ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಇಂದು ಸಂಜೆ 6 ಗಂಟೆಗೆ ಪಿಜೆ ಬಡಾವಣೆಯಲ್ಲಿ ಸಭೆ: ವಕ್ಫ್ ಆಸ್ತಿ ವಿವಾದ, ಬಡಾವಣೆ ಕುಂದು ಕೊರತೆ ಸಭೆ

On: November 16, 2024 7:15 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:16-11-2024

ದಾವಣಗೆರೆ: ದಾವಣಗೆರೆ ನಗರದ ಪಿಜೆ ಬಡಾವಣೆಯ ಶ್ರೀರಾಮ ದೇವಸ್ಥಾನದ ಮುಂಭಾಗ ಶನಿವಾರ ಸಂಜೆ 6 ಗಂಟೆಗೆ ನಾಗರಿಕರ ಹಿತರಕ್ಷಣ ಸಮಿತಿ ವತಿಯಿಂದ ಪಿಜೆ ಬಡಾವಣೆಯ ವಕ್ಫ್ ಆಸ್ತಿಯ ವಿವಾದ ಹಾಗೂ ಪಿಜೆ ಬಡಾವಣೆಯ ಕುಂದು ಕೊರತೆ ಸಭೆ ಕರೆಯಲಾಗಿದೆ.

ಈ ಸಭೆಯ ಉದ್ಘಾಟನೆಯನ್ನು ಮಹಾನಗರ ಪಾಲಿಕೆಯ ಮಹಾಪೌರರಾದ ಕೆ ಚಮನ್ ಸಾಬ್ ಉದ್ಘಾಟಿಸಲಿದ್ದಾರೆ. ಈ ಸಭೆಯಲ್ಲಿ ಉಪ ಮಹಾಪೌರರಾದ ಸೋಗಿ ಶಾಂತ್ ಕುಮಾರ್, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ದಾವಣಗೆರೆ ತಾಲೂಕು ತಹಶೀಲ್ದಾರ್ ಡಾ. ಅಶ್ವಥ್ ಎಂ. ಬಿ., ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಲಕ್ಷ್ಮಿ ಎಸ್. ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವಾರ್ಡ್ ಅಧ್ಯಕ್ಷ ಮಧು ಪವಾರ್ ವಹಿಸಿಕೊಳ್ಳಲಿದ್ದಾರೆ. ಪಿಜೆ ಬಡಾವಣೆಯ ನಾಗರಿಕರು ಆಗಮಿಸಿ ಸಭೆಯಲ್ಲಿ ಅಹವಾಲು, ವಕ್ಫ್ ಕುರಿತ ಗೊಂದಲಕ್ಕೆ ಉತ್ತರ ಪಡೆಯಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment