Home ದಾವಣಗೆರೆ ಒಳಗೆ ಸೇರಿದರೆ ಗುಂಡು… ಹುಡುಗಿ ಆಗುವಳು ರಾಂಗು ರಾಂಗು: ದಾವಣಗೆರೆಯಲ್ಲಿ ಎಣ್ಣೆ ಏಟಲ್ಲಿ ಮಹಿಳಾ ಪಿಎಸ್ಐ ಮೇಲೆ ಯುವತಿ ಹಲ್ಲೆ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಒಳಗೆ ಸೇರಿದರೆ ಗುಂಡು… ಹುಡುಗಿ ಆಗುವಳು ರಾಂಗು ರಾಂಗು: ದಾವಣಗೆರೆಯಲ್ಲಿ ಎಣ್ಣೆ ಏಟಲ್ಲಿ ಮಹಿಳಾ ಪಿಎಸ್ಐ ಮೇಲೆ ಯುವತಿ ಹಲ್ಲೆ!

Share
ದಾವಣಗೆರೆ
Share

ದಾವಣಗೆರೆ: ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎಂಬ ಹಾಡಿನಂತೆ ವಿಪರೀತ ಮದ್ಯಸೇವನೆ ಮಾಡಿದ್ದ ದಾವಣಗೆರೆಯ ಪ್ರತಿಷ್ಠಿತ ಮನೆತನದ ಯುವತಿ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಮಹಿಳಾ ಪಿಎಸ್ಐ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಎಣ್ಣೆ ನಶೆಯಲ್ಲಿ ಯುವತಿ ರಂಪಾಟ ಮಾಡಿದ್ದು, ದಾವಣಗೆರೆ ಪ್ರತಿಷ್ಠಿತ ಮನೆತನದ ಯುವತಿ ಎಂದು ಗೊತ್ತಾಗಿದೆ. ಥಾರ್ ಕಾರು ಚಾಲನೆ ಮಾಡುತ್ತಿದ್ದ ಯುವತಿಯನ್ನು ಪೊಲೀಸರು ತಪಾಸಣೆಗೆ ನಿಲ್ಲಿಸಿದ್ದಾರೆ. ಈ ವೇಳೆ ಕುಡಿದ ಮತ್ತಿನ ಗುಂಗಿನಲ್ಲಿದ್ದ ಯುವತಿ ಪೊಲೀಸರಿಗೆ ಲಾಕ್ ಆಗಿದ್ದಾಳೆ.

ದಾವಣಗೆರೆಯ ಶಾಮನೂರು ರಸ್ತೆಯಲ್ಲಿ ಪೊಲೀಸರು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಥಾರ್ ಕಾರು ಚಾಲನೆ ಮಾಡಿಕೊಂಡು ಯುವತಿ ಬಂದಿದ್ದಾಳೆ. ಆಗ ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಗೆ ಪೊಲೀಸರು ಮನವಿ ಮಾಡಿದ್ದಾರೆ. ಆಗ ಯುವತಿ ಕಾರಿನಲ್ಲೇ ಕುಳಿತು ಅವಾಚ್ಯ ಶಬ್ಧಗಳಿಂದ ಪೊಲೀಸರನ್ನು ನಿಂದಿಸಿದ್ದಾಳೆ. ಮಹಿಳಾ ಪಿಎಸ್ಐ ಮೇಲೆ ಕಾಲಿನಿಂದ ಒದ್ದು ರಂಪಾಟ ಮಾಡಿದ್ದಾಳೆ. ಅವಾಚ್ಯ ಶಬ್ದಗಳಿಂದ ಪೊಲೀಸರನ್ನು ಆಕೆ ನಿಂದಿಸಿದ್ದಾಳೆ.

ಪೊಲೀಸರ ಮನವಿಗೆ ಕ್ಯಾರೇ ಎನ್ನದ ಯುವತಿ:

ಪೊಲೀಸರು ಯುವತಿಗೆ ಶಾಂತಯುತವಾಗಿ ಮನವಿ ಮಾಡಿದರು. ಕಾರಿನಿಂದ ಕೆಳಗಿಳಿದು ಬಾರಮ್ಮ ಎಂದರೆ ಆಕೆ ಐದು ನೂರು ರೂಪಾಯಿ ಕೊಟ್ಟರೆ ಸಾಕು. ನಿಮ್ಮಂಥವರನ್ನು ತುಂಬಾ ಜನರನ್ನೇ ನೋಡಿದ್ದೇನೆ. ನನ್ನನ್ನು ನೀವು ಏನು ಮಾಡಲಿಕ್ಕಾಗದು. ಏನನ್ನೂ ಕಿತ್ತುಕೊಳ್ಳಲು ಆಗದು ಎಂದೆಲ್ಲಾ ಕೆಟ್ಟ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾಳೆ. ಕುಡಿದು ತೂರಾಡಿದ್ದಾಳೆ. ಕೈ ಬೆರಳು ತೋರಿಸಿ ಐ ಡೋಂಟ್ ಕೇರ್ ಎಂದೆಲ್ಲಾ ಬೆದರಿಕೆ ಹಾಕಿದ್ದಾಳೆ. ನೀನು ಕುಡಿದಿಲ್ಲ ಎಂದರೆ ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡಲು ಊದಮ್ಮ ಎಂದರೆ ಡೆಮೋ ತೋರಿಸಿ. ನಾನು ಸರಿಯಾಗಿಯೇ ಇದ್ದೇನೆ. ಯಾವ ಸ್ಕ್ವಾಡೋ. ನನ್ನನ್ನು ಮುಟ್ಟಿದರೆ ಸುಮ್ನನೆ ಇರಲ್ಲ ಎಂದೆಲ್ಲಾ ನಾಟಕವಾಡಿದ್ದಾಳೆ.

ಯುವತಿಯ ರಂಪಾಟ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಯುವತಿ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೊಡ್ಡ ಮನೆತನದ ಯುವತಿ ಆದ ಕಾರಣ ಪೊಲೀಸರು ಆಕೆಯ ಹೆಸರು ಬಹಿರಂಗಪಡಿಸಿಲ್ಲ.

Share

Leave a comment

Leave a Reply

Your email address will not be published. Required fields are marked *