Home ದಾವಣಗೆರೆ ಅವಳಿ ವರ, ಅವಳಿ ವಧು, ಅವಳಿ ಧರ್ಮಗುರುಗಳು: ಚರ್ಚ್‌ನಲ್ಲಿ ನೆರವೇರಿದ ಅಪರೂಪದ ವಿವಾಹ ಮಹೋತ್ಸವ!
ದಾವಣಗೆರೆದಿನ ಭವಿಷ್ಯನವದೆಹಲಿಬೆಂಗಳೂರು

ಅವಳಿ ವರ, ಅವಳಿ ವಧು, ಅವಳಿ ಧರ್ಮಗುರುಗಳು: ಚರ್ಚ್‌ನಲ್ಲಿ ನೆರವೇರಿದ ಅಪರೂಪದ ವಿವಾಹ ಮಹೋತ್ಸವ!

Share
ಚರ್ಚ್
Share

ಚಂಗನಶ್ಶೇರಿ (ಕೇರಳ): ಸಾಮಾನ್ಯವಾಗಿ ಮದುವೆಗಳು ಅಲಂಕಾರ, ವೈಭವ ಹಾಗೂ ಸಂಭ್ರಮಕ್ಕೆ ಹೆಸರಾಗಿರುತ್ತವೆ. ಆದರೆ ಕೇರಳದ ಚಂಗನಶ್ಶೇರಿಯಲ್ಲಿ ನಡೆದ ವಿವಾಹವೊಂದು ಇಡೀ ದೇಶದ ಗಮನ ಸೆಳೆದಿದೆ. ಈ ಮದುವೆಯ ವಿಶೇಷತೆಯೆಂದರೆ — ಇಲ್ಲಿ ವರ, ವಧು, ಮದುವೆ ಮಾಡಿಸಿದ ಧರ್ಮಗುರುಗಳು (ಫಾದರ್) ಹಾಗೂ ಚರ್ಚ್ ಸೇವಕರೂ (ಅಲ್ಟಾರ್ ಬಾಯ್ಸ್) ಸೇರಿ ಪ್ರಮುಖ ಪಾತ್ರ ವಹಿಸಿದವರೆಲ್ಲರೂ ಅವಳಿ-ಜವಳಿ (Twins)!

ಅವಳಿ ಜೋಡಿಗಳ ವೈವಾಹಿಕ ಬಂಧ:

ಚಂಗನಶ್ಶೇರಿಯ ಮೆಟ್ರೋಪಾಲಿಟನ್ ಚರ್ಚ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ವರ ಅಖಿಲ್ ಕೆ. ಥಾಮಸ್ ಅವರು ವಧು ಮ್ಯಾಗಿ ಮೇರಿ ಥಾಮಸ್ ಅವರ ಕೈಹಿಡಿದರು. ಈ ವೇಳೆಯಲ್ಲಿ ವರನ ಪರವಾಗಿ ಆತನ ಅವಳಿ ಸಹೋದರ ನಿಖಿಲ್ ಕೆ. ಥಾಮಸ್ ನಿಂತರೆ, ವಧುವಿನ ಪರವಾಗಿ ಆಕೆಯ ಅವಳಿ ಸಹೋದರಿ ಮಾರಿಯಾ ಮೇರಿ ಥಾಮಸ್ ಉಪಸ್ಥಿತರಿದ್ದರು.

ಬಾಲ್ಯದ ಕನಸಿನ ಹುಡುಕಾಟ:

ಇಡೀ ಶುಭ ಸಮಾರಂಭವನ್ನು ಅವಳಿ-ಜವಳಿಯರ ನಡುವೆಯೇ ನೆರವೇರಿಸಬೇಕು ಎಂಬುದು ವಧು-ವರರು ಹಾಗೂ ಅವರ ಕುಟುಂಬದವರ ಬಾಲ್ಯದ ಕನಸಾಗಿತ್ತು. ಇದಕ್ಕಾಗಿ ವಧುವಿನ ಸಹೋದರಿಯರು ಕೊತ್ತನಲ್ಲೂರಿನ ವಿಶೇಷ ಚರ್ಚ್ ಮೂಲಕ ಅವಳಿ ಫಾದರ್‌ಗಳನ್ನು ಪತ್ತೆ ಹಚ್ಚಿ ಆಹ್ವಾನಿಸಿದ್ದರು.

ಕಾಂಜಿರಪಳ್ಳಿ ಡಯಾಸಿಸ್‌ನ ಫಾದರ್ ಆಂಟೋ ಪೆಳುಂಕಟ್ಟಿಲ್ ಮತ್ತು ಫಾದರ್ ಅಜೋ ಪೆಳುಂಕಟ್ಟಿಲ್ ಈ ವಿವಾಹ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರೆ, ಪಾಲಾದ ಅವಳಿ ಸಹೋದರರಾದ ಜೆರಾನ್ ಜೇಮ್ಸ್ ಮತ್ತು ಜೋಹಾನ್ ಜೇಮ್ಸ್ ಬಲಿಪೀಠದ ಸೇವಕರಾಗಿ (Altar Boys) ನೆರವಾದರು.

ಸಂತಸ ವ್ಯಕ್ತಪಡಿಸಿದ ಕುಟುಂಬಸ್ಥರು:

ಮರ್ಚೆಂಟ್ ನೇವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವರಂದಿರು ಹಾಗೂ ಐಟಿ ರಂಗದಲ್ಲಿರುವ ವಧುಂದಿರು ತಮ್ಮ ಈ ಅಪರೂಪದ ಮದುವೆಯಿಂದ ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. “ನಮ್ಮ ಬಾಲ್ಯದ ಕನಸನ್ನು ಯೇಸುಕ್ರಿಸ್ತ ಈ ದಿನ ನನಸು ಮಾಡಿದ್ದಾನೆ” ಎಂದು ವಧು-ವರರ ಕುಟುಂಬಸ್ಥರು ಭಾವನಿವಾರಕರಾಗಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles