ಲಖನೌ: 25 ಮದುವೆಯಾಗಿ ತನ್ನ ಮಗಳನ್ನೂ ವಿವಾಹವಾಗಿ ವಂಚಿಸಿರುವ ಆರೋಪಿ ಮತ್ತು ಆತನ ತಂದೆಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ಸಂತ್ರಸ್ತೆ ತಂದೆ ಹಾಗೂ ಬಿಜೆಪಿ ಶಾಸಕ ಜ್ಞಾನ ತಿವಾರಿ ಜ್ಞಾನ ತಿವಾರಿ ಆಗ್ರಹಿಸಿದ್ದಾರೆ.
ಮದುವೆಯಾದ ಸುಮಾರು ಎರಡು ಮುಕ್ಕಾಲು ವರ್ಷಗಳ ನಂತರ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಖರ್ ತಿವಾರಿಯ ನೈಜ ಬಣ್ಣ ಬಯಲಾಗಿದೆ. ಈತ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ನಕಲಿ ಹೆಸರಿನಲ್ಲಿ ಮಹಿಳೆಯರನ್ನು ಪ್ರೀತಿಯ ಬಲೆಗೆ ಬೀಳಿಸಿ, ಸುಮಾರು 25ಕ್ಕೂ ಹೆಚ್ಚು ಮದುವೆಗಳನ್ನಾಗಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
ತೀವ್ರ ಆಕ್ರೋಶ ಹೊರಹಾಕಿದ ಶಾಸಕ:
ವಿಷಯ ತಿಳಿಯುತ್ತಿದ್ದಂತೆ ಶಾಸಕ ಜ್ಞಾನ ತಿವಾರಿ ಆರೋಪಿ ಕುಟುಂಬದೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಂಡು ತಮ್ಮ ಮಗಳನ್ನು ಮನೆಗೆ ಕರೆತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಶಾಸಕರು, ತಮ್ಮ ಕುಟುಂಬಕ್ಕೆ ತೀವ್ರ ಮಾನಸಿಕ ಕಿರುಕುಳ ಹಾಗೂ ಸಾಮಾಜಿಕ ಗೌರವಕ್ಕೆ ಧಕ್ಕೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಜೊತೆಗೆ, ಈ ವಂಚಕರಿಗೆ ಮರಣದಂಡನೆ ಸೇರಿದಂತೆ ಕಠಿಣ ಕಾನೂನು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ನಕಲಿ ಗುರುತುಗಳನ್ನು ಬಳಸಿಕೊಂಡು ಸುಮಾರು 25ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಮಹಾ ವಂಚಕ ಹಾಗೂ ಆತನ ತಂದೆಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಸೇವಾತಾ (Sevata) ಕ್ಷೇತ್ರದ ಬಿಜೆಪಿ ಶಾಸಕ ಜ್ಞಾನ ತಿವಾರಿ (Gyan Tiwari) ಅವರು ನೀಡಿದ ದೂರಿನ ಆಧಾರದ ಮೇಲೆ ರೇಉಸಾ (Reusa) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ಪ್ರಖರ್ ತಿವಾರಿ ಹಾಗೂ ಆತನ ತಂದೆ ಅನುಜ್ ತಿವಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಹಿನ್ನೆಲೆ:
2024ರಲ್ಲಿ ಶಾಸಕ ಜ್ಞಾನ ತಿವಾರಿ ಅವರ ಮಗಳು ಪ್ರಗ್ಯಾ ಅವರೊಂದಿಗೆ ಪ್ರಖರ್ ತಿವಾರಿಯ ಮದುವೆ ನಡೆದಿತ್ತು. ಮದುವೆ ಸಮಯದಲ್ಲಿ ಆರೋಪಿಯ ತಂದೆ ಅನುಜ್ ತಿವಾರಿ, ತಾನು ಮುಂಬೈನ ದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಸುಳ್ಳು ಹೇಳಿ, ತಮ್ಮ ಹಳೆಯ ಕ್ರಿಮಿನಲ್ ಹಿನ್ನೆಲೆಯನ್ನು ಮುಚ್ಚಿಟ್ಟಿದ್ದರು.





Leave a comment