ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಿಸಿಎಸ್ (TCS) ಲಿಂಕ್ಡ್ ಕಾಲ್ ಸೆಂಟರ್‌ನಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ವಿಶೇಷ ತನಿಖಾ ತಂಡ (SIT) ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ (Chargesheet) ಸಂತ್ರಸ್ತೆಯು ಹಲವು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಮುಖ್ಯ ಆರೋಪಿ ದಾನಿಶ್ ಎಂಬಾತ ತನಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿರುವ ವಿಷಯವನ್ನು ಮುಚ್ಚಿಟ್ಟು ಪ್ರೀತಿಯ ನಾಟಕ ವಾಡಿದ್ದನೆಂದು ಯುವತಿ ಆರೋಪಿಸಿದ್ದಾರೆ. ತನಗೆ ಈ ವಿಷಯ ವಾಟ್ಸಾಪ್ ಸಂದೇಶದ ಮೂಲಕ ತಿಳಿದು ಪ್ರಶ್ನಿಸಿದಾಗ, “ಸತ್ಯ ಗೊತ್ತಾದರೆ ನೀನು ನನ್ನನ್ನು ಬಿಟ್ಟು ಹೋಗುತ್ತೀಯ ಎಂಬ ಭಯದಿಂದ ವಿಷಯ ಮುಚ್ಚಿಟ್ಟಿದ್ದೆ. ಇಸ್ಲಾಂ ಧರ್ಮದಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದೆ” ಎಂದು ದಾನಿಶ್ ಸಮರ್ಥಿಸಿಕೊಂಡಿದ್ದನೆಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಗುರುತು ಬದಲಾವಣೆ ಮತ್ತು ವಿದೇಶಕ್ಕೆ ಕಳುಹಿಸುವ ಸಂಚು:
ಸಂತ್ರಸ್ತೆಯ ಧಾರ್ಮಿಕ ಮತಾಂತರದ ಬಳಿಕ ಆಕೆಯ ಹೆಸರನ್ನು ‘ಹಾನಿಯಾ’ ಎಂದು ಬದಲಾಯಿಸಿ, ಹೊಸ ದಾಖಲೆ ಪತ್ರಗಳನ್ನು ಸೃಷ್ಟಿಸಲು ಆರೋಪಿಗಳಾದ ದಾನಿಶ್ ಮತ್ತು ತೌಸಿಫ್ ಸಂಚು ರೂಪಿಸಿದ್ದರು. ಆಕೆಯ ಅಸಲಿ ದಾಖಲೆಗಳನ್ನು ಪಡೆದುಕೊಂಡು ಮುಂಬೈ ಅಥವಾ ಮಲೇಷ್ಯಾಕ್ಕೆ ಸ್ಥಳಾಂತರಿಸಲು ಚರ್ಚೆ ನಡೆಸಿದ್ದರು. “ದಾಖಲೆಗಳು ಸಿದ್ಧವಾದ ಬಳಿಕ, ಮುಂದಿನ ಎರಡು ವರ್ಷಗಳ ಕಾಲ ಕೆಲಸದ ನಿಮಿತ್ತ ವಿದೇಶಕ್ಕೆ ಹೋಗುತ್ತಿದ್ದೇನೆ ಎಂದು ಹೆತ್ತವರಿಗೆ ಸುಳ್ಳು ಹೇಳುವಂತೆ” ಆರೋಪಿಗಳು ಯುವತಿಗೆ ಒತ್ತಡ ಹೇರಿದ್ದರು ಎನ್ನಲಾಗಿದೆ.
ಒಂದು ವೇಳೆ ಸಮುದಾಯದಲ್ಲಿ ಮದುವೆಗೆ ಸೂಕ್ತ ವರ ಸಿಗದಿದ್ದರೆ, ಜಮಾತ್‌ನ ಇಮಾಮ್ ಜೊತೆ ಮದುವೆ ಮಾಡಿಸುವುದಾಗಿ ಮತ್ತು ಇಮಾಮ್ ಪತ್ನಿಯು ಮದರಸಾದಲ್ಲಿ ಅರೇಬಿಕ್ ಹಾಗೂ ಇಸ್ಲಾಮಿಕ್ ಪದ್ಧತಿಗಳನ್ನು ಕಲಿಸಿಕೊಡುತ್ತಾಳೆ ಎಂದು ದಾನಿಶ್ ಹೇಳಿದ್ದಾಗಿ ಸಂತ್ರಸ್ತೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ನಾಸಿಕ್‌ನ ಟಿಸಿಎಸ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ 18 ರಿಂದ 25 ವರ್ಷದ ಯುವತಿಯರಿಗೆ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಲೈಂಗಿಕ ಕಿರುಕುಳ, ಸ್ಟಾಕಿಂಗ್ ಹಾಗೂ ಮತಾಂತರಕ್ಕೆ ಒತ್ತಡ ಹೇರುತ್ತಿದ್ದಾರೆ ಎಂದು ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದಾನಿಶ್ ಶೇಖ್, ತೌಸಿಫ್ ಅತ್ತಾರ್ ಮತ್ತು ನಿಡಾ ಖಾನ್ ಸೇರಿದಂತೆ ಪ್ರಮುಖರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ನಿಡಾ ಖಾನ್‌ಗೆ ಆಶ್ರಯ ನೀಡಿದ ಆರೋಪದ ಮೇಲೆ ಎಐಎಂಐಎಂ (AIMIM) ಕಾರ್ಪೊರೇಟರ್ ಮತಿನ್ ಪಟೇಲ್ ಹೆಸರನ್ನು ಸಹ ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.
- BNS Sections
- Danish Sheikh.
- deolali camp police
- identity change plot
- Maharashtra SIT
- matin patel
- nashik conversion case
- Nida Khan
- Tausif Attar
- tcs case chargesheet
- TCS Nashik Case
- Workplace Harassment
- ಇಮಾಮ್ ಮದುವೆ ಪ್ರಸ್ತಾಪ
- ಗುರುತು ಬದಲಾವಣೆ
- ಚಾರ್ಜ್ಶೀಟ್ ಬಹಿರಂಗ
- ಟಿಸಿಎಸ್ ನಾಸಿಕ್ ಪ್ರಕರಣ
- ದಾನಿಶ್ ಶೇಖ್
- ಧರ್ಮ ಮತಾಂತರ ಸಂಚು
- ನಾಸಿಕ್ ಮತಾಂತರ ಕೇಸ್
- ಮಹಾರಾಷ್ಟ್ರ ಕ್ರೈಂ ನ್ಯೂಸ್.
- ಲೈಂಗಿಕ ಕಿರುಕುಳ





Leave a comment