Home ಕ್ರೈಂ ನ್ಯೂಸ್ “ಬಿಜೆಪಿ, ಆರ್‌ಎಸ್‌ಎಸ್‌ಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ”: “ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್, ಆಣಿ ಇರುವ ಲಾಠಿ ಪ್ರಹಾರ”- ಗೃಹ ಸಚಿವರ ವಿರುದ್ಧ ಸಿಡಿದೆದ್ದ ರಾಹುಲ್ ಗಾಂಧಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ಬಿಜೆಪಿ, ಆರ್‌ಎಸ್‌ಎಸ್‌ಗೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ”: “ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್, ಆಣಿ ಇರುವ ಲಾಠಿ ಪ್ರಹಾರ”- ಗೃಹ ಸಚಿವರ ವಿರುದ್ಧ ಸಿಡಿದೆದ್ದ ರಾಹುಲ್ ಗಾಂಧಿ!

Share
ರಾಹುಲ್ ಗಾಂಧಿ
Share

ನವದೆಹಲಿ: NEET ಪೇಪರ್ ಲೀಕ್ ವಿರೋಧಿ ಮಸೂದೆ ಚರ್ಚೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾಡಿದ್ದ ಗಂಭೀರ ಆರೋಪಕ್ಕೆ ಕ್ಷಮೆಯಾಚಿಸಲು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ನಾನು ಬಿಜೆಪಿ ಅಥವಾ ಆರ್‌ಎಸ್‌ಎಸ್‌ಗೆ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ.

ಪ್ರಮುಖ ವಿವರಗಳು:

ಸಂಸತ್ತಿನಲ್ಲಿ ಹಂಗಾಮಾ: ಜಂತರ್ ಮಂತರ್‌ನಲ್ಲಿ NEET ಪೇಪರ್ ಲೀಕ್ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ಮಾಡಲು ಅಮಿತ್ ಶಾ ಅವರೇ ಸೂಚನೆ ನೀಡಿದ್ದರು ಎಂದು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಆರೋಪಿಸಿದ್ದರು.

ಸಭಾಪತಿ ಹಾಗೂ ಸಚಿವರ ಆಕ್ಷೇಪ: ರಾಹುಲ್ ಹೇಳಿಕೆಗೆ ಆಡಳಿತ ಪಕ್ಷದ ಎನ್‌ಡಿಎ ಸಂಸದರು ಮತ್ತು ಸಚಿವ ಕಿರಣ್ ರಿಜಿಜು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕ್ಷಮೆಗೆ ಆಗ್ರಹಿಸಿದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಸೂಕ್ತ ಆಧಾರವಿಲ್ಲದೆ ಗಂಭೀರ ಆರೋಪ ಮಾಡಬಾರದು ಎಂದು ಸೂಚಿಸಿದರು.

ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಆರೋಪ: “ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್‌ಗಳು, ಶಾಕ್ ಬ್ಯಾಟನ್ ಹಾಗೂ ಆಣಿ (ಮಳೆ) ಜೋಡಿಸಲಾದ ಲಾಠಿಗಳಿಂದ ಹಲ್ಲೆ ನಡೆಸಲಾಗಿದೆ. ಪೆಲೆಟ್ ಗನ್ ಏಟಿನಿಂದ ಓರ್ವ ವಿದ್ಯಾರ್ಥಿ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಹಂತದಲ್ಲಿದ್ದಾನೆ ಎಂದು AIIMS ವೈದ್ಯಕೀಯ ಪ್ರಮಾಣಪತ್ರದಲ್ಲಿದೆ” ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಕೇಂದ್ರ ಸರ್ಕಾರದ ಸ್ಪಷ್ಟನೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ರಾಹುಲ್ ಗಾಂಧಿ ಆರೋಪಗಳನ್ನು ತಳ್ಳಿಹಾಕಿದ್ದು, ವಿದ್ಯಾರ್ಥಿಗಳ ಮೇಲೆ ಯಾವುದೇ ಗುಂಡಿನ ದಾಳಿ ನಡೆಸಲಾಗಿಲ್ಲ ಹಾಗೂ ಗುಂಡು ಹಾರಿಸಲು ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *