ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಪ್ರಕೃತಿ ಚಿಕಿತ್ಸೆ ಕ್ಲಿನಿಕ್‌ಗಳು ಹೆಚ್ಚಿದರೆ ಕಾಯಿಲೆಗಳು ಬರದಂತೆ ತಡೆಯಬಹುದು..!

On: November 18, 2024 6:37 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:18-11-2024

ದಾವಣಗೆರೆ: ಪ್ರಕೃತಿ ಚಿಕಿತ್ಸೆ ಕ್ಲಿನಿಕ್ ಗಳು ಹೆಚ್ಚಾದಂತೆ ಕಾಯಿಲೆಗಳು ಬರದಂತೆ ತಡೆಯಬಹುದು ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ಏಳನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಅಂಗವಾಗಿ ವಿದ್ಯಾನಗರದ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಯೋಗಮತ್ತುಪ್ರಕೃತಿ ಚಿಕಿತ್ಸೆಯು ಭಾರತೀಯ ಪರಂಪರೆಯ ಚಿಕಿತ್ಸೆಯಾಗಿದ್ದುಇದು ಕೇವಲ ಪಾರ್ಶ್ವವಾಯು, ಸಯಾಟಿಕ, ಬೊಜ್ಜುತನ, ಸಂಧಿವಾತ ಇತ್ಯಾದಿ ದೀರ್ಘಕಾಲಿಕ ತೊಂದರೆಗಳನ್ನು ಸರಿಮಾಡುವ ಪದ್ದತಿಯಾಗಿರದೇ ರೋಗವು ಬರದಂತೆ ತಡೆಯುವ ಮತ್ತು ಆರೋಗ್ಯ ವೃದ್ದಿಸುವ ಚಿಕಿತ್ಸಾ ಪದ್ದತಿಯಾಗಿದೆ. ಈ ಪ್ರಕೃತಿ ಚಿಕಿತ್ಸೆಯನ್ನು ಪಡೆಯಬೇಕೆಂದರೆ ದೊಡ್ಡ-ದೊಡ್ಡ ಕೇಂದ್ರಗಳಿಗೇ ಹೋಗಿ ಚಿಕಿತ್ಸೆಯನ್ನು ಪಡೆಯಬೇಕೆಂಬ ಕಲ್ಪನೆಯಿಂದ ಹೊರಬಂದು, ಕ್ಲಿನಿಕ್‌ಗಳಲ್ಲಿಯೇ ಪ್ರಕೃತಿ ಚಿಕಿತ್ಸಾ ಪದ್ದತಿಯನ್ನು ಬಳಸಿ ನೀಡುವಂತಹ ಚಿಕಿತ್ಸೆಯಿಂದ ನಾವು ನಮ್ಮ ಆರೋಗ್ಯವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಇಂದಿನ ಒತ್ತಡಯುಕ್ತ ಬದುಕಿನಲ್ಲಿ ಪ್ರಕೃತಿಚಿಕಿತ್ಸಾ ಕೇಂದ್ರಗಳಿಗೆ ಹೋಗಿ ಒಂದು ತಿಂಗಳ ಕಾಲ ತಂಗುವುದು ಕಷ್ಟ ಸಾಧ್ಯವಾದ ಮಾತು. ಶ್ರೀಮತಿ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಂತಹ ಕ್ಲಿನಿಕ್‌ಗಳು ಹೆಚ್ಚಿದರೆ ಕಾಯಿಲೆಗಳು ಬರದಂತೆ ತಡೆಯಲು ಸಾಧ್ಯ, ಮಾತ್ರವಲ್ಲದೆ ಬಂದಂತಹ ಕಾಯಿಲೆಗಳನ್ನು ರಿಪಡಿಸಿಕೊಳ್ಳಲು ಕೂಡ ಸಾಧ್ಯವೆಂದು ತಿಳಿಸಿದರು.

ಈ ವೈದ್ಯ ಪದ್ದತಿಯು ಕಾಯಿಲೆಯ ಮೂಲವನ್ನು ಕಂಡುಹಿಡಿದು ಕಾಯಿಲೆಯನ್ನು ಪರಿಪೂರ್ಣವಾಗಿ ಸರಿಪಡಿಸುತ್ತದೆ ಹಾಗಾಗಿ ಇಂತಹ ಪದ್ದತಿಯ ಕ್ಲಿನಿಕ್‌ಗಳು ಹೆಚ್ಚುವುದರಿಂದ ಸಾರ್ವಜನಿಕರ ಆರೋಗ್ಯವನ್ನು ಇಮ್ಮಡಿಗೊಳಿಸಬಹುದೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ವಿಂಧ್ಯಾ ಗಂಗಾಧರ ವರ್ಮರವರು ಮಾತನಾಡಿ ಪ್ರಕೃತಿ ಚಿಕಿತ್ಸೆಯು ನಿರೌಷಧ ಚಿಕಿತ್ಸಾ ಪದ್ದತಿಯಾಗಿದ್ದು, ಇದು ಬಹಳಷ್ಟು ದೀರ್ಘಕಾಲಿಕ ತೊಂದರೆಗಳಿಗೆ ರಾಮಬಾಣವಾದ ಚಿಕಿತ್ಸಾ ಪದ್ದತಿಯಾಗಿದೆ. ಪ್ರಕೃತಿ ಚಿಕಿತ್ಸೆಯ ಸಿದ್ದಾಂತದ ಪ್ರಕಾರ ದೇಹದಲ್ಲಿ ವಿಷಕಾರಿ ವಸ್ತುಗಳ ಸಂಗ್ರಹಣೆಯಿಂದಾಗಿ ಕಾಯಿಲೆಗಳು ಬರುತ್ತವೆ. ಪ್ರಕೃತಿ ಚಿಕಿತ್ಸಾ ವೈದ್ಯರುಗಳು ಈ ಮೂಲಕಾರಣವನ್ನು ಹುಡುಕಿ ಇಡೀ ದೇಹವನ್ನು ಶುದ್ದೀಕರಣಗೊಳಿಸುವ ಚಿಕಿತ್ಸೆಯನ್ನು ನೀಡುತ್ತಾರೆ ಮಾತ್ರವಲ್ಲದೆ ಅಕ್ಯುಪಂಕ್ಚರ್, ಮಸಾಜ್ ಚಿಕಿತ್ಸೆ, ಫಿಸಿಯೋಥೆರಪಿಯಂತಹ ಚಿಕಿತ್ಸೆಗಳಿಂದ ತ್ವರಿತ ರೋಗಲಕ್ಷಣಗಳನ್ನು ಹರಿಸುವ ಚಿಕಿತ್ಸೆಗಳನ್ನೂ ನೀಡುತ್ತಾರೆ. ಪ್ರಕೃತಿ ಚಿಕಿತ್ಸೆಯನ್ನು ಬಳಸಿಕೊಂಡು ಸರಿಯಾಗುವ ಎಲ್ಲ ಕಾಯಿಲೆಗಳು ಮತ್ತೆ ಮರಳಿ ಬರದಷ್ಟರಮಟ್ಟಿಗೆಗುಣವನ್ನು ಕಾಣಿಸಿಕೊಳ್ಳುತ್ತವೆಯೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪುತ್ತೂರಿನ ಖ್ಯಾತ ವೈದ್ಯ ಬಿ. ರಾಮರಾಜು ಅವರು, ಈ ಪ್ರಕೃತಿ ಚಿಕಿತ್ಸಾ ಪದ್ದತಿಯು ಹಳೇತಲೆಮಾರಿನಿಂದ ನಡೆದುಕೊಂಡು ಬಂದಿರುವ ಚಿಕಿತ್ಸಾ ಪದ್ದತಿಯಾಗಿದ್ದು, ಈ ಚಿಕಿತ್ಸೆಯು ಮನೆಮದ್ದಿನ ರೂಪದಲ್ಲಿ ಅದೆಷ್ಟೋ ಭಾರತೀಯರ ದೈನಂದಿನ ಭಾಗವಾಗಿದೆ. ಕೇಂದ್ರ ಸರ್ಕಾರವು ಈ ಚಿಕಿತ್ಸೆಯನ್ನು ಹೆಚ್ಚೆಚ್ಚು ಪ್ರಚಾರ ಪಡಿಸುವ ಉದ್ದೇಶದೊಂದಿಗೆ ನವೆಂಬರ್ 18 ಅನ್ನು ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯನ್ನಾಗಿ 7 ವರ್ಷಗಳ ಹಿಂದೆ ಘೋಷಿಸಿರುವುದು ನಮ್ಮೆಲ್ಲರಿಗೂ ಸಂತೋಷವನ್ನು ತಂದಿದೆ. ಮಾತ್ರವಲ್ಲದೇ ಆರೋಗ್ಯದ ದೃಷ್ಠಿಯಿಂದ ಈ ಪದ್ದತಿಯ ಬಗ್ಗೆ ಸಾರ್ವಜನಿಕರಿಗೆ ತಿಳಿಯಪಡಿಸಲು ಇದೊಂದು ಮಾಧ್ಯಮವಾಗಿದೆ ಎಂದರು.

ತುಳಸಿಯವರು ಮಾತನಾಡಿ, ಪ್ರಕೃತಿಚಿಕಿತ್ಸೆಯ ದಿನವಾದ ಈ ದಿನದಂದು ಪ್ರಕೃತಿಯ ಈ ಮಡಿಲಿನಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸಂತೋಷ ತರುತ್ತಿದೆ. ಮಾತ್ರವಲ್ಲದೆ, ಈ ದಿನ ನಾವೆಲ್ಲರೂ ಪ್ರಕೃತಿಯನ್ನು ಕಾಪಾಡುವ ಅಂದರೆ ನಾವು ತಿನ್ನುವ ಹಣ್ಣುಗಳ ಬೀಜಗಳನ್ನು ಮಣ್ಣಿಗೆ ಹಾಕುವ ಮುಖಾಂತರ ಮತ್ತಷ್ಟು ಗಿಡ-ಮರಗಳನ್ನು ಪ್ರಕೃತಿಯಲ್ಲಿ ಹೆಚ್ಚಿಸಿದರೆ ಮಾತ್ರ ಪ್ರಕೃತಿ ಚಿಕಿತ್ಸಾ ಪದ್ದತಿಗೆ ಉಳಿಗಾಲ. ಪ್ರಕೃತಿಯೇ ಇಲ್ಲದ ಪ್ರಕೃತಿಚಿಕಿತ್ಸೆ ವ್ಯರ್ಥವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ. ಗಂಗಾಧರ ವರ್ಮರವರು ಮಾತನಾಡಿ ಪ್ರಕೃತಿ ಚಿಕಿತ್ಸೆಯಿಂದ ಮೂಳೆ, ನರ, ಶ್ವಾಸಕೋಶ, ಜೀರ್ಣಾಂಗವ್ಯೂಹ, ಚರ್ಮ, ದೀರ್ಘಕಾಲಿಕ, ಮುಟ್ಟಿನ ಸಮಸ್ಯೆಗಳು ಸಂಪೂರ್ಣವಾಗಿ ಔಷಧಗಳ ಪ್ರಮೇಯವೇ ಇಲ್ಲದೇ ಸಂಪೂರ್ಣ ಗುಣವಾಗುತ್ತವೆಯೆಂಬುದು ನನ್ನ ಇಷ್ಟುವರ್ಷಗಳ ಅನುಭವ ಎಂದು ಹೇಳಿದರು.

ಕನಕಾ ಬಿಂದು ನಿರೂಪಿಸಿದರು. ಆಸ್ಪತ್ರೆಯ ಮ್ಯಾನೇಜರ್ ಪ್ರಹ್ಲಾದ್, ಸುಧಾ ಜಾಧವ್, ಪವಿತ್ರಾ, ನಾಗಣ್ಣ, ಗಾಯತ್ರಿ, ಶಿಲ್ಪಾ, ಶ್ರೀಧರ್, ಅಬ್ದುಲ್ ಸಾಬ್ ಹಾಗೂ ಸಾಧಕರು ಮತ್ತು ಸಾರ್ವಜನಿಕರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment