Home ದಾವಣಗೆರೆ ಪುಣೆ ಲೋಹಗಢ್ ಕೋಟೆ ಕೊಲೆ ಹಾರರ್: “ನನ್ನ ಮಗಳು ತಪ್ಪಿತಸ್ಥಳಾಗಿದ್ದರೆ ಗಲ್ಲಿಗೇರಿಸಿ” ಎಂದ ಆರೋಪಿ ಸಿಯಾ ಗೋಯಲ್ ತಾಯಿ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಪುಣೆ ಲೋಹಗಢ್ ಕೋಟೆ ಕೊಲೆ ಹಾರರ್: “ನನ್ನ ಮಗಳು ತಪ್ಪಿತಸ್ಥಳಾಗಿದ್ದರೆ ಗಲ್ಲಿಗೇರಿಸಿ” ಎಂದ ಆರೋಪಿ ಸಿಯಾ ಗೋಯಲ್ ತಾಯಿ!

Share
ಕೊಲೆ
Share

ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣ ಲೋಹಗಢ್ ಕೋಟೆಯಲ್ಲಿ (Lohagad Fort) ನಡೆದ 26 ವರ್ಷದ ಪುಣೆ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆರಂಭದಲ್ಲಿ ಚಾರಣದ (Trekking) ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ ಎಂದು ಬಿಂಬಿಸಲಾಗಿದ್ದ ಈ ಘಟನೆ, ಈಗ ಪ್ರೇಯಸಿ ಮತ್ತು ಆಕೆಯ ಪ್ರೇಮಿ ನಡೆಸಿದ ವ್ಯವಸ್ಥಿತ ಕೊಲೆ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.

ಇದೀಗ ಈ ಭೀಕರ ಕೃತ್ಯದ ಕುರಿತು ಆರೋಪಿ ಸಿಯಾ ಗೋಯಲ್ ಹೆತ್ತವರೇ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ನನ್ನ ಮಗಳು ತಪ್ಪಿತಸ್ಥಳಾಗಿದ್ದರೆ ಆಕೆಗೆ ಕಠಿಣ ಶಿಕ್ಷೆಯಾಗಲಿ. ಆಕೆಯನ್ನು ಗಲ್ಲಿಗೇರಿಸಿ, ಇದನ್ನು ಒಬ್ಬ ತಾಯಿಯಾಗಿ ನಾನು ಹೇಳುತ್ತಿದ್ದೇನೆ” ಎಂದು ಸಿಯಾ ಗೋಯಲ್ ತಾಯಿ ಮಾಧ್ಯಮಗಳಿಗೆ ಕಣ್ಣೀರಿನ ಹೇಳಿಕೆ ನೀಡಿದ್ದಾರೆ. ಇತ್ತ ಆಘಾತದಿಂದ ಆಸ್ಪತ್ರೆ ಸೇರಿರುವ ಸಿಯಾ ತಂದೆ ಪ್ರವೀಣ್ ಗೋಯಲ್ ಕೂಡ, “ತಪ್ಪಿತಸ್ಥರು ಯಾರೇ ಆಗಿರಲಿ, ನನ್ನ ಮಗಳೇ ಆಗಿದ್ದರೂ ಆಕೆಗೆ ಮರಣದಂಡನೆ ವಿಧಿಸಬೇಕು” ಎಂದು ಹೇಳಿದ್ದಾರೆ.

ಕೊಲೆಯ ಹಿನ್ನೆಲೆ ಮತ್ತು ರಹಸ್ಯ ಬಯಲಾಗಿದ್ದು ಹೇಗೆ?

ಕೇತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್ ಅವರಿಗೆ ಫೆಬ್ರವರಿಯಲ್ಲಿ ನಿಶ್ಚಿತಾರ್ಥವಾಗಿದ್ದು, ನವೆಂಬರ್‌ನಲ್ಲಿ ಉದಯಪುರದ ಅರಮನೆಯೊಂದರಲ್ಲಿ ಭವ್ಯ ವಿವಾಹಕ್ಕೆ ಸಿದ್ಧತೆ ನಡೆದಿತ್ತು. ಆದರೆ ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ. ತಾನು ಪ್ರೀತಿಸುತ್ತಿದ್ದ ಚೇತನ್ ಬಾಬುಲಾಲ್ ಚೌಧರಿ ಎಂಬಾತನೊಂದಿಗೆ ಸೇರಿ ಕೇತನ್‌ನನ್ನು ಮುಗಿಸಲು ಜೂನ್ 18 ರಂದು ಸ್ಕೆಚ್ ಹಾಕಿದ್ದಳು.

ಬಿಸಿಲಿದ್ದರೂ ಆರೋಪಿ ಚೇತನ್ ಹೂಡಿ (Hoodie) ಧರಿಸಿ ಇವರನ್ನು ಹಿಂಬಾಲಿಸುತ್ತಿದ್ದ ಸಿಸಿಟಿವಿ ದೃಶ್ಯಾವಳಿ ಮತ್ತು ಇಬ್ಬರ ನಡುವೆ ನಡೆದ 2,004 ಫೋನ್ ಕರೆಗಳ ಡಿಜಿಟಲ್ ಪುರಾವೆಗಳ ಆಧಾರದ ಮೇಲೆ ಪೊಲೀಸರು ಇಬ್ಬರನ್ನೂ ಬಂಧಿಸಿ ತನಿಖೆ ತೀವ್ರಗೊಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles