ದಾವಣಗೆರೆ: ಕೇವಲ ಒಂದು ರಕ್ತಸಿಕ್ತ ಆಕಸ್ಮಿಕ ಬೆರಳು ಮುದ್ರೆಯ (Chance Print) ಆಧಾರದ ಮೇಲೆ ಸಂಕೀರ್ಣ ಕೊಲೆ ಮತ್ತು ದರೋಡೆ ಪ್ರಕರಣವನ್ನು ಭೇದಿಸಿ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ದಾವಣಗೆರೆ ಪೊಲೀಸ್ ತಂಡದ ಸಾಧನೆಗೆ ಈಗ ರಾಷ್ಟ್ರ ಮಟ್ಟದ ಅತ್ಯುನ್ನತ ಗೌರವ ಸಂದಿದೆ.
ನವದೆಹಲಿಯ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವತಿಯಿಂದ ಜೂನ್ 19 ಮತ್ತು 20ರಂದು ಆಯೋಜಿಸಲಾಗಿದ್ದ 26ನೇ ಅಖಿಲ ಭಾರತ ಬೆರಳು ಮುದ್ರೆ ನಿರ್ದೇಶಕರ ಸಮ್ಮೇಳನದಲ್ಲಿ, ದಾವಣಗೆರೆ ಪೂರ್ವ ವಲಯದ ಬೆರಳು ಮುದ್ರೆ ಸಂಗ್ರಹಾಲಯದ ಡಿವೈಎಸ್ಪಿ ರುದ್ರೇಶ ಎ.ಕೆ. ಅವರು ಮಂಡಿಸಿದ ಪ್ರಸ್ತುತಿಗೆ ದೇಶದಲ್ಲೇ “ಪ್ರಥಮ ಸ್ಥಾನ” ಲಭಿಸಿದೆ.
ಪ್ರಕರಣದ ಹಿನ್ನೆಲೆ:
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2022 ರಲ್ಲಿ ನಡೆದಿದ್ದ ಘೋರ ಕೊಲೆ, ಸಾಕ್ಷ್ಯ ನಾಶ ಹಾಗೂ ದರೋಡೆ ಪ್ರಕರಣದಲ್ಲಿ (ಮೊ.ಸಂ: 27/2022, ಕಲಂ: 302, 201, 397 ಐಪಿಸಿ) ತನಿಖಾ ತಂಡಕ್ಕೆ ಯಾವುದೇ ಪ್ರಮುಖ ಸುಳಿವು ಸಿಕ್ಕಿರಲಿಲ್ಲ. ಆದರೆ, ಅಪರಾಧ ಸ್ಥಳದಲ್ಲಿದ್ದ ರಕ್ತಸಿಕ್ತ ಆಕಸ್ಮಿಕ ಬೆರಳು ಮುದ್ರೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ ಬೆರಳು ಮುದ್ರೆ ಘಟಕವು ಆರೋಪಿಯನ್ನು ನಿಖರವಾಗಿ ಪತ್ತೆಹಚ್ಚಿತ್ತು. ಈ ಬಲವಾದ ತಾಂತ್ರಿಕ ಸಾಕ್ಷ್ಯದ ಆಧಾರದ ಮೇಲೆ ಘನ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಹೆಮ್ಮೆಯ ಸನ್ಮಾನ:
ಅಖಿಲ ಭಾರತ ಮಟ್ಟದ “ಅತ್ಯುತ್ತಮ ಪತ್ತೆ ಪ್ರಕರಣ” ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದ ಡಿವೈಎಸ್ಪಿ ರುದ್ರೇಶ ಎ.ಕೆ. ಅವರನ್ನು ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ (IGP) ಡಾ. ಬಿ. ಆರ್. ರವಿಕಾಂತೇಗೌಡ, ಮತ್ತು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಶೇಖರ್ ಹೆಚ್. ಟಿ. ಅವರು ಇಂದು ಅಧಿಕೃತವಾಗಿ ಅಭಿನಂದಿಸಿ, ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಸಮಸ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಶುಭ ಕೋರಿದ್ದಾರೆ.
- All India Fingerprint Conference
- Chance Print Detection
- DAVANAGERE POLICE
- Dr BR Ravikanthegowda IPS
- DySP Rudresh AK
- First Prize
- Karnataka Police Achievement.
- Murder Case Solved
- NCRB Award
- Shekhar HT IPS
- ಅಪರಾಧ ತನಿಖೆ
- ಎನ್ಸಿಆರ್ಬಿ ಪ್ರಶಸ್ತಿ
- ಡಿವೈಎಸ್ಪಿ ರುದ್ರೇಶ್ ಎ ಕೆ
- ದಾವಣಗೆರೆ ಗ್ರಾಮಾಂತರ ಪೊಲೀಸ್
- ದಾವಣಗೆರೆ ಪೊಲೀಸ್
- ಪ್ರಥಮ ಸ್ಥಾನ
- ಬೆರಳು ಮುದ್ರೆ ತಂತ್ರಜ್ಞಾನ
- ಬೆರಳು ಮುದ್ರೆ ಸಮ್ಮೇಳನ
- ರವಿಕಾಂತೇಗೌಡ ಐಪಿಎಸ್.
- ಶೇಖರ್ ಹೆಚ್.ಟಿ





Leave a comment