Home ದಾವಣಗೆರೆ ದಾವಣಗೆರೆ, ಜಗಳೂರಿನಲ್ಲಿ ಆಗಸ್ಟ್ 7ರ ನಾಳೆ ಕರೆಂಟ್ ಕಟ್: ನಿಮ್ಮ ಬಡಾವಣೆ ಇಲ್ಲಿದೆಯೇ? ಚೆಕ್ ಮಾಡಿ!
ದಾವಣಗೆರೆಬೆಂಗಳೂರು

ದಾವಣಗೆರೆ, ಜಗಳೂರಿನಲ್ಲಿ ಆಗಸ್ಟ್ 7ರ ನಾಳೆ ಕರೆಂಟ್ ಕಟ್: ನಿಮ್ಮ ಬಡಾವಣೆ ಇಲ್ಲಿದೆಯೇ? ಚೆಕ್ ಮಾಡಿ!

Share
ದಾವಣಗೆರೆ
Share

ದಾವಣಗೆರೆ: 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 7 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಎಫ್-16 ಎಸ್ ನಿಜಲಿಂಗಪ್ಪ ಫೀಡರ್ ನಿಜಲಿಂಗಪ್ಪ ಲೇಔಟ್, ದೇವರಾಜ್‌ಅರಸ್ ಲೇಔಟ್ ಎ ಬ್ಲಾಕ್, ವಿನಾಯಕರಸ್ತೆ, ಯಲ್ಲಮ್ಮ ನಗರ, ಶಾಂತಿ ನಗರ, ವಿನೋಬ ನಗರ 4ನೇ ಮೇನ್ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿದ್ಯುತ್ ವ್ಯತ್ಯಯ:

66/11 ಕೆವಿ ಜಗಳೂರು ವಿವಿ ಕೇಂದ್ರದಲ್ಲಿ ಪರಿವರ್ತಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 7 ರಂದು ಬೆಳಿಗ್ಗೆ 10.30 ರಿಂದ ಸಂಜೆ 5 ಗಂಟೆಯವರೆಗೆ ಎಲ್ಲಾ ಕೆವಿ ಮಾರ್ಗಗಗಳ ವ್ಯಾಪ್ತಿಯಲ್ಲಿ ಬರುವ ಜಗಳೂರು ಟೌನ್ ಮತ್ತು ಎಲ್ಲಾ ಗ್ರಾಮಗಳ ಎನ್‌ಜೆವೈ ಅಂಡ್ ಐ.ಪಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಬೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles