ಜಾಮ್‌ನಗರ: ‘ದೃಶ್ಯಂ’ ಹಿಂದಿ ಸಿನಿಮಾದ ಕಥೆಯನ್ನು ನೆನಪಿಸುವ ಭೀಕರ ಹತ್ಯೆ ಪ್ರಕರಣವೊಂದು ಗುಜರಾತ್‌ನ ಜಾಮ್‌ನಗರದಲ್ಲಿ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳಿಂದ ಕಾಣೆಯಾಗಿದ್ದ ವ್ಯಕ್ತಿಯೋರ್ವನ ಅಸ್ಥಿಪಂಜರವನ್ನು ಫ್ಯಾಕ್ಟರಿಯೊಂದರ 12 ಅಡಿ ಆಳದ ಕಾಂಕ್ರೀಟ್ ನೆಲದ ಅಡಿಯಿಂದ ಪೊಲೀಸರು ಹೊರತೆಗೆದಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಜಿಗ್ನೇಶ್ ಮಾವಡಿಯಾ ಎಂದು ಗುರುತಿಸಲಾಗಿದೆ. ಆತನ ಪತ್ನಿ ಪೃಥ್ವಿ (ಅಲಿಯಾಸ್ ಭೂಮಿಬೆನ್), ಆಕೆಯ ಪ್ರಿಯಕರ ನೀಲೇಶ್ ಕಛಟಿಯಾ ಹಾಗೂ ಆತನ ಸಹಚರ ಬಲವೀರ್ ವರ್ಮನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಮೇ 31, 2024 ರಂದು ಆರೋಪಿಗಳು ಜಿಗ್ನೇಶ್‌ಗೆ ಮದ್ಯಪಾನ ಕೂಟದ ನೆಪದಲ್ಲಿ ಕೈಗಾರಿಕಾ ಶೆಡ್‌ಗೆ ಆಹ್ವಾನಿಸಿದ್ದರು. ಅಲ್ಲಿ ಮದ್ಯದಲ್ಲಿ ಸೈನೆಡ್ ಬೆರೆಸಿ ಆತನನ್ನು ಹತ್ಯೆ ಮಾಡಲಾಗಿತ್ತು. ಬಳಿಕ ಶವವನ್ನು 12 ಅಡಿ ಆಳದ ಗುಂಡಿಯಲ್ಲಿ ಹೂತು, ಮೇಲ್ಭಾಗದಲ್ಲಿ 1 ಫೂಟ್ ದಪ್ಪದ ಕಾಂಕ್ರೀಟ್ ಹಾಕಿ ಮುಚ್ಚಲಾಗಿತ್ತು.
2 ವರ್ಷಗಳ ಕಟ್ಟುಕಥೆ ಬಿಚ್ಚಿಬಿದ್ದಿದ್ದು ಹೇಗೆ?
ಜಿಗ್ನೇಶ್ ಹತ್ಯೆಯಾದ ನಂತರ, ಆತನ ಪತ್ನಿ ಪೃಥ್ವಿ ಕುಟುಂಬದವರ ಬಳಿ “ನನ್ನ ಗಂಡ ಕೆಲಸಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ. ಅಲ್ಲಿನ ಕಂಪನಿಯಲ್ಲಿ ಮೊಬೈಲ್ ಬಳಸಲು ಅನುಮತಿಯಿಲ್ಲ” ಎಂದು ಸುಳ್ಳು ಹೇಳಿ ನಂಬಿಸಿದ್ದಳು.
ಆದರೆ, ಇತ್ತೀಚೆಗೆ ಆಸ್ಟ್ರೇಲಿಯಾಕ್ಕೆ ಪ್ರವಾಸ ಬೆಳೆಸಲು ಯೋಜಿಸಿದ್ದ ಜಿಗ್ನೇಶ್‌ನ ಸೋದರಸಂಬಂಧಿಯೊಬ್ಬರು ಜಿಗ್ನೇಶ್‌ನ ವಿಳಾಸ ಹಾಗೂ ಫೋನ್ ನಂಬರ್ ನೀಡುವಂತೆ ಪೃಥ್ವಿಯನ್ನು ಒತ್ತಾಯಿಸಿದರು. ಆಕೆ ಮಾಹಿತಿ ನೀಡಲು ಹಿಂಜರಿದಾಗ ಕುಟುಂಬಸ್ಥರಿಗೆ ಅನುಮಾನ ಹೆಚ್ಚಾಯಿತು. ಜುಲೈ 26 ರಂದು ಜಿಗ್ನೇಶ್ ಸಹೋದರ ಪೊಲೀಸರಿಗೆ ದೂರು ನೀಡಿದ್ದರು.
ಕಾಂಕ್ರೀಟ್ ಕೊರೆದು ಹೊರತೆಗೆದ ಅಸ್ಥಿಪಂಜರ:
ಪೋಲೀಸರ ತೀವ್ರ ವಿಚಾರಣೆ ವೇಳೆ ಆರೋಪಿಗಳು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಜುಲೈ 30 ರಂದು ಪೋಲೀಸರು ಡ್ರಿಲ್ಲಿಂಗ್ ಯಂತ್ರಗಳ ಸಹಾಯದಿಂದ ಕಾಂಕ್ರೀಟ್ ನೆಲವನ್ನು ಕೊರೆದು 12 ಅಡಿ ಆಳದಲ್ಲಿದ್ದ ಅಸ್ಥಿಪಂಜರವನ್ನು ಹೊರತೆಗೆದಿದ್ದಾರೆ. ಮೃತನ ಗುರುತು ಖಚಿತಪಡಿಸಿಕೊಳ್ಳಲು ಅಸ್ಥಿಪಂಜರವನ್ನು ಫೊರೆನ್ಸಿಕ್ ಪರೀಕ್ಷೆಗೆ ರವಾನಿಸಲಾಗಿದೆ.
- Australia migration lie murder
- Cyanide poisoning Gujarat
- Dared GIDC Jamnagar
- Gujarat crime news
- Gujarat Drishyam style murder
- Gujarat News
- Jamnagar murder case
- Jignesh Mavadiya
- ಆಸ್ಟ್ರೇಲಿಯಾ ಕಟ್ಟುಕಥೆ
- ಕಾಂಕ್ರೀಟ್ ಅಡಿ ಶವ
- ಕ್ರೈಮ್ ನ್ಯೂಸ್ ಕನ್ನಡ
- ಗುಜರಾತ್ ಕೊಲೆ ಪ್ರಕರಣ
- ಗುಜರಾತ್ ಸುದ್ದಿ
- ಜಾಮ್‌ನಗರ ಕ್ರೈಮ್
- ಜಿಗ್ನೇಶ್ ಮಾವಡಿಯಾ
- ದೃಶ್ಯಂ ಮಾದರಿ ಕೊಲೆ
- ಪೃಥ್ವಿ ಭೂಮಿಬೆನ್
- ಸೈನೆಡ್ ಕೊಲೆ





Leave a comment