Home ಕ್ರೈಂ ನ್ಯೂಸ್ ಸ್ವಯಂಪ್ರೇರಿತ ವೇಶ್ಯಾವಾಟಿಕೆ ಕಾನೂನುಬಾಹಿರವಲ್ಲ, ವಯಸ್ಕರಿಗೆ ಕಿರುಕುಳ ನೀಡುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸ್ವಯಂಪ್ರೇರಿತ ವೇಶ್ಯಾವಾಟಿಕೆ ಕಾನೂನುಬಾಹಿರವಲ್ಲ, ವಯಸ್ಕರಿಗೆ ಕಿರುಕುಳ ನೀಡುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Share
ಸುಪ್ರೀಂ ಕೋರ್ಟ್
Share

ನವದೆಹಲಿ: ಸ್ವಯಂಪ್ರೇರಿತವಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ವಯಸ್ಕರ ಒಪ್ಪಿಗೆಯೇ ಅವರ ಪುನರ್ವಸತಿ ಮತ್ತು ಸಂರಕ್ಷಣಾ ಗೃಹಗಳ ನಿಯೋಜನೆಗೆ ಪ್ರಮುಖ ಮಾನದಂಡವಾಗಿರಬೇಕು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಅನೈತಿಕ ಸಾಗಣೆ ತಡೆ ಕಾಯ್ದೆಯ (ITPA) ನಿಬಂಧನೆಗಳನ್ನು ವಿಶ್ಲೇಷಿಸಿದ ನ್ಯಾಯಾಲಯ, ಸ್ವಯಂಪ್ರೇರಿತ ಲೈಂಗಿಕ ವೃತ್ತಿ ಕಾನೂನುಬಾಹಿರವಲ್ಲದ ಕಾರಣ ಪೊಲೀಸರು ವಯಸ್ಕರ ಮೇಲೆ ಕ್ರಮ ಕೈಗೊಳ್ಳಲು ಅಥವಾ ಕಿರುಕುಳ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು ಈ ಆದೇಶವನ್ನು ಹೊರಡಿಸಿದೆ. ಬ್ರೋಥೆಲ್ (ವೇಶ್ಯಾಗೃಹ) ನಡೆಸುವುದು ಕಾನೂನುಬಾಹಿರವಾಗಿದ್ದರೂ, ದಾಳಿಯ ಸಮಯದಲ್ಲಿ ಸಿಕ್ಕಿಬೀಳುವ ಸ್ವಯಂಪ್ರೇರಿತ ಲೈಂಗಿಕ ಕಾರ್ಯಕರ್ತರನ್ನು ಸಂತ್ರಸ್ತರೆಂದು ಪರಿಗಣಿಸಬೇಕೇ ವಿನಃ ಅವರನ್ನು ವಶಕ್ಕೆ ಪಡೆಯಬಾರದು ಎಂದು ಕೋರ್ಟ್ ಹೇಳಿದೆ.

ಸ್ವಯಂಪ್ರೇರಿತ ಪುನರ್ವಸತಿಗೆ ಒತ್ತು:

ಯಾವುದೇ ಲೈಂಗಿಕ ಕಾರ್ಯಕರ್ತರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಬಲವಂತದ ಪುನರ್ವಸತಿಗೆ ಒಳಪಡಿಸುವಂತಿಲ್ಲ. ಸಂವಿಧಾನದ 21ನೇ ವಿಧಿಯಡಿ ಗೌರವಾನ್ವಿತ ಜೀವನದ ಹಕ್ಕು ಇವರಿಗೂ ಅನ್ವಯಿಸುತ್ತದೆ. ಮ್ಯಾಜಿಸ್ಟ್ರೇಟ್‌ಗಳ ಮುಂದೆ ಇಂತಹ ಪ್ರಕರಣಗಳು ಬಂದಾಗ, ಅವರು ಸ್ವಯಂಪ್ರೇರಿತವಾಗಿ ಈ ವೃತ್ತಿಯಲ್ಲಿದ್ದಾರೆಯೇ ಅಥವಾ ಬಲವಂತದ ಮಾನವ ಸಾಗಣೆಗೆ (Trafficking) ಒಳಗಾಗಿದ್ದಾರೆಯೇ ಎಂಬುದನ್ನು ಮೊದಲು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ

Share

Leave a comment

Leave a Reply

Your email address will not be published. Required fields are marked *

Related Articles