ನ್ಯಾಮತಿ: ಬೀಗ ಹಾಕಿದ್ದ ಮನೆಯ ಹಂಚು ತೆಗೆದು ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ನ್ಯಾಮತಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಚಾಲಕ ಶಿವರಾಜ ಪಿ.ಎಸ್ (36) ಬಂಧಿತ ಆರೋಪಿ. ಬಂಧಿತನಿಂದ ₹5.31 ಲಕ್ಷ ಒಟ್ಟು ಮೌಲ್ಯದ ಚಿನ್ನದ ಆಭರಣ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ: ನ್ಯಾಮತಿ ತಾಲ್ಲೂಕಿನ ಯರಗನಾಳ್ ಗ್ರಾಮದ ನಿವಾಸಿ ಶಾರದ (40) ಎಂಬುವವರು ಕಳೆದ ಏಪ್ರಿಲ್ 29 ರಂದು ರಾತ್ರಿ ತಮ್ಮ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದರು. ಈ ವೇಳೆ ಮನೆಗೆ ನುಗ್ಗಿದ ಕಳ್ಳರು, ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದರು. ಈ ಕುರಿತು ನ್ಯಾಮತಿ ಪೊಲೀಸ್ ಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಕಾರ್ಯಾಚರಣೆ:
ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ಶೇಖರ್ ಹೆಚ್.ಟಿ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ, ಚನ್ನಗಿರಿ ಡಿವೈಎಸ್‌ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ ಉಸ್ತುವಾರಿಯಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ನ್ಯಾಮತಿ ಸಿಪಿಐ ಸಿದ್ದೇಗೌಡ ಹೆಚ್.ಎಂ ಹಾಗೂ ಪಿಎಸ್‌ಐ ಹೊಳಬಸಪ್ಪ ಹೋಳಿ ನೇತೃತ್ವದ ತಂಡವು ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನಿಂದ ಆರೋಪಿಯನ್ನು ಬಂಧಿಸಿದೆ.
ಸ್ವತ್ತು ವಶ:
ಬಂಧಿತನಿಂದ 40 ಗ್ರಾಂ ತೂಕದ ಒಂದು ಜೊತೆ ಚಿನ್ನದ ಬಳೆ, ಒಂದು ಕೊರಳ ಚೈನ್ (ಅಂದಾಜು ಮೌಲ್ಯ ₹4,91,000/-) ಹಾಗೂ ಕೃತ್ಯಕ್ಕೆ ಬಳಸಿದ್ದ ₹40,000/- ಮೌಲ್ಯದ ಮೋಟಾರ್ ಸೈಕಲ್ ಸೇರಿದಂತೆ ಒಟ್ಟು ₹5,31,000/- ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ.
ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
- Channagiri DSP Rudrappa
- Davanagere police arrest
- Davanagere SP Shekhar HT
- gold recovered
- Nyamathi crime news
- Nyamathi house burglary
- Shikaripura driver arrested
- thief caught
- Yaraganal theft case
- ಕಳ್ಳನ ಬಂಧನ
- ಚನ್ನಗಿರಿ ಪೊಲೀಸ್ ಕಾರ್ಯಾಚರಣೆ
- ಚಿನ್ನಾಭರಣ ವಶ
- ದಾವಣಗೆರೆ ಪೊಲೀಸ್
- ನ್ಯಾಮತಿ ಕ್ರೈಮ್ ನ್ಯೂಸ್
- ನ್ಯಾಮತಿ ಮನೆ ಕಳ್ಳತನ
- ಬಿಎನ್ಎಸ್ ಕಾಯ್ದೆ
- ಯರಗನಾಳ್ ಕಳವು ಪ್ರಕರಣ
- ಶಿಕಾರಿಪುರ ಕಳ್ಳ





Leave a comment