Home ಕ್ರೈಂ ನ್ಯೂಸ್ ಉದ್ಯಮಿ, ಭಾವಿ ಪತಿ ಕೊಂದ ಬಳಿಕ ಹಂತಕಿ ಸೆಕ್ಯೂರಿಟಿ ಗಾರ್ಡ್ ಗೆ ಮೊದಲು ಹೇಳಿದ್ದೇ ಇದನ್ನೇ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಉದ್ಯಮಿ, ಭಾವಿ ಪತಿ ಕೊಂದ ಬಳಿಕ ಹಂತಕಿ ಸೆಕ್ಯೂರಿಟಿ ಗಾರ್ಡ್ ಗೆ ಮೊದಲು ಹೇಳಿದ್ದೇ ಇದನ್ನೇ!

Share
ಉದ್ಯಮಿ
Share

ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಲೋಹಗಡ ಕೋಟೆಯಲ್ಲಿ 26 ವರ್ಷದ ಉದ್ಯಮಿ ಕೇತನ್ ಅಗರ್ವಾಲ್ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಭೀಕರ ಕೊಲೆ ನಡೆದ ತಕ್ಷಣವೇ ಮುಖ್ಯ ಆರೋಪಿ ಹಾಗೂ ಕೇತನ್ ಭಾವಿ ಪತ್ನಿ ಸಿಯಾ ಗೋಯಲ್ ಆಡಿದ ಮೊದಲ ಮಾತುಗಳನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ.

ಘಟನೆ ಬೆನ್ನಲ್ಲೇ ಸಿಯಾ ಆಡಿದ್ದೇನು?

ಲೋಹಗಡ ಕೋಟೆಯ ಸೆಕ್ಯೂರಿಟಿ ಗಾರ್ಡ್ ಧೀರಜ್ ಜಾಧವ್ ಮಾಧ್ಯಮಗಳೊಂದಿಗೆ ಮಾತನಾಡಿ, “ನನಗೆ ದೂರದಿಂದ ಪ್ರವಾಸಿಗರ ಕಿರುಚಾಟ ಕೇಳಿಸಿತು. ತಕ್ಷಣ ನಾನು ಧಾವಿಸಿ ಹೋಗಿ ಏನಾಯಿತು ಎಂದು ಸಿಯಾ ಗೋಯಲ್ ಅವರನ್ನು ಕೇಳಿದೆ. ಅದಕ್ಕೆ ಅವಳು, ‘ಯಹಾನ್ ಸೆ ಕೋಯಿ ಗಿರ್ ಗಯಾ ಹೈ’ (ಇಲ್ಲಿಂದ ಯಾರೋ ಕೆಳಗೆ ಬಿದ್ದಿದ್ದಾರೆ) ಎಂದು ಹೇಳಿ, ‘ಕಾಪಾಡಿ, ಕಾಪಾಡಿ’ ಎಂದು ಜೋರಾಗಿ ಕಿರುಚುತ್ತಿದ್ದಳು” ಎಂದು ತಿಳಿಸಿದ್ದಾರೆ.

ಸಿಯಾ ಗಲಿಬಿಲಿಯಿಂದ ವರ್ತಿಸುತ್ತಿದ್ದನ್ನು ನೋಡಿ ಹೆಚ್ಚಿನ ಪ್ರಶ್ನೆ ಕೇಳದ ಭದ್ರತಾ ಸಿಬ್ಬಂದಿ, ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಮದುವೆ ಫಿಕ್ಸ್ ಬೆನ್ನಲ್ಲೇ ಪ್ರಿಯಕರನೊಂದಿಗೆ ಸ್ಕೆಚ್!

ರಿಯಲ್ ಎಸ್ಟೇಟ್ ಸಂಸ್ಥೆಯ ನಿರ್ದೇಶಕರಾಗಿದ್ದ ಕೇತನ್ ಅಗರ್ವಾಲ್ ಹಾಗೂ ಸಿಯಾ ಗೋಯಲ್ ಅವರಿಗೆ ಕಳೆದ ಫೆಬ್ರವರಿಯಲ್ಲಿ ನಿಶ್ಚಿತಾರ್ಥವಾಗಿತ್ತು. ನವೆಂಬರ್‌ನಲ್ಲಿ ಉದಯ್‌ಪುರದ ಅರಮನೆಯಲ್ಲಿ ಅದ್ಧೂರಿ ಮದುವೆಗೆ ತಯಾರಿ ನಡೆದಿತ್ತು. ಆದರೆ ಸಿಯಾ, ತನ್ನ ಪ್ರಿಯಕರ ಚೇತನ್ ಚೌಧರಿ ಜೊತೆ ಸೇರಿ ಕೇತನ್ ಕೊಲೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರು ಕಳೆದ 6 ತಿಂಗಳಲ್ಲಿ 2,004 ಬಾರಿ ಫೋನ್ ಕರೆ ಮಾಡಿ, ಸುಮಾರು 238 ಗಂಟೆಗಳ ಕಾಲ ಮಾತನಾಡಿದ್ದರು.

ಕೊಲೆಗೆ ಮೂರನೇ ಯತ್ನದಲ್ಲಿ ಯಶಸ್ಸು:

ಜೂನ್ 18 ರಂದು ಕೊಲೆ ಮಾಡುವ ಮುನ್ನ ಪುಣೆಯ ಕೆಫೆಯೊಂದರಲ್ಲಿ ಭೇಟಿಯಾಗಿದ್ದ ಸಿಯಾ ಮತ್ತು ಪ್ರಿಯಕರ ಚೇತನ್, ಲೋಹಗಡ ಕೋಟೆಯಲ್ಲಿ ತಳ್ಳಲು ಸೂಕ್ತ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಹಿಂದೆ ಮೇ 31 ಮತ್ತು ಜೂನ್ 14 ರಂದು ಸಹ ಕೇತನ್‌ನನ್ನು ಕೋಟೆಯಿಂದ ತಳ್ಳಲು ಸಿಯಾ ಯತ್ನಿಸಿದ್ದಳು. ಜೂನ್ 14 ರಂದು ಕೇತನ್ ಕಂದಕಕ್ಕೆ ಬೀಳುವಾಗ ಪೊದೆಯನ್ನು ಹಿಡಿದು ಬದುಕುಳಿದಿದ್ದಾಗ, ಹಾವಿನಿಂದ ರಕ್ಷಿಸಲು ಹೀಗೆ ಮಾಡಿದೆ ಎಂದು ಸಿಯಾ ಕಟ್ಟುಕಥೆ ಕಟ್ಟಿದ್ದಳು. ಸದ್ಯ ಪೊಲೀಸರು ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles