ಬೆಂಗಳೂರು:“ನಾನು, ಸಿದರಾಮಯ್ಯ ಅವರು ಸೇರಿ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ಇಂದು ಅವರ ಜನ್ಮದಿನ. ಅವರಿಗೆ ಅನೇಕ ಅತಿಥಿಗಳು ಶುಭಕೋರುತ್ತಿದ್ದಾರೆ. ನಾನು ಶುಭ ಕೋರಿದ್ದೇನೆ. ನಾವೆಲ್ಲರೂ ಒಂದು ತಂಡ 139 ಶಾಸಕರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರು ಯಾಕೆ ಅಸಮಾಧಾನಗೊಳ್ಳುತ್ತಾರೆ? ನಾನು ಸೇರಿದಂತೆ ಎಲ್ಲರೂ ಸಿದ್ದರಾಮಯ್ಯನವರ ಕಡೆಯವರೆ. ನಾವು ಒಂದಾಗಿದ್ದೇವೆ, ಒಂದಾಗಿರುತ್ತೇವೆ, ಒಂದಾಗಿ ಹೋರಾಟ ಮಾಡುತ್ತೇವೆ ಎಂದು ಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಹೊಸದಾಗಿ ಹುಡುಕುತ್ತಿದ್ದೀರಿ. ಅನೇಕರು ಅವರನ್ನು ಭೇಟಿ ಮಾಡುತ್ತಿರುತ್ತಾರೆ. ಸಚಿವ ಸ್ಥಾನ ಸಿಗದವರ ಜತೆಗೂ ಅವರು ಮಾತನಾಡುತ್ತಿರುತ್ತಾರೆ. ಅವರು ನಮ್ಮ ಪಕ್ಷದ ಕೆಲಸವನ್ನು ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದರು.
ನೀವು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೀರಾ ಎಂದು ಕೇಳಿದಾಗ, “ಖಂಡಿತವಾಗಿ ಮಾತನಾಡಿದ್ದೇನೆ. ಒಟ್ಟು ಐದು ಬಾರಿ ಚರ್ಚೆ ಮಾಡಿದ್ದೇನೆ” ಎಂದರು.
ಪಟ್ಟಿ ಬದಲಾವಣೆ ಮಾಡಿದ್ದೇಕೆ ಎಂದು ಕೇಳಿದಾಗ, “ಹೈಕಮಾಂಡ್ ನಿಂದ ಬಂದ ಮಾರ್ಗದರ್ಶನವನ್ನು ನಾವು ಪಾಲಿಸುತ್ತೇವೆ” ಎಂದು ತಿಳಿಸಿದರು.
ಗಾಯತ್ರಿ ಅವರ ವಿಚಾರವಾಗಿ ಕೇಳಿದಾಗ, “ನಮ್ಮ ಪಕ್ಷದಲ್ಲಿ ಕೆಲವು ತಾಂತ್ರಿಕ ವಿಚಾರಗಳಿವೆ. ಅವರು ಇನ್ನು ಪ್ರಮಾಣವಚನ ಸ್ವೀಕರಿಸಬೇಕಾಗಿದೆ. ನಿಮಗೆ ಬಂದಿರುವ ಎಲ್ಲಾ ಪಟ್ಟಿ ಅಧಿಕೃತವಲ್ಲ. ನಾನು ಸಹಿ ಹಾಕಿ ರಾಜ್ಯಪಾಲರಿಗೆ ಕೊಟ್ಟ ಪಟ್ಟಿ ಮಾತ್ರ ಅಧಿಕೃತ. ಹೈಕಮಾಂಡ್ ನನಗೆ ತಿಳಿಸುವ ಪಟ್ಟಿ ಅಂತಿಮ. ನಮ್ಮಲ್ಲಿ ಕೆಲವು ಮಾಹಿತಿ ಲೀಕ್ ಮಾಡಿದ್ದು, ಅಂತಿಮವಲ್ಲ” ಎಂದರು.
“ನಾವು ಎಷ್ಟು ಬಾರಿ ಬೇಕಾದರೂ ಹೆಸರು ಬದಲಾಯಿಸಬಹುದು. ಕಳೆದ 20 ದಿನಗಳಿಂದ ಸಚಿವರ ಪಟ್ಟಿಯಲ್ಲಿ ಎಷ್ಟು ಜನರನ್ನು ತೋರಿಸಿದ್ದೀರಿ. ನಾಲ್ಕು ಸಚಿವಸಂಪುಟ ಮಾಡುವಷ್ಟು ಜನರನ್ನು ತೋರಿಸಿದ್ದೀರಿ” ಎಂದರು.
ವೈದ್ಯ ಅವರು ಸೇರಿದಂತೆ ಅಸಮಾಧಾನಿತರನ್ನು ಹೇಗೆ ಸಮಾಧಾನ ಮಾಡುತ್ತೀರಿ ಎಂದು ಕೇಳಿದಾಗ, “ವೈದ್ಯ ಬಹಳ ಹಿಂದಿನಿಂದಲೂ ನನ್ನ ಜೊತೆಯಲ್ಲಿದ್ದಾರೆ” ಎಂದರು.






Leave a comment