Home ದಾವಣಗೆರೆ ಇಮ್ತಿಯಾಜ್ ಅಲಿ ಪುತ್ರಿ ಇಡಾ ಅಲಿ ನಿಶ್ಚಿತಾರ್ಥ: ಕ್ರಿಶ್ ಅಗರ್ವಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಾಲಿವುಡ್ ನಿರ್ದೇಶಕನ ಪುತ್ರಿ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಇಮ್ತಿಯಾಜ್ ಅಲಿ ಪುತ್ರಿ ಇಡಾ ಅಲಿ ನಿಶ್ಚಿತಾರ್ಥ: ಕ್ರಿಶ್ ಅಗರ್ವಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಾಲಿವುಡ್ ನಿರ್ದೇಶಕನ ಪುತ್ರಿ!

Share
ಬಾಲಿವುಡ್
Share

ವೆಬ್ ಡೆಸ್ಕ್, ಸಿನಿಮಾ ಜಗತ್ತು: ಖ್ಯಾತ ಬಾಲಿವುಡ್ ನಿರ್ದೇಶಕ ಇಮ್ತಿಯಾಜ್ ಅಲಿ ಅವರ ಮನೆಯಲ್ಲಿ ಈಗ ಸಂಭ್ರಮದ ವಾತಾವರಣ ಮನೆಮಾಡಿದೆ. ಒಂದೆಡೆ ಅವರ ನಿರ್ದೇಶನದ ‘ಮೈನ್ ವಾಪಸ್ ಆವುಂಗಾ’ (Main Vaapas Aaunga) ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದರೆ, ಮತ್ತೊಂದೆಡೆ ಅವರ ವೈಯಕ್ತಿಕ ಜೀವನದಲ್ಲೂ ದೊಡ್ಡ ಶುಭ ಸುದ್ದಿಯೊಂದು ಹೊರಬಿದ್ದಿದೆ. ಇಮ್ತಿಯಾಜ್ ಅಲಿ ಅವರ ಪುತ್ರಿ ಇಡಾ ಅಲಿ (Ida Ali) ತಮ್ಮ ದೀರ್ಘಕಾಲದ ಗೆಳೆಯ ಕ್ರಿಶ್ ಅಗರ್ವಾಲ್ (Krish Agarwal) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇಡಾ ಅಲಿ ಅವರು ಜುಲೈ 12 ರಂದು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರೋಮ್ಯಾಂಟಿಕ್ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ಈ ಮದುವೆಯ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಜುಲೈ 1, 2026 ರಂದು ನಾರ್ವೆಯ ಸುಂದರವಾದ ‘ವೈಟ್ರೆಸ್ಯಾಂಡ್ ಬೀಚ್’ನಲ್ಲಿ (Ytresand beach) ಕ್ರಿಶ್ ಅವರು ಇಡಾಗೆ ಪ್ರೇಮ ನಿವೇದನೆ (Proposal) ಮಾಡಿದ್ದರು. ಈ ವಿಶೇಷ ಕ್ಷಣದ ವಿಡಿಯೋವನ್ನು ಇಡಾ ಈಗ ಹಂಚಿಕೊಂಡಿದ್ದು, “01/07/26 11pm Ytresand” ಎಂದು ಶೀರ್ಷಿಕೆ ನೀಡಿದ್ದಾರೆ. ವಿಡಿಯೋದಲ್ಲಿ ಇಡಾ ತಮಗೆ ತೊಡಿಸಲಾದ ಡೈಮಂಡ್ ರಿಂಗ್ ಅನ್ನು ಕ್ಯಾಮೆರಾ ಮುಂದೆ ಪ್ರದರ್ಶಿಸಿ ಸಖತ್ ಖುಷಿಯಿಂದ ಮಿಂಚಿದ್ದಾರೆ.

ಯಾರು ಈ ಇಡಾ ಅಲಿ?

ನಿರ್ದೇಶಕ ಇಮ್ತಿಯಾಜ್ ಅಲಿ ಹಾಗೂ ನಿರ್ಮಾಪಕಿ ಪ್ರೀತಿ ಅಲಿ ಅವರ ಪುತ್ರಿಯಾದ ಇಡಾ, ತಂದೆಯಂತೆಯೇ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ಚಾಪ್‌ಮನ್ ಯೂನಿವರ್ಸಿಟಿಯ ಡಾಡ್ಜ್ ಕಾಲೇಜ್ ಆಫ್ ಫಿಲ್ಮ್ ಅಂಡ್ ಮೀಡಿಯಾ ಆರ್ಟ್ಸ್‌ನಲ್ಲಿ ಸಿನಿಮಾ ಮೇಕಿಂಗ್ ವ್ಯಾಸಂಗ ಮಾಡಿರುವ ಇಡಾ, ಕೇವಲ 17ನೇ ವಯಸ್ಸಿನಲ್ಲಿ ‘ಲಿಫ್ಟ್’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದರು. ನಂತರ 2018 ರಲ್ಲಿ ‘ಮಾಯಾ’ ಕಿರುಚಿತ್ರ ಹಾಗೂ ಅಮೆಜಾನ್ ಮಿನಿಟಿವಿಯ ‘ಉಲ್ಜೆ ಹುಯೆ’ ರೋಮ್ಯಾಂಟಿಕ್ ಡ್ರಾಮಾಗೆ ಚಿತ್ರಕಥೆ ಬರೆದಿದ್ದಾರೆ. ಸಿನಿರಂಗದ ಜೊತೆಗೆ ಯುವ ಸಮುದಾಯ ಮತ್ತು ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ‘ರಿಫ್ರೆಶ್’ ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಸಹ ನಡೆಸುತ್ತಿದ್ದಾರೆ.

ಇಮ್ತಿಯಾಜ್ ಅಲಿ ಭಾವಿ ಅಳಿಯ ಕ್ರಿಶ್ ಯಾರು?

ಇಡಾ ಅಲಿ ಕೈ ಹಿಡಿಯಲಿರುವ ಕ್ರಿಶ್ ಅಗರ್ವಾಲ್ ಚಿತ್ರರಂಗಕ್ಕೆ ಸೇರಿದವರಲ್ಲ. ಇಡಾ ಮತ್ತು ಕ್ರಿಶ್ ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ತಮ್ಮ ಪ್ರವಾಸದ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಈ ಜೋಡಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಪುತ್ರಿ ಅಲಿಯಾ ಕಶ್ಯಪ್ ಮತ್ತು ಶೇನ್ ಜೋಡಿಯೊಂದಿಗೆ ಪಹಲ್ಗಾಮ್‌ಗೆ ಪ್ರವಾಸ ಕೈಗೊಂಡಿತ್ತು.

ಶುಭ ಹಾರೈಸಿದ ಬಾಲಿವುಡ್ ತಾರೆಯರು:

ಇಡಾ ಅಲಿ ಅವರ ನಿಶ್ಚಿತಾರ್ಥದ ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್‌ನ ಸ್ಟಾರ್ ಕಿಡ್ಸ್ ಹಾಗೂ ನಟಿ ಖುಷಿ ಕಪೂರ್, ಸೋಶಿಯಲ್ ಮೀಡಿಯಾ ಸೆನ್ಸೇಷನ್ ಓರಿ (Orry), ಅಲಿಯಾ ಕಶ್ಯಪ್ ಹಾಗೂ ಕರೀಮಾ ಬ್ಯಾರಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಹೊಸ ಜೋಡಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ತಂದೆಯ ‘ಮೈನ್ ವಾಪಸ್ ಆವುಂಗಾ’ ಚಿತ್ರದ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇಡಾಗೆ ಈಗ ವೈಯಕ್ತಿಕ ಜೀವನದ ಹೊಸ ಇನ್ನಿಂಗ್ಸ್ ಆರಂಭವಾಗುತ್ತಿರುವುದಕ್ಕೆ ಪೋಷಕರಾದ ಇಮ್ತಿಯಾಜ್ ಮತ್ತು ಪ್ರೀತಿ ಅಲಿ ಹೆಮ್ಮೆ ಪಟ್ಟಿದ್ದಾರೆ.

Share

Leave a comment

Leave a Reply

Your email address will not be published. Required fields are marked *