SUDDIKSHANA KANNADA NEWS/ DAVANAGERE/ DATE:02-12-2024
ದಾವಣಗೆರೆ: ದಾವಣಗೆರೆಯ ಆರೈಕೆ ಆಸ್ಪತ್ರೆಯು ತನ್ನ ನೂತನ ಆರ್ಥೋಪಿಡಿಕ್ ವಿಭಾಗವನ್ನು ಬೆಂಗಳೂರಿನ ಹೆಸರಾಂತ ಕಾವೇರಿ ಆಸ್ಪತ್ರೆ (ಇಲೆಕ್ಟ್ರಾನಿಕ್ ಸಿಟಿ) ಇವರ ಸಹಯೋಗದೊಂದಿಗೆ ಪ್ರಾರಂಭಿಸಿದೆ.
ಈ ವಿಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಉತ್ತಮ ಗುಣಮಟ್ಟದ ಶಸ್ತ್ರಚಿಕಿತ್ಸೆ ಮತ್ತು ದೀರ್ಘಕಾಲಿಕ ಪರಿಹಾರಗಳನ್ನು ಒದಗಿಸುವ ಸೌಲಭ್ಯಗಳನ್ನು ಒಳಗೊಂಡಿದೆ ವಿಶೇಷವಾಗಿ ಕೃತಕ ಮಂಡಿ ಬದಲಾವಣೆ, ಹಿಪ್ ಬದಲಾವಣೆ ಮತ್ತು ರೋಬೋಟಿಕ್ ಜಾಯಿಂಟ್ ಶಸ್ತ್ರಚಿಕಿತ್ಸೆಗಳು ಒಳಗೊಂಡಿದೆ.
ಇಂದಿನ ಉದ್ಘಾಟನೆ ಸಮಾರಂಭದಲ್ಲಿ ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಟಿ. ಜಿ. ರವಿಕುಮಾರ್ ಹಾಗೂ ಕಾವೇರಿ ಆಸ್ಪತ್ರೆಯ ಹೆಸರಾಂತ ತಜ್ಞರಾದ ಡಾ.ಪಿ.ಸಿ ಜಗದೀಶ್ ಮತ್ತು ಆರೈಕೆ ಆಸ್ಪತ್ರೆಯ ವೈದ್ಯಕೀಯ ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಟಿ ಜಿ ರವಿಕುಮಾರ್ ರವರು ಮಾತನಾಡಿ ಇನ್ನು ಮುಂದೆ ಪ್ರತಿ ತಿಂಗಳು ಮೊದಲನೇ ಸೋಮವಾರ ಡಾ. ಜಗದೀಶ್ ಪಿ. ಸಿ. ಅವರು ಆರೈಕೆ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಜಗದೀಶ್ ಅವರ ಸೇವೆಗಳು ಮತ್ತು ಅವರ 23 ವರ್ಷಗಳ ಅನುಭವ ಮತ್ತು 9000 ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆಗಳನ್ನು 2500ಕ್ಕೂ ಹೆಚ್ಚು ಭುಜಗಳ ಶತ್ರು ಚಿಕಿತ್ಸೆಯನ್ನು ಮಾಡಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಕೀಲು ಬದಲಾವಣೆಯಲ್ಲಿ ಪರಿಣಿತಿ ಹೊಂದಿದ್ದಾರೆ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಪಿ. ಸಿ. ಜಗದೀಶ್ ಅವರು ಮಾತನಾಡಿ ಆರೈಕೆ ಆಸ್ಪತ್ರೆಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಎಲ್ಲಾ ಶಸ್ತ್ರಚಿಕಿತ್ಸಾ ಸೌಲಭ್ಯಗಳು ಆರೈಕೆ ಆಸ್ಪತ್ರೆಯಲ್ಲಿ ಲಭ್ಯವಿದೆ.ಇದರಿಂದಾಗಿ ಅನಗತ್ಯವಾಗಿ ಬೆಂಗಳೂರಿಗೆ ಹೆಚ್ಚು ಚಿಕಿತ್ಸಾ ವೆಚ್ಚವನ್ನು ಭರಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.
ಪ್ರತಿ ಸೋಮವಾರ ನುರಿತ ಕೀಲು ಮೂಳೆ ಮರುಜೋಡಣೆ ತಜ್ಞರಿಂದ ಓ ಪಿ ಡಿ ಮತ್ತು ಶಸ್ತ್ರಚಿಕಿತ್ಸೆ ಲಭ್ಯವಿರುತ್ತದೆ.
——–