Home ದಾವಣಗೆರೆ ಅಯೋಧ್ಯೆ ಬೆಳ್ಳಿ ಇಟ್ಟಿಗೆ ವಿವಾದ ಹಾಗೂ ದಾವಣಗೆರೆ ದುರ್ಗಾಂಬಿಕಾ ದೇವಾಲಯದ ಅಕ್ರಮ: ಎಸ್.ಎಸ್. ಮಲ್ಲಿಕಾರ್ಜುನ್ ಗೆ ಯಶವಂತರಾವ್ ಜಾಧವ್ ಮತ್ತೆ ಬಹಿರಂಗ ಸವಾಲು!
ದಾವಣಗೆರೆಬೆಂಗಳೂರು

ಅಯೋಧ್ಯೆ ಬೆಳ್ಳಿ ಇಟ್ಟಿಗೆ ವಿವಾದ ಹಾಗೂ ದಾವಣಗೆರೆ ದುರ್ಗಾಂಬಿಕಾ ದೇವಾಲಯದ ಅಕ್ರಮ: ಎಸ್.ಎಸ್. ಮಲ್ಲಿಕಾರ್ಜುನ್ ಗೆ ಯಶವಂತರಾವ್ ಜಾಧವ್ ಮತ್ತೆ ಬಹಿರಂಗ ಸವಾಲು!

Share
ದಾವಣಗೆರೆ
Share

ದಾವಣಗೆರೆ: ಅಯೋಧ್ಯೆ ರಾಮಮಂದಿರಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಿಸಿದ ವಿಚಾರದಲ್ಲಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಆಡಿದ್ದ ವ್ಯಂಗ್ಯದ ಮಾತುಗಳಿಗೆ ಈಗಾಗಲೇ ತಿರುಗೇಟು ನೀಡಿ ಸವಾಲು ಹಾಕಿದ್ದೆ. 25 ದಿನಗಳು ಕಳೆದರೂ ಪ್ರತಿಕ್ರಿಯಿಸಿಲ್ಲ. ಮಲ್ಲಿಕಾರ್ಜುನ್ ಹೇಳಿಕೆಗಳ ಆಧಾರರಹಿತ ಸ್ಥಿತಿಯನ್ನು ತೋರಿಸುತ್ತದೆ ಎಂದು ದೂಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ನಾನು ಕಳೆದ ಜುಲೈ 2ರಂದು ಸುದ್ದಿಗೋಷ್ಠಿ ನಡೆಸಿ ಸಮಗ್ರ ದಾಖಲೆಗಳೊಂದಿಗೆ ಚರ್ಚೆಗೆ ಬರುವಂತೆ ನೀಡಿದ್ದ ಸವಾಲನ್ನು ಸ್ವೀಕರಿಸಲು ಮಲ್ಲಿಕಾರ್ಜುನ ಅವರು ಮುಂದಾಗಿಲ್ಲ. ಹೀಗಾಗಿ ತಮ್ಮ ಬಳಿ ಇರುವ ಎಲ್ಲಾ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಾಗಿ ಹೇಳಿದರು.

ದುರ್ಗಾಂಬಿಕಾ ದೇವಾಲಯ ಟ್ರಸ್ಟ್ ಮೇಲಿನ ಪ್ರಮುಖ ಆರೋಪಗಳು:

ಮಳಿಗೆಗಳ ಲೆಕ್ಕ ಮತ್ತು GST ಬಿಲ್:

ಶ್ರೀ ದುರ್ಗಾಂಬಿಕಾ ದೇವಾಲಯದ ಟ್ರಸ್ಟ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಹಾಗೂ ಅವರ ತಂದೆಯವರ ಅವಧಿಯಲ್ಲಿ ನಿರ್ಮಿಸಲಾದ ಮಳಿಗೆಗಳ ಲೆಕ್ಕವನ್ನು ಸಾರ್ವಜನಿಕವಾಗಿ ನೀಡಬೇಕು. ಮಳಿಗೆಗಳ ನಿರ್ಮಾಣಕ್ಕೆ ₹55 ಲಕ್ಷ GST ಟ್ಯಾಕ್ಸ್ ಕಟ್ಟಿದ್ದೇವೆ ಎಂದು ತೋರಿಸಲಾದ ಬಿಲ್ ಹಾಗೂ ಲೆಕ್ಕಪತ್ರಗಳನ್ನು ಬಹಿರಂಗಪಡಿಸಬೇಕು.

ಆಭರಣ ಕಳ್ಳತನ ಹಾಗೂ ತನಿಖೆ:

ದೇವಾಲಯದಲ್ಲಾದ ಆಭರಣಗಳ ಕಳ್ಳತನ ಪ್ರಕರಣದ ಬಗ್ಗೆ ಯಾವುದೇ ಶಿಸ್ತುಕ್ರಮ ಅಥವಾ ತನಿಖೆ ಏಕೆ ನಡೆಸಲಿಲ್ಲ? ಕದ್ದ ಬಂಗಾರದಲ್ಲಿ ಯಾರ ಪಾಲಿದೆ ಎಂಬುದನ್ನು ದಾವಣಗೆರೆ ಜನತೆಗೆ ಸ್ಪಷ್ಟಪಡಿಸಬೇಕು.

ಆಣೆ-ಪ್ರಮಾಣದ ಸವಾಲು ಹಾಗೂ ರಾಜೀನಾಮೆ:

ತಮ್ಮ ಮೇಲಿನ ಆರೋಪಗಳು ಸುಳ್ಳಾಗಿದ್ದರೆ ಟ್ರಸ್ಟ್‌ನ ಸದಸ್ಯರೆಲ್ಲರೂ ದುರ್ಗಾಂಬಿಕಾ ದೇವಿಯ ಪಾದ ಮುಟ್ಟಿ ಪ್ರಮಾಣ ಮಾಡಲಿ. ಈ ಭ್ರಷ್ಟಾಚಾರದ ವಿರುದ್ಧ ಮಾತನಾಡದ ಟ್ರಸ್ಟ್‌ನ ಎಲ್ಲಾ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಬೇಕು ಎಂದು ಜಾಧವ್ ಒತ್ತಾಯಿಸಿದರು.

ಗೋಷ್ಠಿಯಲ್ಲಿ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಗುರು ಸೋಗಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *