ಬೆಂಗಳೂರು: ದಾವಣಗೆರೆಯ ಹರಿಹರ ತಾಲೂಕಿನಲ್ಲಿ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಉತ್ತರ ಪ್ರದೇಶ ಮೂಲದ 20 ವರ್ಷದ ಯುವಕ ಸುಹೇಲ್ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ಗಡಿ ಆಚೆಗಿನ ಶಂಕಿತ ವ್ಯಕ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಹರಿಹರಕ್ಕೆ ಪೇಂಟಿಂಗ್ ಕೆಲಸಕ್ಕಾಗಿ ಬಂದಿದ್ದ ಸುಹೇಲ್, ಸಾಮಾಜಿಕ ಜಾಲತಾಣಗಳ ಮೂಲಕ ಆನ್ಲೈನ್ ಆಮೂಲಾಗ್ರೀಕರಣ (Radicalisation) ಗುಂಪುಗಳೊಂದಿಗೆ ಗುರುತಿಸಿಕೊಂಡಿದ್ದ.
ಆತನ ಮೊಬೈಲ್ ಮತ್ತು ವಾಟ್ಸಾಪ್ ಡೇಟಾವನ್ನು ಪರಿಶೀಲಿಸಿದಾಗ ಪಾಕಿಸ್ತಾನದ ಹ್ಯಾಂಡ್ಲರ್ಗಳೊಂದಿಗೆ ಚಾಟ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಜಾಲದ ಹಿಂದಿರುವ ಉದ್ದೇಶ ಹಾಗೂ ಇತರ ಶಂಕಿತರ ಪತ್ತೆಗಾಗಿ ರಾಜ್ಯ ಪೊಲೀಸರು ಕೇಂದ್ರ ತನಿಖಾ ಸಂಸ್ಥೆಗಳ ನೆರವು ಪಡೆಯುತ್ತಿದ್ದಾರೆ.
ಘಟನೆ ಹಿನ್ನೆಲೆ:
ಕರ್ನಾಟಕ ಪೊಲೀಸ್ ಮತ್ತು ಕೇಂದ್ರ ಗುಪ್ತಚರ ಇಲಾಖೆಯ ಜಂಟಿ ಜಾಲದಲ್ಲಿ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರನೊಬ್ಬ ಸಿಕ್ಕಿಬಿದ್ದಿದ್ದಾನೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಸುಹೇಲ್ (20) ಎಂಬಾತನನ್ನು ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಬಂಧಿಸಲಾಗಿದೆ.
ಪೇಂಟರ್ ಸೋಗಿನಲ್ಲಿ ವಾಸ:
ಯುಪಿ ಮೂಲದ ಈತ ಜಿಲ್ಲೆಗೆ ಬಂದು ಕೇವಲ 15 ದಿನಗಳಾಗಿದ್ದು, ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಪೇಂಟರ್ ಆಗಿ ಹಾಗೂ ವಲಸೆ ಕಾರ್ಮಿಕನ ಸೋಗಿನಲ್ಲಿ ಬಾಡಿಗೆ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶೇಖರ್ ಹೆಚ್.ಟಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ತುಮಕೂರು ಮತ್ತು ದಾವಣಗೆರೆಯಲ್ಲಿ ಬಂಧಿಸಲಾಗಿದ್ದ ಇಬ್ಬರು ಶಂಕಿತರ ವಿಚಾರಣೆ ವೇಳೆ ಸಿಕ್ಕ ಮಹತ್ವದ ಸುಳಿವು ಆಧರಿಸಿ ಈ ಜಂಟಿ ದಾಳಿ ನಡೆಸಲಾಗಿದೆ.
ಪಾಕಿಸ್ತಾನದ ಲಿಂಕ್ ಬಯಲು:
ಆರೋಪಿಯ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಖಾತೆಯನ್ನು ಪರಿಶೀಲಿಸಿದಾಗ ಆತ ಪಾಕಿಸ್ತಾನ ಮೂಲದ ಹ್ಯಾಂಡ್ಲರ್ಗಳು ಹಾಗೂ ಆನ್ಲೈನ್ ಉಗ್ರಗಾಮಿ ಗುಂಪುಗಳೊಂದಿಗೆ ನೇರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, “ಗಡಿ ಆಚೆಯಿರುವ ವ್ಯಕ್ತಿಗಳೊಂದಿಗೆ ಆತ ಸಂಪರ್ಕದಲ್ಲಿದ್ದ ಪ್ರಾಥಮಿಕ ಮಾಹಿತಿ ಸಿಕ್ಕ ತಕ್ಷಣವೇ ವಶಕ್ಕೆ ಪಡೆಯಲಾಗಿದೆ. ಆತನ ಮುಂದಿನ ಸಂಚು ಏನಿತ್ತು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ” ಎಂದಿದ್ದಾರೆ. ಸದ್ಯ ಬಂಧಿತನನ್ನು ಬಿಗಿ ಭದ್ರತೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ತುಮಕೂರಿಗೆ ಕರೆದೊಯ್ಯಲಾಗಿದ್ದು, ಕೇಂದ್ರ ಸಂಸ್ಥೆಗಳ ನೆರವು ಪಡೆಯಲಾಗುತ್ತಿದೆ.
- Davanagere arrest
- davanagere terrorist arrest kannada news
- Harihara police
- online radicalisation network.
- Pakistan links
- Priyank Kharge
- suspected terrorist suhail karnataka
- Terror Suspect Suhail
- ಆನ್ಲೈನ್ ಉಗ್ರಗಾಮಿ ಜಾಲ
- ಕರ್ನಾಟಕ ಪೊಲೀಸ್ ಆಪರೇಷನ್
- ದಾವಣಗೆರೆ ಕ್ರೈಮ್ ನ್ಯೂಸ್
- ದಾವಣಗೆರೆ ಬಂಧನ
- ದಾವಣಗೆರೆ ಶಂಕಿತ ಉಗ್ರನ ಬಂಧನ
- ಪಾಕಿಸ್ತಾನ ಉಗ್ರ ಸಂಘಟನೆ ಲಿಂಕ್
- ಪಾಕಿಸ್ತಾನ ಸಂಪರ್ಕ
- ಪ್ರಿಯಾಂಕ್ ಖರ್ಗೆ
- ಶಂಕಿತ ಉಗ್ರ ಸುಹೇಲ್
- ಸುಹೇಲ್ ಅರೆಸ್ಟ್
- ಹರಿಹರ ಗ್ರಾಮಾಂತರ ಪೊಲೀಸ್
- ಹರಿಹರ ಪೊಲೀಸ್





Leave a comment