Home ದಾವಣಗೆರೆ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಹೊಂದಿದ್ದೀರಾ? ಸ್ವಚ್ಛಗೊಳಿಸದಿದ್ದರೆ ಆಸ್ತಿ ಮೇಲೆಯೇ ಬೀಳುತ್ತೆ ಕ್ಲೀನಿಂಗ್ ವೆಚ್ಚ!
ದಾವಣಗೆರೆಬೆಂಗಳೂರು

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಹೊಂದಿದ್ದೀರಾ? ಸ್ವಚ್ಛಗೊಳಿಸದಿದ್ದರೆ ಆಸ್ತಿ ಮೇಲೆಯೇ ಬೀಳುತ್ತೆ ಕ್ಲೀನಿಂಗ್ ವೆಚ್ಚ!

Share
ದಾವಣಗೆರೆ
Share

ದಾವಣಗೆರೆ: ಪಾಲಿಕೆ ವ್ಯಾಪ್ತಿಯಲ್ಲಿನ ಖಾಲಿ ನಿವೇಶನಗಳ ಮಾಲೀಕರು ನಗರದಲ್ಲಿರುವ ಖಾಲಿ ನಿವೇಶನಗಳ ಸೂಕ್ತ ನಿರ್ವಹಣೆಯಿಲ್ಲದ ಕಾರಣ ಅನುಪಯುಕ್ತ ಗಿಡ ಗಂಟಿಗಳು ಬೆಳೆದು ನೆರೆ ಹೊರೆಯವರಿಗೆ ಉಪದ್ರವಕಾರಿಯಾಗಿರುವುದಲ್ಲದೇ ಸೊಳ್ಳೆಗಳ ಅಭಿವೃದ್ಧಿ ತಾಣಗಳಾಗಿ ಪರಿವರ್ತನೆಗೊಂಡು ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.

ನಗರದ ಸ್ವಚ್ಛತೆ ಹಾಗು ಸೌಂಧರ್ಯಕ್ಕೆ ಧಕ್ಕೆಯುಂಟು ಮಾಡುತ್ತದೆ. ಖಾಲಿ ನಿವೇಶನಗಳ ಮಾಲೀಕರು ಈ ಕೂಡಲೇ ಸ್ವಚ್ಛಗೊಳಿಸಿ, 30 ದಿನಗಳೊಳಗೆ ಕನಿಷ್ಠ 6 ರಿಂದ 7 ಅಡಿ ಎತ್ತರದ ಕಾಂಕ್ರೀಟ್ ಪ್ರೇಕಾಸ್ಟ್ ಕೌಂಪೌಡ್, ಬ್ರಿಕ್ ಅಥವಾ ಫೇನ್ಸಿಂಗ್ ನಿರ್ಮಿಸಿಕೊಳ್ಳಬೇಕು.

ಇಲ್ಲದಿದ್ದಲ್ಲಿ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮದನ್ವಯ ಮಹಾನಗರಪಾಲಿಕಯಿಂದಲೇ ಸ್ವಚ್ಚಗೊಳಿಸಲು ಹಾಗೂ ಸ್ವಚ್ಛತೆಗೆ ತಗಲುವ ವೆಚ್ಚವನ್ನು ತಮ್ಮ ನಿವೇಶನಗಳ ಮೇಲೆ ಬೋಜಾ ಕೂರಿಸಲು ಕ್ರಮವಹಿಸಲಾಗುವುದೆಂದು ಪಾಲಿಕೆ ಆಯುಕ್ತರಾಧ ಡಾ.ಮಹಾಂತೇಶ್ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.