ದಾವಣಗೆರೆ: ಪ್ರಸಕ್ತ ಸಾಲಿನ ದೃಶ್ಯಕಲಾ ಮಹಾವಿದ್ಯಾಲಯದ ಬಿ.ವಿ.ಎ ಪದವಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜುಲೈ 15 ಕೊನೆಯದಿನವಾಗಿರುತ್ತದೆ. ಬಿ.ಎ.ಎ ಫೌಂಡೇಶನ್ (1 ವರ್ಷ-2 ಸೆಮಿಸ್ಟರ್) ತರಗತಿ ಪ್ರವೇಶಕ್ಕೆ 10+2 ಅಥವಾ ತತ್ಸಮಾನ ಶಿಕ್ಷಣ ಉತ್ತೀರ್ಣವಾಗಿರುವುದು ಕಡ್ಡಾಯ. ಸ್ನಾತಕ ಪದವಿ ಶಿಕ್ಷಣ 3 ವರ್ಷ-6 ಸೆಮಿಸ್ಟರ್ ಒಟ್ಟು 4 ವರ್ಷಗಳು ವರ್ಷದ ಫೌಂಡೇಶನ್ ನಂತರ ಬಿ.ವಿ.ಎ ಪೇಂಟಿಂಗ್, ಬಿ.ವಿ.ಎ ಅನ್ವಯಿಕ ಕಲಾ, ಬಿ.ವಿಎ ಶಿಲ್ಪಕಲಾ, ಬಿ.ವಿ.ಎ ಆನಿಮೇಶನ್ ವಿಭಾಗಗಳಿದ್ದು ವಿದ್ಯಾರ್ಥಿಗಳು ಈ ವಿಭಾಗಗಳಲ್ಲಿ ಯಾವುದಾದರೂ ಒಂದು ವಿಭಾಗ 8 ಸೆಮಿಸ್ಟರ್‍ಗಳಾಗಿರುತ್ತವೆ. 1 ಆಯ್ದುಕೊಂಡು ಬಿವಿಎ ಸ್ನಾತಕ ಪದವಿಯನ್ನು ಪಡೆಯುವ ಅವಕಾಶ ಇದೆ.
ಬಿ.ವಿ.ಎ ಸ್ನಾತಕ ಪದವಿ ಪಡೆದ ವಿದ್ಯಾರ್ಥಿಗಳಿಗೆ ಎಂ.ವಿ.ಎ ಪೇಂಟಿಂಗ್ ಹಾಗೂ ಎಂ.ವಿ.ಎ ಅನ್ವಯಿಕ ಕಲಾ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ (2 ವರ್ಷ – 4 ಸೆಮಿಸ್ಟರ್) ಅಧ್ಯಯನ ಮಾಡುವ ಅವಕಾಶ ಇದೆ. ಅಲ್ಲದೆ ಸ್ನಾತಕೋತ್ತರ ಪದವಿ ನಂತರ ಪಿಎಚ್‍ಡಿ ಪಡೆಯಲು ಅವಕಾಶವಿದೆ. ಅರ್ಜಿಯನ್ನು ಪ್ರಾಂಶುಪಾಲರ ಕಚೇರಿ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯ, ಕಲಾಗಂಗೋತ್ರಿ, ವಿದ್ಯಾನಗರ ಮುಖ್ಯ ರಸ್ತೆ, ದಾವಣಗೆರೆ 577004 ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ: ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಅಧಿಕೃತ ವೆಬ್‍ಸೈಟ್ https://davangereuniversity.ac.in/fine-arts/ ನ್ನು ವೀಕ್ಷಿಸಬಹುದು. ಅಥವಾ ಮೊ.ಸಂ: 9448414483, 9986687098, 08192-220075 ಸಂಪರ್ಕಿಸಬಹುದೆಂದು ಪ್ರಾಂಶುಪಾಲರು ತಿಳಿಸಿದ್ದಾರೆ.
———
- Bachelor of Visual Arts Karnataka
- BVA Animation
- BVA Applied Art
- BVA course admission
- BVA Painting
- BVA Sculpture
- College of Fine Arts Davanagere
- Davanagere University BVA Admission 2026
- Davanagere University fine arts website
- Last date for BVA application
- MVA course Davanagere
- Visual Arts course details
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
- ಎಂ.ವಿ.ಎ ಸ್ನಾತಕೋತ್ತರ ಪದವಿ
- ಚಿತ್ರಕಲೆ ಮತ್ತು ಶಿಲ್ಪಕಲೆ ಕೋರ್ಸ್
- ದಾವಣಗೆರೆ ವಿಶ್ವವಿದ್ಯಾನಿಲಯ
- ದೃಶ್ಯಕಲಾ ಮಹಾವಿದ್ಯಾಲಯ ದಾವಣಗೆರೆ
- ಬಿ.ವಿ.ಎ ಪದವಿ ಅರ್ಜಿ ಆಹ್ವಾನ
- ಬಿವಿಎ ಆನಿಮೇಶನ್ ಪ್ರವೇಶ
- ಬ್ಯಾಚುಲರ್ ಆಫ್ ವಿಶುವಲ್ ಆರ್ಟ್ಸ್





Leave a comment