ಬೆಳಗಾವಿ: ಜಿಲ್ಲೆಯಲ್ಲಿ ದಿಗಿಲುಗೊಳಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ₹2 ಕೋಟಿ ರೂಪಾಯಿ ಜೀವವಿಮೆ (Life Insurance) ಹಣಕ್ಕಾಗಿ ಮಾಜಿ ಸೈನಿಕರೊಬ್ಬರನ್ನು ಅವರ ಪತ್ನಿಯೇ ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೃತರ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಮಾಜಿ ಸೈನಿಕ ಸಂದೀಪ್ ಮಾಂಜರಿ (45) ಅವರ ಮೃತದೇಹವನ್ನು ಘಟನೆಯ ಮೂರು ತಿಂಗಳ ನಂತರ ಹೊರತೆಗೆದು (Exhumed) ವಿಧಿವಿಜ್ಞಾನ ಪರೀಕ್ಷೆಗೆ ರವಾನಿಸಿದ್ದಾರೆ.
ಘಟನೆಯ ಹಿನ್ನೆಲೆ:
ಕೆಲ ತಿಂಗಳ ಹಿಂದೆ ದೇವಸ್ಥಾನದ ಜಾತ್ರೆ ಮುಗಿಸಿಕೊಂಡು ಹಿಂತಿರುಗುತ್ತಿದ್ದಾಗ ಸಂದೀಪ್ ಮಾಂಜರಿ ರಸ್ತೆ ಅಪಘಾತಕ್ಕೊಳಗಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಸಾವುನ್ನಪ್ಪಿದ್ದರು.
ಬಯಲಾಯ್ತು ಕೊಲೆ ಸಂಚು:
ಸಂದೀಪ್ ಅವರ ಸಾವಿನ ಕುರಿತು ಕುಟುಂಬಸ್ಥರಿಗೆ ಮೊದಲಿನಿಂದಲೂ ಅನುಮಾನವಿತ್ತು. ತನಿಖೆ ಚುರುಕುಗೊಂಡಂತೆ, ಸಂದೀಪ್ ಅವರ ಪತ್ನಿ ಸುಮಾ ಮಾಂಜರಿ ಹಾಗೂ ಆಕೆಯ ಪ್ರಿಯಕರ ಪುಂಡಲೀಕ್ ದೊಂಬರ್ ಸೇರಿ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಗ್ಲೂಕೋಸ್ ಡ್ರಿಪ್ಸ್ ಮೂಲಕ ಸಂದೀಪ್‌ಗೆ ಕ್ರಿಮಿನಾಶಕ (ವಿಷ) ನೀಡಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.
ಪ್ರಕರಣಕ್ಕೆ ಮತ್ತಷ್ಟು ತಿರುವು ಸಿಕ್ಕಿದ್ದು ಪ್ರಿಯಕರ ಪುಂಡಲೀಕ್ ಹಂಚಿಕೊಂಡ ಸೆಲ್ಫಿ ವಿಡಿಯೋದಿಂದ! ಸುಮಾ ತಮ್ಮ ಪತಿಯ ಹೆಸರಿನಲ್ಲಿರುವ ₹2 ಕೋಟಿ ವಿಮೆ ಹಣವನ್ನು ಪಡೆದು ಬೆಳಗಾವಿಯಲ್ಲಿ ನೆಲೆಸುವ ಯೋಜನೆ ರೂಪಿಸಿದ್ದರು ಹಾಗೂ ಸಂದೀಪ್‌ಗೆ ನೀಡಲು ಕ್ರಿಮಿನಾಶಕ ತರಲು ಹೇಳಿದ್ದರು ಎಂದು ಪುಂಡಲೀಕ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.
ಪೋಲಿಸ್ ತನಿಖೆ:
ಕುಟುಂಬದ ದೂರು ಹಾಗೂ ವಿಡಿಯೋ ಆಧಾರದ ಮೇಲೆ ಯಮಕನಮರಡಿ ಠಾಣೆಯ ಪೊಲೀಸರು ಸಂದೀಪ್ ಅವರ ಶವವನ್ನು ಹೊರತೆಗೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಮಾದರಿಗಳನ್ನು ರವಾನಿಸಿದ್ದಾರೆ. ಸುಮಾ ಮಾಂಜರಿ ಹಾಗೂ ಪುಂಡಲೀಕ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, FSL ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
- Belagavi crime news
- ex-serviceman body exhumed
- Karnataka crime update
- Pundalik Dombar
- Sandeep Manjarik murder probe
- Suma Manjari
- Yamakanamaradi police station
- ಆಸ್ಪತ್ರೆಯಲ್ಲಿ ವಿಷಪ್ರಾಶನ
- ಕರ್ನಾಟಕ ಕ್ರೈಂ ನ್ಯೂಸ್
- ಪುಂಡಲೀಕ್ ದೊಂಬರ
- ಬೆಳಗಾವಿ ಅಪರಾಧ ಸುದ್ದಿ
- ಮಾಜಿ ಸೈನಿಕ ಸಂದೀಪ್ ಕೊಲೆ ಪ್ರಕರಣ
- ಯಮಕನಮರಡಿ ಪೊಲೀಸ್ ಠಾಣೆ
- ಶವ ಹೊರತೆಗೆತ
- ಸುಮಾ ಮಾಂಜರಿ
- ₹2 crore insurance scam
- ₹2 ಕೋಟಿ ವಿಮೆ ಹಣ





Leave a comment