ಬೆಂಗಳೂರು: ದೇಶದ ಹಣಕಾಸು ವ್ಯವಸ್ಥೆಯಲ್ಲಿ ಸಾರ್ವಜನಿಕರು ಹೂಡಿಕೆ ಮಾಡಿ, ಬಳಿಕ ಮರೆತುಹೋಗಿರುವ ಅಥವಾ ವಾರಸುದಾರರಿಲ್ಲದೆ ಉಳಿದಿರುವ ಹಣದ ಮೊತ್ತ ಬರೋಬ್ಬರಿ 95,000 ಕೋಟಿ ರೂಪಾಯಿಗಳನ್ನು ದಾಟಿದೆ.
ಹೌದು, ಭಾರತೀಯ ಬ್ಯಾಂಕ್ ಗಳಲ್ಲಿ ₹78,000 ಕೋಟಿ, ಇನ್ಶೂರೆನ್ಸ್ ಸಂಸ್ಥೆಗಳಲ್ಲಿ ₹14,000 ಕೋಟಿ ಹಾಗೂ ಮ್ಯೂಚುವಲ್ ಫಂಡ್ಗಳಲ್ಲಿ ₹3,000 ಕೋಟಿಗೂ ಅಧಿಕ ಹಣ ಕ್ಲೈಮ್ ಆಗದೆ ಹಾಗೆಯೇ ಉಳಿದಿದೆ. ಈ ಹಣ ನಿಮ್ಮದು ಅಥವಾ ನಿಮ್ಮ ಪೋಷಕರು, ಹಿರಿಯರದ್ದೂ ಆಗಿರಬಹುದು. ಇದನ್ನು ಸುಲಭವಾಗಿ ಪತ್ತೆಹಚ್ಚಿ, ಮರಳಿ ಪಡೆಯಲು ಕೇಂದ್ರ ಸರ್ಕಾರದ ಇಲಾಖೆಗಳು ಸರಳ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿವೆ.
ಒಂದೇ ಪೋರ್ಟಲ್ನಲ್ಲಿ ಎಲ್ಲಾ ಮಾಹಿತಿ (Unclaimed Assets Portal): ಹಣಕಾಸು ಸೇವೆಗಳ ಇಲಾಖೆಯು (DFS) ಇತ್ತೀಚೆಗೆ ‘ಅನ್ಕ್ಲೈಮ್ಡ್ ಅಸೆಟ್ಸ್ ಪೋರ್ಟಲ್’ (Unclaimed Assets Portal) ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರ ಮೂಲಕ ನಾಗರಿಕರು ವಿವಿಧ ಬ್ಯಾಂಕ್ ಖಾತೆಗಳು, ಇನ್ಶೂರೆನ್ಸ್ ಪಾಲಿಸಿಗಳು, ಷೇರುಗಳು ಹಾಗೂ ಮ್ಯೂಚುವಲ್ ಫಂಡ್ಗಳಲ್ಲಿ ಸಿಲುಕಿರುವ ಹಣವನ್ನು ಒಂದೇ ವೇದಿಕೆಯಲ್ಲಿ ಹುಡುಕಬಹುದು.
ವಿವಿಧ ವಲಯಗಳಲ್ಲಿ ಹಣ ಹುಡುಕುವುದು ಹೇಗೆ?
ಬ್ಯಾಂಕ್ ಡೆಪಾಸಿಟ್ಗಳು: 10 ವರ್ಷಗಳಿಗಿಂತ ಹೆಚ್ಚು ಕಾಲ ಯಾವುದೇ ವಹಿವಾಟು ನಡೆಸದ ಬ್ಯಾಂಕ್ ಖಾತೆಗಳ ಹಣವನ್ನು ಆರ್ಬಿಐನ UDGAM ಪೋರ್ಟಲ್ ಅಥವಾ ಸಂಬಂಧಿತ ಬ್ಯಾಂಕ್ ವೆಬ್ಸೈಟ್ ಮೂಲಕ ಪರಿಶೀಲಿಸಬಹುದು. ವಾರಸುದಾರರು ಅಗತ್ಯ ಕೆವೈಸಿ (KYC) ದಾಖಲೆಗಳನ್ನು ನೀಡಿ ಬ್ಯಾಂಕ್ ಶಾಖೆಯಲ್ಲಿ ಕ್ಲೈಮ್ ಮಾಡಬಹುದು.
ಮ್ಯೂಚುವಲ್ ಫಂಡ್: ಹೂಡಿಕೆದಾರರು MF Central (MITRA ಪೋರ್ಟಲ್) ಅಥವಾ ಸಂಬಂಧಿತ ಇನ್ವೆಸ್ಟ್ಮೆಂಟ್ ಕಂಪನಿಗಳ ವೆಬ್ಸೈಟ್ ಮೂಲಕ ಜಂಟಿ ಪರಿಶೀಲನೆ ನಡೆಸಿ, 2 ರಿಂದ 5 ದಿನಗಳ ಒಳಗಾಗಿ ಹಣವನ್ನು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಿಕೊಳ್ಳಬಹುದು.
ಷೇರು ಮತ್ತು ಡಿವಿಡೆಂಡ್: 7 ವರ್ಷಗಳ ಕಾಲ ಕ್ಲೈಮ್ ಮಾಡದ ಷೇರುಗಳನ್ನು IEPFA ಪೋರ್ಟಲ್ ಮೂಲಕ ಪತ್ತೆ ಹಚ್ಚಿ, ಸರ್ಕಾರದ ‘Form IEPF-5’ ಅನ್ನು ಭರ್ತಿ ಮಾಡುವ ಮೂಲಕ ಡಿಮ್ಯಾಟ್ ಖಾತೆಗೆ ಮರಳಿ ಪಡೆಯಬಹುದು.
ವಿಮೆ (Insurance) ಹಾಗೂ ಎನ್ಪಿಎಸ್ (NPS): ಇನ್ಶೂರೆನ್ಸ್ ಮೊತ್ತವನ್ನು ಐಆರ್ಡಿಎಐನ ಬಿಮಾ ಭರೋಸಾ ಪೋರ್ಟಲ್ ಮೂಲಕ ಹಾಗೂ ಪೆನ್ಷನ್ ಹಣವನ್ನು PFRDA ಪೋರ್ಟಲ್ ಮೂಲಕ ಪರಿಶೀಲಿಸಿ ನಿಗದಿತ ಅವಧಿಯೊಳಗೆ ಕ್ಲೈಮ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ನಿಮ್ಮ ಕುಟುಂಬದ ಹಳೆಯ ಹೂಡಿಕೆಗಳ ದಾಖಲೆಗಳನ್ನು ಪರಿಶೀಲಿಸಿ, ಈ ಪೋರ್ಟಲ್ಗಳ ಮೂಲಕ ಇಂದೇ ನಿಮ್ಮ ಹಕ್ಕಿನ ಹಣವನ್ನು ಪಡೆದುಕೊಳ್ಳಿ.
- Bima Bharosa insurance claim
- check unclaimed dividend
- how to claim forgotten money from banks
- IEPF share recovery process
- National Pension System refund process
- RBI UDGAM portal search
- Unclaimed Assets Portal DFS
- Unclaimed Financial Assets India
- unclaimed mutual funds MF central
- ಅನ್ಕ್ಲೈಮ್ಡ್ ಬ್ಯಾಂಕ್ ಡೆಪಾಸಿಟ್
- ಉದ್ಗಮ್ ಪೋರ್ಟಲ್ ಆರ್ಬಿಐ
- ಐಇಪಿಎಫ್ಎ ಷೇರುಗಳು
- ಕೇಂದ್ರ ಸರ್ಕಾರದ ಅನ್ಕ್ಲೈಮ್ಡ್ ಅಸೆಟ್ಸ್ ಪೋರ್ಟಲ್
- ಬಿಮಾ ಭರೋಸಾ ಪೋರ್ಟಲ್ ಇನ್ಶೂರೆನ್ಸ್
- ಬ್ಯಾಂಕ್ ಹಣ ವಾಪಸ್ ಪಡೆಯುವುದು
- ಮರೆತುಹೋದ ಹಣ ಕ್ಲೈಮ್ ಮಾಡುವುದು ಹೇಗೆ
- ಮ್ಯೂಚುವಲ್ ಫಂಡ್ ಅನ್ಕ್ಲೈಮ್ಡ್ ಮನಿ
- ಹಳೆಯ ಇನ್ಶೂರೆನ್ಸ್ ಪಾಲಿಸಿ ಹಣ





Leave a comment