Home ದಾವಣಗೆರೆ BIG BREAKING: ದಾವಣಗೆರೆಯಲ್ಲಿ ಫಿಟ್ನೆಸ್ ಹೆಸರಲ್ಲಿ ಜಿಮ್ ಜಿಹಾದ್: ಹಿಂದೂ ಯುವತಿಯರು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಜಿಮ್ ಮಾಲೀಕ ಇಸ್ಮಾಯಿಲ್ ಕೃತ್ಯ ಬಯಲು!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

BIG BREAKING: ದಾವಣಗೆರೆಯಲ್ಲಿ ಫಿಟ್ನೆಸ್ ಹೆಸರಲ್ಲಿ ಜಿಮ್ ಜಿಹಾದ್: ಹಿಂದೂ ಯುವತಿಯರು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಜಿಮ್ ಮಾಲೀಕ ಇಸ್ಮಾಯಿಲ್ ಕೃತ್ಯ ಬಯಲು!

Share
ದಾವಣಗೆರೆ
Share

ದಾವಣಗೆರೆ: ನಗರದ ಸರಸ್ವತಿ ನಗರದಲ್ಲಿರುವ ‘ಪವರ್ ಫಿಟ್ನೆಸ್’ ಜಿಮ್‌ನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆಘಾತಕಾರಿ ಆರೋಪವೊಂದು ಬೆಳಕಿಗೆ ಬಂದಿದ್ದು, ಬೆಣ್ಣೆ ನಗರಿ ದಾವಣಗೆರೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ.

ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಆರೋಪ:

ಕಳೆದ ಮೂರು ವರ್ಷಗಳಿಂದ ಜಿಮ್ ನಡೆಸುತ್ತಿದ್ದ ಇಸ್ಮಾಯಿಲ್ ಎಂಬಾತ, ಜಿಮ್‌ಗೆ ಬರುತ್ತಿದ್ದ ವಿವಾಹಿತ ಮಹಿಳೆಯರು ಹಾಗೂ ಯುವತಿಯರು ಸೇರಿದಂತೆ 10 ಕ್ಕೂ ಹೆಚ್ಚು ಹಿಂದು ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಅಲ್ಲದೆ, ದೌರ್ಜನ್ಯದ ವೇಳೆ ರಹಸ್ಯವಾಗಿ ವೀಡಿಯೋಗಳನ್ನು ಚಿತ್ರೀಕರಿಸಿಕೊಂಡು, ಅವುಗಳನ್ನು ಮುಂದಿಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟಿರುವುದು ಹಾಗೂ ಸಪೋರ್ಟ್ ಮಾಡುವಂತೆ ಬೆದರಿಕೆ ಹಾಕುತ್ತಿದ್ದ ಗಂಭೀರ ಆರೋಪಗಳು ಕೇಳಿಬಂದಿವೆ.

ಆರೋಪಿ ಇಸ್ಮಾಯಿಲ್ ಈಗಾಗಲೇ ಮದುವೆಯಾಗಿದ್ದರೂ, ತಾನು ಹಿಂದು ಎಂದು ಹೇಳಿಕೊಂಡು ಈ ಪವರ್ ಫಿಟ್ನೆಸ್ ಜಿಮ್ ನಡೆಸುತ್ತಿದ್ದ ಎನ್ನಲಾಗಿದೆ.

ಶ್ರೀರಾಮ ಸೇನೆಯಿಂದ ಜಿಮ್‌ಗೆ ಬೀಗ: ಹುಬ್ಬಳ್ಳಿ, ಧಾರವಾಡ ಹಾಗೂ ಬೆಂಗಳೂರಿನಲ್ಲೂ ಇಂತಹ ಜಾಲಗಳು ಸಕ್ರಿಯವಾಗಿವೆ ಎನ್ನಲಾಗುತ್ತಿದ್ದು, ಇದೀಗ ದಾವಣಗೆರೆಯ ಪ್ರಕರಣವನ್ನು ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಬಯಲಿಗೆಳೆದಿದ್ದಾರೆ.

ಆರೋಪ ಕೇಳಿಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಶ್ರೀರಾಮ ಸೇನೆ ಕಾರ್ಯಕರ್ತರು ಸರಸ್ವತಿ ನಗರದ ಪವರ್ ಫಿಟ್ನೆಸ್ ಜಿಮ್‌ಗೆ ಬಾಗಿಲು ಹಾಕಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಾನೂನು ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

Share

Leave a comment

Leave a Reply

Your email address will not be published. Required fields are marked *

Related Articles