Home ಕ್ರೈಂ ನ್ಯೂಸ್ BIG NEWS: ದಾವಣಗೆರೆ ಪ್ರತಿಷ್ಠಿತ ಮನೆತನದ ಹಿಂದೂ ಯುವತಿಯರು, ಮಹಿಳೆಯರೇ ಟಾರ್ಗೆಟ್: 72 ಅಶ್ಲೀಲ ವಿಡಿಯೋಗಳು – ಹಣಕ್ಕಾಗಿ ಬೆದರಿಕೆ, ಬಗೆದಷ್ಟು ಬಯಲಾಗ್ತಿದೆ ಇಸ್ಮಾಯಿಲ್ ಕಾಮಕಾಂಡ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

BIG NEWS: ದಾವಣಗೆರೆ ಪ್ರತಿಷ್ಠಿತ ಮನೆತನದ ಹಿಂದೂ ಯುವತಿಯರು, ಮಹಿಳೆಯರೇ ಟಾರ್ಗೆಟ್: 72 ಅಶ್ಲೀಲ ವಿಡಿಯೋಗಳು – ಹಣಕ್ಕಾಗಿ ಬೆದರಿಕೆ, ಬಗೆದಷ್ಟು ಬಯಲಾಗ್ತಿದೆ ಇಸ್ಮಾಯಿಲ್ ಕಾಮಕಾಂಡ!

Share
ದಾವಣಗೆರೆ
Share

ದಾವಣಗೆರೆ: ಪವರ್ ಫಿಟ್ನೆಸ್ ಜಿಮ್ ಹೆಸರಿನಲ್ಲಿ ದಾವಣಗೆರೆಯ ಪ್ರತಿಷ್ಠಿತ ಮನೆತನದ ಮಹಿಳೆಯರು ಮತ್ತು ಯುವತಿಯರನ್ನೇ ಟಾರ್ಗೆಟ್ ಮಾಡಿ ಜಿಮ್ ಜಿಹಾದ್ ಬಲೆಗೆ ಬೀಳಿಸಿಕೊಂಡು ಬೆದರಿಕೆ ಹಾಕುತ್ತಿದ್ದ ಇಸ್ಮಾಯಿಲ್ ನ ಕಾಮಕಾಂಡ ಬಗೆದಷ್ಟು ಬಯಲಾಗ್ತಿದೆ. ಒಂದಲ್ಲಾ ಎರಡಲ್ಲ ಸುಮಾರು 12ಕ್ಕೂ ಹೆಚ್ಚು ಮಹಿಳೆಯರು ಮತ್ತು ಯುವತಿಯರ ಜೊತೆ ಇಸ್ಮಾಯಿಲ್ ರಾಸಲೀಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಮಾತ್ರವಲ್ಲ, 72ಕ್ಕೂ ಹೆಚ್ಚು ವಿಡಿಯೋಗಳು, ಅಶ್ಲೀಲ ಫೋಟೋಗಳು ಇಸ್ಮಾಯಿಲ್ ಬಳಿ ಇದೆ ಎಂಬ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.

ಪ್ರೊಫೆಸರ್, ಎಂಜಿನಿಯರ್, ಸರ್ಕಾರಿ ಉದ್ಯೋಗ ಅಧಿಕಾರಿಗಳು, ಶ್ರೀಮಂತ ಮನೆತನದ ಮಹಿಳೆಯರು ಮತ್ತು ಯುವತಿಯರನ್ನೇ ಟಾರ್ಗೆಟ್ ಮಾಡಿ ಬಲೆ ಹೆಣೆಯುತ್ತಿದ್ದ ಇಸ್ಮಾಯಿಲ್ ಎಂಬ ಆರೋಪವೂ ಕೇಳಿ ಬಂದಿದೆ.

ದಾವಣಗೆರೆ

ಇಸ್ಮಾಯಿಲ್ ಮೊಬೈಲ್, ಲ್ಯಾಪ್ ಟಾಪ್, ಜಿಮ್ ನ ಸಿಸಿಟಿವಿ ಸೇರಿದಂತೆ ಆತನಿಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡು ಪೊಲೀಸರು ಗಂಭೀರವಾದ ತನಿಖೆ ನಡೆಸಿದರೆ ಕರಾಳ ಮುಖ ಮತ್ತಷ್ಟು ಬಯಲಾಗುತ್ತದೆ. ಆದರೆ, ಇಸ್ಮಾಯಿಲ್ ಮಾಡಿರುವ ಘೋರ ಕೃತ್ಯಕ್ಕೆ ಜಿಮ್ ಗೆ ಫಿಟ್ನೆಸ್ ಗೆ ಹೋಗಿದ್ದವರ ಕುಟುಂಬಗಳು ಈಗ ಕಣ್ಣೀರು ಹಾಕುವಂತಾಗಿದೆ. ರಾತ್ರಿ 12 ಗಂಟೆ, ರಾತ್ರಿ 11.30ರ ಸುಮಾರಿನಲ್ಲಿ ಮಹಿಳೆಯರು, ಯುವತಿಯರ ಜೊತೆ ರಾಸಲೀಲೆ ನಡೆಸಿರುವ ಫೋಟೋಗಳು ವಿಡಿಯೋಗಳು ಸಿಕ್ಕಿವೆ. ಮಾತ್ರವಲ್ಲ, ಅಷ್ಟು ಹೊತ್ತಿನಲ್ಲಿ ಮಹಿಳೆಯರು ಮತ್ತು ಯುವತಿಯರನ್ನು ಜಿಮ್ ಗೆ ಕರೆಯಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿರುವ ಇಸ್ಮಾಯಿಲ್ ಪೊಲೀಸರಿಗಾಗಲೀ, ಕಾನೂನಿಗಾಗಲೇ ಭಯಪಡದೇ ನೀಚ ಕೃತ್ಯ ಎಸಗಿದ್ದಾನೆ ಎಂಬುದು ಶ್ರೀರಾಮಸೇನೆ ಆರೋಪ.

ಬಯಲಿಗೆ ಬಂದಿದ್ದೇಗೆ?

ಪತ್ರಿಕಾಗೋಷ್ಛಿಯಲ್ಲಿ ಫೋಟೋ ಮತ್ತು ವಿಡಿಯೋಗಳ ಸಮೇತ ಆರೋಪ ಮಾಡಿದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ನಾವು ಇದಕ್ಕಾಗಿ ಪ್ರತಿಜಿಮ್ ನಲ್ಲಿಯೂ ಹುಡುಗರನ್ನು ಬಿಟ್ಟಿದ್ದೇವೆ. ಇಸ್ಮಾಯಿಲ್ ನಡೆಸುತ್ತಿದ್ದ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪವರ್ ಫಿಟ್ನೆಸ್ ಗೆ ನಮ್ಮ ಇಬ್ಬರು ಯುವಕರು ಹೋಗುತ್ತಿದ್ದರು. ಶ್ರೀರಾಮಸೇನೆ ಮತ್ತು ಹಿಂದೂ ಜಾಗರಣ ವೇದಿಕೆಯು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಈತನ ಚಲನವಲನ, ಜಿಮ್ ನಲ್ಲಿ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿದ ಬಳಿಕ ಆಘಾತಕಾರಿ ವಿಡಿಯೋಗಳು ಸಿಕ್ಕಿವೆ. ಲವ್ ಜಿಹಾದ್, ಕಾರ್ಪೊರೇಟ್ ಜಿಹಾದ್ ಬಳಿಕ ಜಿಮ್ ಜಿಹಾದ್ ದಾವಣಗೆರೆಯಲ್ಲೂ ಶುರುವಾಗಿದೆ. ಹೆಡೆಮುರಿ ಕಟ್ಟಬೇಕಾದ ಪೊಲೀಸರು ಇಷ್ಟೊಂದು ಹೀನ ಕೃತ್ಯ ನಡೆಸಿದ್ದರೂ ಇಸ್ಮಾಯಿಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೂರು ನೀಡಲೆಂದು ಸಂತ್ರಸ್ತರನ್ನು ಕಾಯುವುದನ್ನು ಬಿಟ್ಟು ಸುಮಟೋ ಕೇಸ್ ಹಾಕಿ ಕಾನೂನಿನ ಬಿಗಿ ಏನು ಎಂಬುದನ್ನು ತೋರಿಸಬೇಕಿದೆ ಎಂದು ಮಣಿ ಸರ್ಕಾರ್ ಒತ್ತಾಯಿಸಿದ್ದಾರೆ.

ಒಬ್ಬೊಬ್ಬ ಯುವತಿಗೆ ಹಿಂದೂ ಯುವಕರ ಹೆಸರು :

ಇಸ್ಮಾಯಿಲ್ ಎಷ್ಟು ಕಿರಾತಕ ಎಂದರೆ ಹಿಂದೂ ಯುವತಿಯರಿಗೆ ಆಕಾಶ್, ಅನಿಲ್, ನಿಖಿಲ್ ಸೇರಿದಂತೆ ಇತರೆ ಹೆಸರಿಟ್ಟುಕೊಂಡು ಪುಸಲಾಯಿಸಿ ಪ್ರೇಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಕೈಯಲ್ಲಿ ದೇವರ ದಾರ, ಕೊರಳಲ್ಲಿ ಸರ, ಪವರ್ ಎಂಬ ಫಿಟ್ನೆಸ್ ಸೆಂಟರ್
ಹೆಸರು ಸೇರಿದಂತೆ ತಾನೊಬ್ಬ ಹಿಂದೂ ಯುವಕ ಎಂಬಂತೆ ವರ್ತಿಸುತ್ತಿದ್ದ. ಅವರನ್ನು ಬಳಸಿಕೊಂಡ ಬಳಿಕ ತನ್ನ ನಿಜ ಬಣ್ಣ ತೋರಿಸುತ್ತಿದ್ದ. ಯುವತಿಯರಿಗೆ ಫೋಟೋ, ವಿಡಿಯೋ ತೋರಿಸಿ ಇಲ್ಲವೇ ಪೋಷಕರಿಗೆ ತೋರಿಸಿ ಲಕ್ಷಾಂತರ ರೂಪಾಯಿ ನೀಡುವಂತೆ ಬೆದರಿಕೆ ಹಾಕುತ್ತಿದ್ದ ಎಂದು ಮಣಿ ಸರ್ಕಾರ ದೂರಿದ್ದಾರೆ.

12 ರಿಂದ 13 ಹಿಂದೂ ಯುವತಿಯರು, ಮಹಿಳೆಯರ ಬಲೆಗೆ:

ಇಸ್ಮಾಯಿಲ್ ಬೀಸಿದ ಬಲೆಗೆ ಸುಮಾರು 12 ರಿಂದ 13 ಹಿಂದೂ ಯುವತಿಯರು ಮತ್ತು ಮಹಿಳೆಯರು ಬಿದ್ದಿರುವುದು ನಮಗೆ ಗೊತ್ತಿದೆ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸುಮಾರು 72ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಇಸ್ಮಾಯಿಲ್ ಬಳಿ ಇವೆ. ಪ್ರೊಫೆಸರ್ ಪತ್ನಿಯೊಬ್ಬರಿಗೆ ಟಾರ್ಚರ್ ನೀಡಿದ್ದು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕಠಿಣ ಕ್ರಮಕ್ಕೆ ಆಗ್ರಹ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪು ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಒಂದು ಕೋಮಿನವರನ್ನೇ ಟಾರ್ಗೆಟ್ ಮಾಡಿ ಬೆದರಿಸಿ, ಹಿಂಸೆ ನೀಡಿ ಹಣ ವಸೂಲಿ ಮಾಡುತ್ತಿದ್ದ ಇಸ್ಮಾಯಿಲ್ ನಂಥವರು ಮತ್ತೆ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳದ ರೀತಿಯಲ್ಲಿ ಕ್ರಮ ಜರುಗಿಸಬೇಕು ಎಂದು ಮಣಿ ಸರ್ಕಾರ ಒತ್ತಾಯಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *