ಒಡಿಶಾದ ಬಲ್ಸೋರೆದಲ್ಲಿ ನಡೆದಿರುವ ಒಂದು ಘಟನೆ ಸದ್ಯ ಎಂತವರನ್ನು ವಿಚಲಿತಗೊಳಿಸುವಂತದ್ದಾಗಿದೆ. ವ್ಯಕ್ತಿಯೊಬ್ಬ ತನ್ನದೇ ಕುಡಿಯಾದ 9 ದಿನದ ಕಂದಮ್ಮನನ್ನು 60 ಸಾವಿರ ರೂಪಾಯಿಗೆ ಮಾರಿಕೊಂಡಿದ್ದು ಬೆಳಕಿಗೆ ಬಂದಿದೆ.
ಇತ್ತೀಚೆಗೆ ಶಾಂತಿ ಬೆಹೆರಾ ಎಂಬುವವರು ಪಿಆರ್ಎಂ ಮೆಡಿಕಲ್ ಕಾಲೇಜ್ ಬರೀಪಾದದಲ್ಲಿ ಡಿಸೆಂಬರ್ 9 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಾದ ಬಳಿಕ ಈಕೆಯ ಪತಿ ಧರ್ಮು ಬೆಹೆರಾ ವಾಸವಿರುವ ಪೊಡಾಪೊಡಾ ಗ್ರಾಮದವರು ಅವನ ಬದುಕಲ್ಲಿ ಆದ ಬದಲವಾಣೆಗಳನ್ನು ಕಂಡು ಅನುಮಾನಗೊಂಡಿದ್ದಾರೆ ಏಕಾಏಕಿ ಅವನು ಬೈಕ್ನಲ್ಲಿ ಓಡಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳೀಯರ ಅನುಮಾನವೇ ಕೊನೆಗೂ ನಿಜವಾಗಿದೆ ಕೂಡ.
ಡಿಸೆಂಬರ್ 22 ರಂದು ಹೆರಿಗೆ ಬಳಿಕ ಶಾಂತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದೇ ವೇಳೆ ಆಕೆಯ ಪತಿ ಧರ್ಮು, ಆಗಷ್ಟೇ ಹುಟ್ಟಿದ ಹಸುಗೂಸನ್ನು ಮಕ್ಕಳಿಲ್ಲದ ಸೈಂಕುಲಾದ ದಂಪತಿಗಳಿಗೆ 60 ಸಾವಿರ ರೂಪಾಯಿಗೆ ಮಾರಿದ್ದಾನೆ. ಇಬ್ಬರು ವ್ಯಕ್ತಿಗಳ ಮಧ್ಯಸ್ಥಿಕೆಯಲ್ಲಿ ಈ ಒಂದು ಡೀಲ್ ಕುದುರಿದೆ ಬಂದ ಹಣದಿಂದಲೇ ಬೈಕ್ ಕೊಂಡುಕೊಂಡು ಊರೆಲ್ಲಾ ಸುತ್ತಿದ್ದಾನೆ
ಇವನು ಬೈಕ್ ತೆಗೆದುಕೊಂಡು ಏಕಾಏಕಿ ಸುತ್ತಾಡುತ್ತಿರುವುದನ್ನು ಕಂಡು ಅನುಮಾನಗೊಂಡ ಸ್ಥಳೀಯರು, ಈತನ ವಿರುದ್ಧ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದಾರೆ. ತನಿಖೆಯನ್ನು ಕೈಗೆತ್ತಿಕೊಂಡ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಸ್ತಾ ಪೊಲೀಸರು ಮಗುವನ್ನು ಖರೀದಿ ಮಾಡಿದವರ ಕೈಯಿಂದ ರಕ್ಷಿಸಿದ್ದಾರೆ. ಜೊತೆಗ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್ ಕೂಡ ನೀಡಿದ್ದಾರೆ.
ಮಗುವನ್ನು ಮಾರುವುದಕ್ಕೆ ಆರಂಭದಲ್ಲಿ ಧರ್ಮು ಪತ್ನಿ ಶಾಂತಿ ಒಪ್ಪಿರಲಿಲ್ಲ. ಆದ್ರೆ ಮಗುವನ್ನು ಖರೀದಿದಾರರಷ್ಟು ಚೆನ್ನಾಗಿ ನಮಗೆ ಸಾಕಲು ಸಾಧ್ಯವಿಲ್ಲವೆಂದು ಕೊನೆಗೆ ಒಪ್ಪಿದೆ ಎಂದು ಹೇಳಿದ್ದಾರೆ. ಸದ್ಯ ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ಧಿಯಲ್ಲಿ ಮಗು ಆರೋಗ್ಯವಾಗಿದ್ದು. ತನಿಖೆಯನ್ನು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸರು ಮುಂದುವರಿಸಿದ್ದಾರೆ.
ಸದ್ಯ ಘಟನೆಯ ಕುರಿತು ಎಲ್ಲೆಡೆ ಆಕ್ರೋಶ ಹಾಗೂ ಖಂಡನೆ ವ್ಯಕ್ತಿವಾಗುತ್ತಿದ್ದು ಈ ರೀತಿಯಾ ನಿರ್ಧಾರ ತೆಗೆದುಕೊಳ್ಳಲು ಹೇಗೆ ತಂದೆ ತಾಯಿಗೆ ಮನಸ್ಸು ಬಂತು ಅಂತ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.