Home ಉದ್ಯೋಗ ವಾರ್ತೆ AAI ನೇಮಕಾತಿ 2026: ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 140 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ₹15,000 ವರೆಗೆ ಸ್ಟೈಪೆಂಡ್!
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

AAI ನೇಮಕಾತಿ 2026: ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 140 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ₹15,000 ವರೆಗೆ ಸ್ಟೈಪೆಂಡ್!

Share
ವಿಮಾನ
Share

ಬೆಂಗಳೂರು: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಪೂರ್ವ ವಲಯದಲ್ಲಿ ಖಾಲಿ ಇರುವ 140 ಗ್ರಾಜುಯೇಟ್, ಡಿಪ್ಲೊಮಾ ಮತ್ತು ಐಟಿಐ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ (Advt No. 01/2026/ER/APPRENTICE) ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ ಹಾಗೂ ಮಾಸಿಕ ಸ್ಟೈಪೆಂಡ್

  • ಗ್ರಾಜುಯೇಟ್ ಅಪ್ರೆಂಟಿಸ್: 35 ಹುದ್ದೆಗಳು – ಮಾಸಿಕ ₹15,000 ಸ್ಟೈಪೆಂಡ್

  • ಡಿಪ್ಲೊಮಾ ಅಪ್ರೆಂಟಿಸ್: 35 ಹುದ್ದೆಗಳು – ಮಾಸಿಕ ₹12,000 ಸ್ಟೈಪೆಂಡ್

  • ITI ಅಪ್ರೆಂಟಿಸ್: 70 ಹುದ್ದೆಗಳು – ಮಾಸಿಕ ₹9,600 (ಮೊದಲ ವರ್ಷ), ₹10,560 (ಎರಡನೇ ವರ್ಷ)

ಅರ್ಹತೆ ಮತ್ತು ನಿಬಂಧನೆಗಳು

  • ವಿದ್ಯಾರ್ಹತೆ: 2024 ರಲ್ಲಿ ಅಥವಾ ಆನಂತರ ಸಂಬಂಧಿತ ವಿಷಯದಲ್ಲಿ Degree, Diploma ಅಥವಾ ITI ಪೂರ್ಣಗೊಳಿಸಿರಬೇಕು (30/06/2026 ಕ್ಕೆ ಅನ್ವಯಿಸುವಂತೆ).

  • ವಲಯ: ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಸಿಕ್ಕಿಂ ಮತ್ತು ಅಂಡಮಾನ್-ನಿಕೋಬಾರ್ ರಾಜ್ಯಗಳ ಅಭ್ಯರ್ಥಿಗಳಿಗೆ ಅವಕಾಶ.

  • ತರಬೇತಿ ಅವಧಿ: 1 ವರ್ಷ.

ಅರ್ಜಿ ಸಲ್ಲಿಸುವ ವಿಧಾನ

  1. ಗ್ರಾಜುಯೇಟ್ & ಡಿಪ್ಲೊಮಾ ಅಭ್ಯರ್ಥಿಗಳು: NATS ಪೋರ್ಟಲ್ ಮೂಲಕ.

  2. ITI ಅಭ್ಯರ್ಥಿಗಳು: NAPS ಪೋರ್ಟಲ್ ಮೂಲಕ.

  3. ಆಯಾ ವಿಮಾನ ನಿಲ್ದಾಣ ಕೇಂದ್ರದ Establishment ID ಬಳಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles