Home ಉದ್ಯೋಗ ವಾರ್ತೆ ಫಾರ್ವರ್ಡ್ ಡಿಪ್ಲಾಯ್ಡ್ ಇಂಜಿನಿಯರ್ (FDE) ಹುದ್ದೆಗಳಿಗೆ ಭಾರಿ ಬೇಡಿಕೆ: ಐಟಿ ಉದ್ಯಮದಲ್ಲಿ ಹೊಸ ಕ್ರಾಂತಿ!
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

ಫಾರ್ವರ್ಡ್ ಡಿಪ್ಲಾಯ್ಡ್ ಇಂಜಿನಿಯರ್ (FDE) ಹುದ್ದೆಗಳಿಗೆ ಭಾರಿ ಬೇಡಿಕೆ: ಐಟಿ ಉದ್ಯಮದಲ್ಲಿ ಹೊಸ ಕ್ರಾಂತಿ!

Share
ಇಂಜಿನಿಯರ್
Share

ಬೆಂಗಳೂರು: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಕೃತಕ ಬುದ್ಧಿಮತ್ತೆ (AI) ಕ್ರಾಂತಿ ಸೃಷ್ಟಿಸುತ್ತಿರುವ ಬೆನ್ನಲ್ಲೇ, ಐಟಿ ಉದ್ಯಮದಲ್ಲಿ ಹೊಸ ಮಾದರಿಯ ಉದ್ಯೋಗವೊಂದು ಭಾರಿ ಸದ್ದು ಮಾಡುತ್ತಿದೆ.

ಅದೇ ‘ಫಾರ್ವರ್ಡ್ ಡಿಪ್ಲಾಯ್ಡ್ ಇಂಜಿನಿಯರ್‘ (Forward Deployed Engineer – FDE). ಈ ಹಿಂದೆ ಕೇವಲ ಸಾಫ್ಟ್‌ವೇರ್ ಡೆವಲಪರ್‌ಗಳು ಹಾಗೂ ಐಟಿ ಕನ್ಸಲ್ಟೆಂಟ್‌ಗಳಿಗೆ ಸೀಮಿತವಾಗಿದ್ದ ಜವಾಬ್ದಾರಿಗಳು, ಈಗ ಈ ಹೊಸ ಹುದ್ದೆಯತ್ತ ಮುಖ ಮಾಡಿವೆ.

ಏನಿದು ಫಾರ್ವರ್ಡ್ ಡಿಪ್ಲಾಯ್ಡ್ ಇಂಜಿನಿಯರಿಂಗ್?

ಸಾಮಾನ್ಯ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಕಂಪನಿಯ ಕಚೇರಿಯಲ್ಲಿ ಕುಳಿತು ಕೋಡಿಂಗ್ ಮಾಡುತ್ತಾರೆ.

ಆದರೆ ಈ FDEಗಳು ನೇರವಾಗಿ ಗ್ರಾಹಕರ (ಕ್ಲೈಂಟ್ಸ್) ಕಚೇರಿ ಅಥವಾ ಉದ್ಯಮಗಳ ಒಳಗೆ ಹೋಗಿ ಕೆಲಸ ಮಾಡುತ್ತಾರೆ. ಎಐ ತಂತ್ರಜ್ಞಾನವನ್ನು ದೊಡ್ಡ ದೊಡ್ಡ ಕಂಪನಿಗಳ ದೈನಂದಿನ ಕೆಲಸದ ವ್ಯವಸ್ಥೆಗೆ ಅಳವಡಿಸುವುದು ಇವರ ಮುಖ್ಯ ಜವಾಬ್ದಾರಿಯಾಗಿದೆ.

ಸಿಸ್ಟಮ್ಸ್ ಇಂಟಿಗ್ರೇಟರ್ಸ್ ಸ್ಥಾನ ತುಂಬುತ್ತಿರುವ FDEಗಳು:

ಹಿಂದೆ ಇನ್ಫೋಸಿಸ್, ಅಕ್ಸೆಂಚರ್‌ನಂತಹ ಐಟಿ ಸೇವಾ ಸಂಸ್ಥೆಗಳು ಮಾಡುತ್ತಿದ್ದ ಕೆಲಸಗಳನ್ನು ಈಗ ಓಪನ್-ಎಐ (OpenAI), ಆಂಥ್ರೋಪಿಕಲ್ (Anthropic) ನಂತಹ ಪ್ರಮುಖ ಎಐ ಸಂಶೋಧನಾ ಸಂಸ್ಥೆಗಳೇ ತಮ್ಮ ಸ್ವಂತ FDEಗಳ ಮೂಲಕ ನೇರವಾಗಿ ಮಾಡುತ್ತಿವೆ.

ಎಐ ಮಾದರಿಗಳು (LLMs) ಅತ್ಯಂತ ಸಂಕೀರ್ಣವಾಗಿರುವುದರಿಂದ, ಕಂಪನಿಗಳ ರಹಸ್ಯ ಡೇಟಾವನ್ನು ಸುರಕ್ಷಿತವಾಗಿ ಎಐ ವ್ಯವಸ್ಥೆಗೆ ಜೋಡಿಸಲು ಈ ಪರಿಣಿತ ಇಂಜಿನಿಯರ್‌ಗಳ ಅಗತ್ಯವಿದೆ.

ಕೋಡಿಂಗ್ ಜ್ಞಾನದ ಜೊತೆಗೆ ಉದ್ಯಮದ ಸೂಕ್ಷ್ಮತೆಗಳನ್ನು ಅರಿತುಕೊಳ್ಳುವ ಸಾಮರ್ಥ್ಯ ಹೊಂದಿರುವ ಈ ವೃತ್ತಿಪರರಿಗೆ ಮುಂಬರುವ ದಿನಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *