Home ಉದ್ಯೋಗ ವಾರ್ತೆ 22 ವರ್ಷದೊಳಗಿನ ಅಭ್ಯರ್ಥಿಗಳಿಗೆ ಅವಕಾಶ: ಇ.ಎಂ.ಇ ಸೆಂಟರ್‌ನಲ್ಲಿ ಅಗ್ನಿವೀರ್ ಟೆಕ್ನಿಕಲ್, ಟ್ರೇಡ್‍ಮನ್ ನೇಮಕಾತಿ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

22 ವರ್ಷದೊಳಗಿನ ಅಭ್ಯರ್ಥಿಗಳಿಗೆ ಅವಕಾಶ: ಇ.ಎಂ.ಇ ಸೆಂಟರ್‌ನಲ್ಲಿ ಅಗ್ನಿವೀರ್ ಟೆಕ್ನಿಕಲ್, ಟ್ರೇಡ್‍ಮನ್ ನೇಮಕಾತಿ

Share
ಅಗ್ನಿವೀರ್
Share

ದಾವಣಗೆರೆ: ಸಿಕಂದರಾಬಾದ್‌ನ ಇ.ಎಂ.ಇ (EME) ತರಬೇತಿ ಕೇಂದ್ರದಲ್ಲಿ ‘ಅಗ್ನಿಪಥ್’ ಯೋಜನೆಯಡಿ ಅಗ್ನಿವೀರ್ ಹುದ್ದೆಗಳ ಭರ್ತಿಗಾಗಿ ಯುಹೆಚ್‍ಕ್ಯೂ (Unit Headquarters Quota) ಕೋಟಾದಡಿ ನೇಮಕಾತಿ ರ‍್ಯಾಲಿಯನ್ನು ಆಯೋಜಿಸಲಾಗಿದೆ. 22 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ವಾರ್ತಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಯಾರಿಗೆ ಅವಕಾಶ?

ಈ ವಿಶೇಷ ನೇಮಕಾತಿ ರ‍್ಯಾಲಿಯಲ್ಲಿ ವೀರ ನಾರಿಯರು (Veer Naris), ಸೇವೆಯಲ್ಲಿರುವ ಸೈನಿಕರು, ಮಾಜಿ ಸೈನಿಕರ ಮಕ್ಕಳು ಹಾಗೂ ಸೈನಿಕರ ಸ್ವಂತ ಸಹೋದರರು (ತಮ್ಮಂದಿರು) ಭಾಗವಹಿಸಲು ಅರ್ಹರಾಗಿರುತ್ತಾರೆ.

ಭರ್ತಿ ಮಾಡಲಾಗುವ ಹುದ್ದೆಗಳು:

  • ಆಗ್ನಿವೀರ್ ಟ್ರೇಡ್‍ಮನ್ (Tradesman)

  • ಆಗ್ನಿವೀರ್ ಟೆಕ್ನಿಕಲ್ (Technical)

  • ಕ್ರೀಡಾ ಕೋಟಾ (Sports Quota)

ರ‍್ಯಾಲಿಯ ಸ್ಥಳ ಮತ್ತು ಸಮಯ:

  • ಸ್ಥಳ: ಮಿಲ್ಕಾ ಸಿಂಗ್ ಕ್ರೀಡಾಂಗಣ, 1 ಟ್ರೈನಿಂಗ್ ಬೆಟಾಲಿಯನ್, ಇ.ಎಂ.ಇ ಸೆಂಟರ್, ಸಿಕಂದರಾಬಾದ್, ತೆಲಂಗಾಣ.

  • ಹಾಜರಾಗಬೇಕಾದ ದಿನಾಂಕ & ಸಮಯ: ಆಗಸ್ಟ್ 29 ರಂದು ಬೆಳಿಗ್ಗೆ 6:00 ಗಂಟೆಗೆ.

  • ಅಂತಿಮ ದಿನಾಂಕ: ನೇಮಕಾತಿ ಪ್ರಕ್ರಿಯೆಗಳು ಅಕ್ಟೋಬರ್ 11 ರವರೆಗೆ ನಡೆಯಲಿವೆ.

ಹೆಚ್ಚಿನ ಮಾಹಿತಿಗೆ ಹಾಗೂ ಸ್ಪಷ್ಟನೆಗೆ ಅಭ್ಯರ್ಥಿಗಳು ಇ.ಎಂ.ಇ ಸೇನಾ ತರಬೇತಿ ಕೇಂದ್ರದ ದೂರವಾಣಿ ಸಂಖ್ಯೆ 040-27863016 ಗೆ ಸಂಪರ್ಕಿಸಬಹುದು.

Share

Leave a comment

Leave a Reply

Your email address will not be published. Required fields are marked *