ದಾವಣಗೆರೆ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಕಳವು ಪ್ರಕರಣಗಳಲ್ಲಿ ಪತ್ತೆಯಾದ ಒಟ್ಟು ₹3.91 ಕೋಟಿಗೂ ಅಧಿಕ ಮೌಲ್ಯದ ಸ್ವತ್ತುಗಳನ್ನು ಅವುಗಳ ನಿಜವಾದ ವಾರಸುದಾರರಿಗೆ ಹಿಂತಿರುಗಿಸುವ ಬೃಹತ್ ‘ಪ್ರಾಪರ್ಟಿ ರಿಟರ್ನ್ ಪೆರೇಡ್’ ಕಾರ್ಯಕ್ರಮ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕಶೇಖರ್ ಹೆಚ್. ಟಿ. ಅವರ ನೇತೃತ್ವದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ 2025ರ ಡಿಸೆಂಬರ್ 20 ರಿಂದ 2026ರ ಜುಲೈ 20 ರವರೆಗಿನ ಅವಧಿಯಲ್ಲಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪತ್ತೆಯಾದ ಪ್ರಕರಣಗಳ ಸ್ವತ್ತುಗಳನ್ನು ಹಸ್ತಾಂತರಿಸಲಾಯಿತು ಎಂದು ಎಸ್ಪಿ ಹೆಚ್. ಟಿ. ಶೇಖರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಶಪಡಿಸಿಕೊಂಡ ಹಾಗೂ ಹಸ್ತಾಂತರಿಸಿದ ಸ್ವತ್ತುಗಳ ವಿವರ:
ಪೋಲಿಸ್ ಇಲಾಖೆಯು ಒಟ್ಟು 87 ಪ್ರಕರಣಗಳಿಗೆ ಸಂಬಂಧಿಸಿದಂತೆ ₹3,91,69,136 ಮೌಲ್ಯದ ಕೆಳಗಿನ ಸಾಮಗ್ರಿಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದೆ.
ಚಿನ್ನ ಮತ್ತು ಬೆಳ್ಳಿ ಆಭರಣಗಳು:
₹2,16,65,376 ಮೌಲ್ಯದ 1,668.314 ಗ್ರಾಂ ಬಂಗಾರ ಹಾಗೂ 18,569.854 ಗ್ರಾಂ ಬೆಳ್ಳಿ ಆಭರಣಗಳು. ₹90,67,500 ನಗದು.
ಮೊಬೈಲ್ ಫೋನ್‌ಗಳು:
ಕೇಂದ್ರ ಸರ್ಕಾರದ CEIR ಪೋರ್ಟಲ್ ನೆರವಿನಿಂದ ಪತ್ತೆಹಚ್ಚಿದ ₹56,55,000 ಮೌಲ್ಯದ 377 ವಿವಿಧ ಮಾದರಿಯ ಮೊಬೈಲ್ ಫೋನ್‌ಗಳು.
ವಾಹನಗಳು: ₹22,94,000 ಮೌಲ್ಯದ 31 ವಿವಿಧ ಮಾದರಿಯ ವಾಹನಗಳು.
ಇತರ ಸಾಮಗ್ರಿಗಳು:
₹4,87,260 ಮೌಲ್ಯದ ಕೃಷಿ ಉಪಕರಣಗಳು, ಅಡಿಕೆ, ಬೋರ್‌ವೆಲ್ ವೈರ್ ಮತ್ತು ಮೋಟರ್‌ಗಳು.
ಬುಲ್ಡೋಜರ್ ಹರಿಸಿ ಅನಧಿಕೃತ ಸೈಲೆನ್ಸರ್, ಹೆಲ್ಮೆಟ್ ನಾಶ!
ಇದೇ ಸಂದರ್ಭದಲ್ಲಿ ದಾವಣಗೆರೆ ನಗರ ಸಂಚಾರ ಪೊಲೀಸರು ನಿಯಮ ಬಾಹಿರ ವಾಹನ ಬಿಡಿಭಾಗಗಳ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಜಪ್ತು ಮಾಡಿದ್ದ ವಸ್ತುಗಳನ್ನು ಬುಲ್ಡೋಜರ್ ಮೂಲಕ ಸಂಪೂರ್ಣವಾಗಿ ನಾಶಪಡಿಸಲಾಯಿತು.
2,000ಕ್ಕೂ ಹೆಚ್ಚು ಕಳಪೆ ಗುಣಮಟ್ಟದ ಹಾಫ್ ಹೆಲ್ಮೆಟ್‌ಗಳು, 85ಕ್ಕೂ ಹೆಚ್ಚು ಕರ್ಕಶ ಶಬ್ದ ಉಂಟುಮಾಡುವ ಡಿಫೆಕ್ಟಿವ್ ಸೈಲೆನ್ಸರ್‌ಗಳು, 25 ಶ್ರಿಲ್ ಹಾರ್ನ್‌ಗಳು ಹಾಗೂ 10 ಸ್ಪೀಕರ್ ಡಕ್‌ಗಳನ್ನು ನಾಶಪಡಿಸಲಾಯಿತು ಎಂದು ತಿಳಿಸಿದರು.
ಈ ಪ್ರಾಪರ್ಟಿ ಪೆರೇಡ್‌ನಲ್ಲಿ ನಗರ ಪೊಲೀಸ್ ಉಪಾಧೀಕ್ಷಕ ಶರಣಬಸವೇಶ್ವರ ಬಿ., ಗ್ರಾಮಾಂತರ ಪೊಲೀಸ್ ಠಾಣೆಯ ಡಿವೈಎಸ್ಪಿ ಬಸವರಾಜ್ ಬಿ. ಎಸ್., ಸೈಬರ್ ಠಾಣೆ ಡಿವೈಎಸ್ಪಿ ನಾಗಪ್ಪ ಬಂಕಾಳಿ, ಡಿಎಆರ್ ಡಿವೈಎಸ್ಪಿ ತಿಪ್ಪೇಸ್ವಾಮಿ ಹಾಗೂ ವಿವಿಧ ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಉಮೇಶ್ ಜಿ.ಬಿ., ಶಿಲ್ಪಾ, ನಂಜುಂಡಸ್ವಾಮಿ, ರಾಘವೇಂದ್ರ, ವಸಂತ್, ಸಿದ್ದೇಗೌಡ, ಪಿ.ಎಸ್.ಐ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
- CEIR Portal Mobile Recovery
- DAVANAGERE NEWS
- DAVANAGERE POLICE
- Defective Silencer Destroyed
- Property Return Parade
- SP Shekhar HT
- Stolen Property Recovered
- Traffic Police Operation Davanagere
- ಅನಧಿಕೃತ ಸೈಲೆನ್ಸರ್ ನಾಶ
- ಎಸ್ಪಿ ಶೇಖರ್ ಹೆಚ್ ಟಿ
- ಕಳವು ಮಾಲು ವಾಪಸ್
- ದಾವಣಗೆರೆ ಕ್ರೈಮ್ ನ್ಯೂಸ್
- ದಾವಣಗೆರೆ ಪೊಲೀಸ್
- ದಾವಣಗೆರೆ ಸುದ್ದಿ
- ಪ್ರಾಪರ್ಟಿ ರಿಟರ್ನ್ ಪೆರೇಡ್
- ಸಿಇಐಆರ್ ಪೋರ್ಟಲ್





Leave a comment