Home ಕ್ರೈಂ ನ್ಯೂಸ್ ವಿಧಿಯ ಆಟಕ್ಕೆ ಕಮರಿದ ‘ಏರ್ ಹೋಸ್ಟೆಸ್’ ಕನಸು: ಎಲೆಕ್ಟ್ರಿಕ್ ಸ್ಕೂಟಿಗೆ ಟೆಂಪೋ ಡಿಕ್ಕಿಯಾಗಿ ಇಬ್ಬರು ಸಹೋದರಿಯರು ದುರಂತ ಅಂತ್ಯ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ವಿಧಿಯ ಆಟಕ್ಕೆ ಕಮರಿದ ‘ಏರ್ ಹೋಸ್ಟೆಸ್’ ಕನಸು: ಎಲೆಕ್ಟ್ರಿಕ್ ಸ್ಕೂಟಿಗೆ ಟೆಂಪೋ ಡಿಕ್ಕಿಯಾಗಿ ಇಬ್ಬರು ಸಹೋದರಿಯರು ದುರಂತ ಅಂತ್ಯ!

Share
ಸಹೋದರಿ
Share

ಫಲಿತಾನ್/ಮಹಾರಾಷ್ಟ್ರ: ರಜೆ ಕಳೆಯಲು ಸೋದರಮಾವನ ಮನೆಗೆ ಅತ್ಯಂತ ಸಡಗರದಿಂದ ಹೊರಟಿದ್ದ ಇಬ್ಬರು ಅಕ್ಕ-ತಂಗಿಯರನ್ನು ಮಾರ್ಗಮಧ್ಯದಲ್ಲೇ ವಿಧಿ ಮೃತ್ಯು ರೂಪದಲ್ಲಿ ಆಪೋಶನ ತೆಗೆದುಕೊಂಡಿರುವ ಘೋರ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ನಿರಾ-ಮೋರ್‌ಗಾಂವ್ ರಾಜ್ಯ ಹೆದ್ದಾರಿಯ ಚೌಧರವಾಡಿ ಫಾಟಾ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಹೋದರಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು ಸೇಜಲ್ ಜ್ಞಾನೇಶ್ವರ್ ಬೋರ್ಡೆ (17) ಮತ್ತು ಅಕ್ಷರಾ ಜ್ಞಾನೇಶ್ವರ್ ಬೋರ್ಡೆ (15) ಎಂದು ಗುರುತಿಸಲಾಗಿದೆ. ಇವರೊಂದಿಗೆ ಪ್ರಯಾಣಿಸುತ್ತಿದ್ದ ಇವರ ಕಿರಿಯ ಸಹೋದರ ಪವನ್ (12) ತೀವ್ರವಾಗಿ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಹೃದಯವಿದ್ರಾವಕ ಘಟನೆಯಿಂದಾಗಿ ಫಲಿತಾನ್ ಹಾಗೂ ಮುರುಮ್ ಭಾಗದಲ್ಲಿ ತೀವ್ರ ಶೋಕಾವೃತ ವಾತಾವರಣ ನಿರ್ಮಾಣವಾಗಿದೆ.

ನಡೆದಿದ್ದೇನು?

ಮಾಹಿತಿಯ ಪ್ರಕಾರ, ಫಲಿತಾನ್ ತಾಲೂಕಿನ ಮುರುಮ್ ನಿವಾಸಿಗಳಾದ ಈ ಮೂವರು ಒಡಹುಟ್ಟಿದವರು ಶನಿವಾರ ಸಂಜೆ ಎಲೆಕ್ಟ್ರಿಕ್ ಸ್ಕೂಟಿಯಲ್ಲಿ ಸೋದರಮಾವನ ಮನೆಗೆ ಹೊರಟಿದ್ದರು. ಬಾರಾಮತಿ ತಾಲೂಕಿನ ‘ಮುರ್ತಿ’ ಇವರ ಸೋದರಮಾವನ ಗ್ರಾಮವಾಗಿತ್ತು. ಇವರು ನಿರಾ-ಮೋರ್‌ಗಾಂವ್ ರಾಜ್ಯ ಹೆದ್ದಾರಿಯ ಚೌಧರಿ ಫಾಟಾ ಬಳಿ ತಲುಪುತ್ತಿದ್ದಂತೆ, ಎದುರುಗಡೆಯಿಂದ ಬಂದ ಐಷರ್ ಟೆಂಪೋ ಇವರ ಸ್ಕೂಟಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಸ್ಕೂಟಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದ ನಂತರವೂ ಟೆಂಪೋ ಸ್ಕೂಟಿಯನ್ನು ಸ್ವಲ್ಪ ದೂರದವರೆಗೆ ಎಳೆದೊಯ್ದಿದೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಸೇಜಲ್ ಮತ್ತು ಅಕ್ಷರಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಪವನ್‌ನನ್ನು ತಕ್ಷಣವೇ ಬಾರಾಮತಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ವಿಷಮಿಸಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಪುಣೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಕಮರಿದ ಏರ್ ಹೋಸ್ಟೆಸ್ ಕನಸು

ಸ್ವಲ್ಪ ಸಮಯದ ಹಿಂದೆಯಷ್ಟೇ ಸೋದರಮಾವನ ಮನೆಗೆ ಹೋಗುವ ಉತ್ಸಾಹದಲ್ಲಿದ್ದ ಮಕ್ಕಳ ಬದುಕು ಹೀಗೆ ಅರ್ಧಕ್ಕೇ ಮುಗಿದುಹೋಗಿರುವುದನ್ನು ಕಂಡು ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸೇಜಲ್ ದ್ವಿತೀಯ ಪಿಯುಸಿ (12ನೇ ತರಗತಿ) ಓದುತ್ತಿದ್ದರೆ, ಅಕ್ಷರಾ ಈ ಬಾರಿ 10ನೇ ತರಗತಿಗೆ ಪ್ರವೇಶ ಪಡೆದಿದ್ದಳು.

ಇಬ್ಬರೂ ವಿದ್ಯಾಭ್ಯಾಸದಲ್ಲಿ ಅತ್ಯಂತ ಚುರುಕಾಗಿದ್ದು, ಭವಿಷ್ಯದಲ್ಲಿ ‘ಏರ್ ಹೋಸ್ಟೆಸ್’ ಆಗಬೇಕೆಂಬ ಕನಸು ಹೊಂದಿದ್ದರು. ಆದರೆ ವಿಧಿಯ ಆಟ ಆ ಕುಟುಂಬಕ್ಕೆ ಎಂದಿಗೂ ಮರೆಯಲಾಗದ ದುಃಖವನ್ನು ತಂದಿಟ್ಟಿದೆ. ಪ್ರಸ್ತುತ 6ನೇ ತರಗತಿಯಲ್ಲಿ ಓದುತ್ತಿರುವ ಇವರ ತಮ್ಮ ಪವನ್, ಪುಣೆಯ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.

ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಧಾವಿಸಿದ್ದು, ಅಲ್ಲಿನ ಭೀಕರ ದೃಶ್ಯವನ್ನು ಕಂಡು ಕಣ್ಣೀರಿಟ್ಟಿದ್ದಾರೆ. ವಿಷಯ ತಿಳಿದ ವಾಡ್‌ಗಾಂವ್ ನಿಂಬಾಳ್ಕರ್ ಪೊಲೀಸರು ಸ್ಥಳಕ್ಕೆ ಧಾವಿಸಿ, ಟೆಂಪೋ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ನಿರಾ-ಮೋರ್‌ಗಾಂವ್ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಎಲೆಕ್ಟ್ರಿಕ್ ಸ್ಕೂಟಿಗೆ ಐಷರ್ ಟೆಂಪೋ ಡಿಕ್ಕಿಯಾಗಿ ಇಬ್ಬರು ಸೋದರಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 12 ವರ್ಷದ ಬಾಲಕನ ಸ್ಥಿತಿ ಗಂಭೀರವಾಗಿದ್ದು ಪುಣೆ ಆಸ್ಪತ್ರೆಗೆ ದಾಖಲಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles
ಗಣೇಶ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮಸೀದಿ ಮುಂದೆ ಗಣೇಶ ಮೆರವಣಿಗೆ ನಿರ್ಬಂಧಿಸಿದರೆ ಠಾಣೆಗೆ ನುಗ್ಗುತ್ತೇನೆ: ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ಬೆನ್ನಲ್ಲೇ ರೌಡಿಗೆ ಜೈಲು ಗ್ಯಾರಂಟಿ ಎಂದ್ರು ಪ್ರಿಯಾಂಕ್ ಖರ್ಗೆ! ಬೆಂಗಳೂರು ಮೈಸೂರು:ಗಣೇಶೋತ್ಸವ ಮೆರವಣಿಗೆಯ ವೇಳೆ ಮಸೀದಿ ಮುಂಭಾಗ ಹಾದುಹೋಗುವ ಮಾರ್ಗ ಹಾಗೂ ಧ್ವನಿವರ್ಧಕಗಳ ಬಳಕೆಯ ಕುರಿತು ಟಿ. ನರಸೀಪುರ ಪೊಲೀಸ್ ಇನ್‌ಸ್ಪೆಕ್ಟರ್ ನೀಡಿದ್ದ ಎಚ್ಚರಿಕೆಯ ಹೇಳಿಕೆಗೆ ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಟಿ. ನರಸೀಪುರ ಪೊಲೀಸ್ ಇನ್ಸ್‌ಪೆಕ್ಟರ್ ಸಾರ್ವಜನಿಕ ಸಭೆಯಲ್ಲಿ ಬ್ರಿಟಿಷರ ಕಾಲದ ದರ್ಪ ಪ್ರದರ್ಶಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹೆಸರಿನಲ್ಲಿ ಯುವಕರು ಮತ್ತು ಸಾರ್ವಜನಿಕರನ್ನು ಬೆದರಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಮಸೀದಿ ಮುಂದೆ ಯುವಕರು ನೃತ್ಯ ಮಾಡಿದರೆ ಅಥವಾ ಮೆರವಣಿಗೆ ಸಾಗಿದರೆ ತಪ್ಪೇನು?” ಎಂದು ಪ್ರಶ್ನಿಸಿದರು. ಮುಂದುವರಿದು ಮಾತನಾಡಿದ ಅವರು, “ಪುಂಡಾಟಿಕೆ ಮಾಡುವುದು ಮತ್ತು ಕಲ್ಲು ತೂರುವ ಕೆಲಸಗಳನ್ನು ಯಾರು ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ, ಹಿಂದೂಗಳು ಎಂದಿಗೂ ಈ ರೀತಿಯ ಕೆಲಸಗಳನ್ನು ಮಾಡಿಲ್ಲ. ಮಸೀದಿಗಳಿಂದ ದಿನಕ್ಕೆ ಐದು ಬಾರಿ ಬರುವ ಧ್ವನಿವರ್ಧಕಗಳ ಕೂಗು ಹಿಂದೂಗಳ ಮನೆಗೆ ಕೇಳಿಸದಂತೆ ಮಾಡುವ ಧೈರ್ಯ ಪೊಲೀಸರಿಗಿದೆಯೇ? ಅದನ್ನು ಬಿಟ್ಟು ಹಬ್ಬ ಆಚರಿಸುವ ಹಿಂದೂ ಯುವಕರಿಗೆ ಧಮ್ಕಿ ಹಾಕುವುದು ಸರಿಯಲ್ಲ. ಟಿ. ನರಸೀಪುರ ಇನ್ಸ್‌ಪೆಕ್ಟರ್ ಇನ್ನೊಮ್ಮೆ ಈ ರೀತಿ ಬಾಲ ಅಲ್ಲಾಡಿಸಿದರೆ ಅಥವಾ ಬೆದರಿಕೆ ಹಾಕಿದರೆ ನಾನೇ ನೇರವಾಗಿ ಠಾಣೆಗೆ ನುಗ್ಗುತ್ತೇನೆ” ಎಂದು ಖಡಕ್ ಸವಾಲು ಹಾಕಿದರು. ಇತ್ತೀಚಿನ ಗಣೇಶ ವಿಸರ್ಜನೆ ಮೆರವಣಿಗೆಯ ಸಿದ್ಧತೆಗಳ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಈ ನಡುವೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೈಸೂರಿನಲ್ಲೊಬ್ಬ ರೌಡಿ ಇದ್ದಾನೆ. ಆತನಿಗೆ ಪರಪ್ಪನ ಆಗ್ರಹಾರಕ್ಕೆ ನುಗ್ಗಿಸುತ್ತೇವೆ. ಕಾನೂನು ಕೈಗೆತ್ತಿಕೊಂಡರೆ ಸುಮ್ಮನಿರಲ್ಲ ಎಂದಿದ್ದಾರೆ. ಇದು ಪ್ರತಾಪ್ ಸಿಂಹ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ಸಮರಕ್ಕೆ ಕಾರಣವಾಗಿದೆ.