Home ದಾವಣಗೆರೆ ಮೈಸೂರು ಕಾವಾ ಕಾಲೇಜಿನಲ್ಲಿ M.V.A ಕೋರ್ಸ್‌ಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ!
ದಾವಣಗೆರೆಬೆಂಗಳೂರು

ಮೈಸೂರು ಕಾವಾ ಕಾಲೇಜಿನಲ್ಲಿ M.V.A ಕೋರ್ಸ್‌ಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ!

Share
ಮೈಸೂರು
Share

ದಾವಣಗೆರೆ: ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು ಸಿದ್ದಾರ್ಥನಗರ ಮೈಸೂರು ವತಿಯಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಲಿಗೆ ಪ್ರಥಮ ವರ್ಷದ ಎಂ.ವಿ.ಎ ಸ್ನಾತಕೋತ್ತರ ಪದವಿ ಪ್ರವೇಶಾತಿಗಾಗಿ ಬಿ.ವಿ.ಎ/ಸಮಾನಾಂತರ ಕೋರ್ಸುಗಳಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಕಚೇರಿಯಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 31 ರೊಳಗಾಗಿ ಸಲ್ಲಿಸಬೇಕು.

ಎಂ.ವಿ.ಎ. ಸ್ನಾತಕೋತ್ತರ ಪದವಿಯು ದೃಶ್ಯಕಲೆಯಲ್ಲಿ ಎರಡು ವರ್ಷಗಳ ನಾಲ್ಕು ಸೆಮಿಸ್ಟರ್ ಸಿಬಿಸಿಎಸ್ ಪದ್ಧತಿಯ ಕೋರ್ಸು ಆಗಿದ್ದು, ಈ ಸ್ನಾತಕೋತ್ತರ ಪದ್ಧತಿಯು ಚಿತ್ರಕಲೆ , ಶಿಲ್ಪಕಲೆ ಮತ್ತು ಅಚ್ಚುಕಲೆ, ವಿಷಯಗಳಲ್ಲಿ ವಿಶೇಷ ಅಧ್ಯಯನವನ್ನು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2438931 ಸಂಪರ್ಕಿಸಬಹುದೆಂದು ಕಾಲೇಜಿನ ಡೀನ್ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *