನ್ನೆಲೆ:
ಆಗಸ್ಟ್ 8 ರ ಸಂಜೆ ಸುಮಾರು 7:22 ಕ್ಕೆ, ಆನಂದನಗರ ಪ್ರದೇಶದಲ್ಲಿರುವ ಪಿಜಿ ವಸತಿಯ ಭದ್ರತಾ ಸಿಬ್ಬಂದಿ ಧರಮ್ ಸಿಂಗ್ (27) ಲಿಫ್ಟ್ ಮೂಲಕ ಐದನೇ ಮಹಡಿಗೆ ತೆರಳಿ ನಂತರ ಮೆಟ್ಟಿಲುಗಳ ಮೂಲಕ ಟೆರೇಸ್ಗೆ ಹೋಗಿದ್ದಾನೆ. ಅಲ್ಲಿ ಫೋನ್ನಲ್ಲಿ ಮಾತನಾಡುತ್ತಾ ವಾಕಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ತಡೆದು, ಲೈಂಗಿಕ ಸಂಪರ್ಕಕ್ಕೆ ಪಟ್ಟು ಹಿಡಿದಿದ್ದಾನೆ. ವಿದ್ಯಾರ್ಥಿನಿ ನಿರಾಕರಿಸಿದಾಗ ಆಕೆಯ ಕತ್ತಿಗೆ ವೈರ್ ಬಿಗಿದು ಶಬ್ದ ಮಾಡದಂತೆ ಮಾಡಿ, ಸುಮಾರು ಒಂದು ಗಂಟೆಗಳ ಕಾಲ ಅಮಾನವೀಯವಾಗಿ ಅತ್ಯಾಚಾರ ಎಸಗಿದ್ದಾನೆ.
ನಂತರ ಸಂತ್ರಸ್ತೆಯ ಮೊಬೈಲ್ ಫೋನ್ ಕಸಿದುಕೊಂಡು ಟೆರೇಸ್ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಪರಾರಿಯಾಗಿದ್ದ. ಸಂತ್ರಸ್ತೆ ಕಿರುಚಾಡಿದ ಶಬ್ದ ಕೇಳಿ ಕೆಳಗಿನ ಮಹಡಿಯ ನಿವಾಸಿಗಳು ಬಂದು ಆಕೆಯನ್ನು ರಕ್ಷಿಸಿದ್ದಾರೆ.
ಪೊಲೀಸ್ ಶೂಟೌಟ್ ಮತ್ತು ಬಂಧನ:
ಘಟನೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, 10 ವಿಶೇಷ ತಂಡಗಳನ್ನು ರಚಿಸಿ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹೆಬತ್ಪುರ ಬಳಿ ಆರೋಪಿ ಧರಮ್ ಸಿಂಗ್ನನ್ನು ಬಂಧಿಸಿದರು. ನಂತರ ಸಂತ್ರಸ್ತೆಯ ಮೊಬೈಲ್ ಫೋನ್ ರಿಕವರಿಗಾಗಿ ಕರೆದೊಯ್ದಾಗ, ಆರೋಪಿ ಇನ್ಸ್ಪೆಕ್ಟರ್ ಅವರ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ನಡೆದ ನೂಕಾಟದಲ್ಲಿ ಕಾನ್ಸ್ಟೇಬಲ್ಗೆ ಗಾಯವಾಗಿದ್ದು, ಪೊಲೀಸರು ಆರೋಪಿಯ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಸೆಕ್ಯುರಿಟಿ ಏಜೆನ್ಸಿ ಮೇಲೆ ಕ್ರಮ:
ಉತ್ತರ ಪ್ರದೇಶ ಮೂಲದ ಆರೋಪಿ ಧರಮ್ ಸಿಂಗ್ ಕೇವಲ 4 ದಿನಗಳ ಹಿಂದಷ್ಟೇ ‘ಎ1 ಸೆಕ್ಯುರಿಟಿ ಏಜೆನ್ಸಿ’ ಮೂಲಕ ಈ ವಸತಿ ಸಮುಚ್ಛಯಕ್ಕೆ ಕೆಲಸಕ್ಕೆ ಸೇರಿಕೊಂಡಿದ್ದ. ಆತನ ಪೊಲೀಸ್ ವೆರಿಫಿಕೇಷನ್ ಮತ್ತು ಬ್ಯಾಕ್ಗ್ರೌಂಡ್ ಚೆಕ್ ಮಾಡದೆ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಭದ್ರತಾ ಸಂಸ್ಥೆಯ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಬಿಎನ್ಎಸ್ (BNS) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
- A1 security agency
- Ahmedabad police encounter
- Ahmedabad rape case
- Anandnagar police station
- BNS section rape case
- Dharam Singh security guard
- Gujarat crime news
- interior design student assault
- PG terrace assault
- ಅಹಮದಾಬಾದ್ ಅತ್ಯಾಚಾರ ಪ್ರಕರಣ
- ಅಹಮದಾಬಾದ್ ಕ್ರೈಮ್ ನ್ಯೂಸ್
- ಆನಂದನಗರ ಸುದ್ದಿ
- ಧರಮ್ ಸಿಂಗ್ ಬಂಧನ
- ಪಿಜಿ ವಿದ್ಯಾರ್ಥಿನಿ ಅತ್ಯಾಚಾರ
- ಪೊಲೀಸ್ ಶೂಟೌಟ್
- ಬಿಎನ್ಎಸ್ ಕೇಸ್
- ಭದ್ರತಾ ಸಂಸ್ಥೆ ನಿರ್ಲಕ್ಷ್ಯ
- ಸೆಕ್ಯುರಿಟಿ ಗಾರ್ಡ್ ಕೃತ್ಯ





Leave a comment