Home ದಾವಣಗೆರೆ ಜಿಎಂಐಪಿಎಸ್‌ಆರ್‌ಗೆ ಕ್ಯೂಸಿಐ ರಾಷ್ಟ್ರೀಯ ಶ್ರೇಯಾಂಕದಲ್ಲಿ ಐತಿಹಾಸಿಕ ಸಾಧನೆ
ದಾವಣಗೆರೆಬೆಂಗಳೂರು

ಜಿಎಂಐಪಿಎಸ್‌ಆರ್‌ಗೆ ಕ್ಯೂಸಿಐ ರಾಷ್ಟ್ರೀಯ ಶ್ರೇಯಾಂಕದಲ್ಲಿ ಐತಿಹಾಸಿಕ ಸಾಧನೆ

Share
ಐತಿಹಾಸಿಕ
Share

ದಾವಣಗೆರೆ: ಜಿಎಂ ವಿಶ್ವವಿದ್ಯಾಲಯದ ಜಿಎಂ ಔಷಧ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (GMIPSR) ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (QCI) ರಾಷ್ಟ್ರೀಯ ಶ್ರೇಯಾಂಕದಲ್ಲಿ QCI ಗ್ರೇಡ್ ‘ಬಿ’ ಮಾನ್ಯತೆ ಪಡೆದು, ಭಾರತದಲ್ಲಿ 97ನೇ ಸ್ಥಾನ ಹಾಗೂ ಕರ್ನಾಟಕದಲ್ಲಿ 11ನೇ ಸ್ಥಾನ ಗಳಿಸಿ ಐತಿಹಾಸಿಕ ಸಾಧನೆ ಮಾಡಿದೆ ಎಂದು ಪ್ರಾಂಶುಪಾಲರಾದ ಡಾ. ಗಿರೀಶ್ ಬೊಳಕಟ್ಟಿ ತಿಳಿಸಿದ್ದಾರೆ.

ಈ ಸಾಧನೆಯೊಂದಿಗೆ, RGUHS, ಬೆಂಗಳೂರು ಸಂಯೋಜಿತ ಕರ್ನಾಟಕದ ಔಷಧ ವಿಜ್ಞಾನ ಕಾಲೇಜುಗಳ ಪೈಕಿ 3ನೇ ಸ್ಥಾನ ಪಡೆದುಕೊಂಡಿದೆ. ಜೊತೆಗೆ, ದೇಶದ ಅತ್ಯಂತ ಕಿರಿಯ ಔಷಧ ವಿಜ್ಞಾನ ಕಾಲೇಜುಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ಭಾರತದ ಟಾಪ್ 100 ಔಷಧ ವಿಜ್ಞಾನ ಕಾಲೇಜುಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. RGUHS, ಬೆಂಗಳೂರುಗೆ ಸಂಯೋಜಿತ ಹಾಗೂ PCI ಅನುಮೋದಿತ ಜಿಎಂಐಪಿಎಸ್‌ಆರ್, ಗುಣಮಟ್ಟದ ಶಿಕ್ಷಣ, ಸಂಶೋಧನೆ ಮತ್ತು ನವೀನತೆಗೆ ನೀಡಿದ ಆದ್ಯತೆಯ ಫಲವಾಗಿ ಈ ರಾಷ್ಟ್ರೀಯ ಮಾನ್ಯತೆಯನ್ನು ಪಡೆದುಕೊಂಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಈ ಯಶಸ್ಸಿಗೆ ಮಾರ್ಗದರ್ಶನ ನೀಡಿದ ಪ್ರಾಂಶುಪಾಲರಾದ ಡಾ. ಗಿರೀಶ್ ಬೊಳಕಟ್ಟಿ, QCI ಸಂಯೋಜಕರಾದ ಡಾ. ರಾಕೇಶ್ ಎಸ್. ಎ. ಹಾಗೂ QCI SPOC ಡಾ. ಜೆ. ತಿಮ್ಮಶೆಟ್ಟಿ ಅವರ ನೇತೃತ್ವ ಮತ್ತು ಸಮರ್ಪಿತ ಕಾರ್ಯವನ್ನು ಸಂಸ್ಥೆ ಶ್ಲಾಘಿಸಿದೆ. ಸಂಸ್ಥೆಯ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಾಧನೆಗಳತ್ತ ಸಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *