ಬೆಂಗಳೂರು / ಉಡುಪಿ: ಉದ್ಯೋಗಾಕಾಂಕ್ಷಿಗಳಿಗೆ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ಸಿಹಿ ಸುದ್ದಿ ನೀಡಿದೆ. ಸಿವಿಲ್, ಸಿಗ್ನಲ್ & ಟೆಲಿಕಮ್ಯೂನಿಕೇಷನ್, ಆಪರೇಟಿಂಗ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಹಾಗೂ ಕಮರ್ಷಿಯಲ್ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 201 ನಾನ್-ಎಕ್ಸಿಕ್ಯೂಟಿವ್ (Group C & Erstwhile Group D) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ (Notification No. CO/P-R/02/2026, ದಿನಾಂಕ: 31/07/2026) ಪ್ರಕಟಿಸಿದೆ.
ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆ:
ಜೂನಿಯರ್ ಇಂಜಿನಿಯರ್ (Civil / Mechanical): ಸಿವಿಲ್ ಅಥವಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಅಥವಾ ಬಿ.ಇ/ಬಿ.ಟೆಕ್.
ಸೀನಿಯರ್ ಸೆಕ್ಷನ್ ಇಂಜಿನಿಯರ್ (S&T / Mechanical): ಸಂಬಂಧಪಟ್ಟ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ (B.E/B.Tech) ಅಥವಾ M.Sc.
ಸ್ಟೇಷನ್ ಮಾಸ್ಟರ್ / ಸೆಕ್ಷನ್ ಕಂಟ್ರೋಲರ್ / ಗೂಡ್ಸ್ ಟ್ರೈನ್ ಮ್ಯಾನೇಜರ್ / ಕಮರ್ಷಿಯಲ್ ಸೂಪರ್‌ವೈಸರ್: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation).
ಅಸಿಸ್ಟೆಂಟ್ ಲೋಕೋ ಪೈಲಟ್ (ALP) / ಟೆಕ್ನಿಷಿಯನ್-III / ESTM-III: SSLC ಯೊಂದಿಗೆ ಸಂಬಂಧಿತ ಟ್ರೇಡ್‌ನಲ್ಲಿ ITI / CCAA ಅಥವಾ ಡಿಪ್ಲೊಮಾ (ESTM-III ಗೆ 10+2 PCM ಕೂಡ ಅರ್ಹ).
ಟ್ರ್ಯಾಕ್ ಮೇಂಟೇನರ್-IV (57 ಹುದ್ದೆಗಳು): 10ನೇ ತರಗತಿ ತೇರ್ಗಡೆ. (ಈ ಹುದ್ದೆ ಸಂಪೂರ್ಣವಾಗಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಕಾಯ್ದಿರಿಸಲಾಗಿದೆ).
ವಯೋಮಿತಿ (01/08/2026 ಕ್ಕೆ ಅನ್ವಯಿಸುವಂತೆ):
ಗ್ರೂಪ್ ‘C’ ಹುದ್ದೆಗಳಿಗೆ: 18 ರಿಂದ 36 ವರ್ಷಗಳು.
ಟ್ರ್ಯಾಕ್ ಮೇಂಟೇನರ್ ಹುದ್ದೆಗೆ: 18 ರಿಂದ 45 ವರ್ಷಗಳು.
(ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ನಿಯಮಾನುಸಾರ ವಯೋಸಡಿಲಿಕೆ ಇರುತ್ತದೆ).
ಆದ್ಯತೆ ಮತ್ತು ಅರ್ಹತೆ:
ಕರ್ನಾಟಕ (ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು), ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ವ್ಯಾಪ್ತಿಯ ಸ್ಥಳೀಯ ಅಭ್ಯರ್ಥಿಗಳಿಗೆ, ಕೊಂಕಣ ರೈಲ್ವೆ ಮಾರ್ಗಕ್ಕೆ ಜಮೀನು ನೀಡಿದ ಸಂತ್ರಸ್ತರಿಗೆ (Land Losers) ಹಾಗೂ ಉದ್ಯೋಗ ವಿನಿಮಯ ಕೇಂದ್ರದಲ್ಲಿ (Employment Exchange) ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಮತ್ತು ಪರೀಕ್ಷಾ ದಿನಾಂಕ:
ಅರ್ಜಿ ಸಲ್ಲಿಕೆ ಪ್ರಾರಂಭ: ಆಗಸ್ಟ್ 2026 ರ ಕೊನೆಯ ವಾರದಲ್ಲಿ (ತಾತ್ಕಾಲಿಕ).
ಪರೀಕ್ಷೆ (CBT): ಸೆಪ್ಟೆಂಬರ್ 2026 ರಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಯಲಿದೆ.
ಅಧಿಕೃತ ವೆಬ್‌ಸೈಟ್: www.konkanrailway.com
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಾಗಿದ್ದು, ಹೆಚ್ಚಿನ ಮಾಹಿತಿಗೆ ಕೊಂಕಣ ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
- Apply Online konkanrailway.com
- Konkan Railway 201 Posts
- Konkan Railway Recruitment 2026
- KRCL JE Station Master Jobs
- KRCL Notification 2026
- KRCL Vacancy 2026
- Railway Jobs in Karnataka 2026
- ಕರ್ನಾಟಕ ರೈಲ್ವೆ ಕೆಲಸ 2026
- ಕೆಆರ್ಸಿಎಲ್ ಉದ್ಯೋಗ ಮಾಹಿತಿ 2026
- ಕೊಂಕಣ ರೈಲ್ವೆ 201 ಹುದ್ದೆಗಳು
- ಕೊಂಕಣ ರೈಲ್ವೆ ನೇಮಕಾತಿ 2026
- ಜೂನಿಯರ್ ಇಂಜಿನಿಯರ್ ಉದ್ಯೋಗ
- ರೈಲ್ವೆ ಇಲಾಖೆ ಹುದ್ದೆಗಳು






Leave a comment