ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Siddaramaiah Promised : ಮಗ, ಸೊಸೆ, ಮೊಮ್ಮಗನ ಮೃತದೇಹ ತರಿಸಿಕೊಡುವಂತೆ ನಾಡಿನ ದೊರೆಗೆ ಕೈಮುಗಿದು ಕೇಳಿದ ತಾಯಿ: ಅಗತ್ಯ ನೆರವು ನೀಡುವಂತೆ ಸಿದ್ದರಾಮಯ್ಯ ಸೂಚನೆ

On: August 21, 2023 7:52 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:21-08-2023

ಬೆಂಗಳೂರು: ಅಮೆರಿಕದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮೃತದೇಹಗಳನ್ನು ದಾವಣಗೆರೆಗೆ ತರಿಸಿಕೊಡುವಂತೆ ಯೋಗೇಶ್ ಹೊನ್ನಾಳ ತಾಯಿ ಶೋಭಾ ಹೊನ್ನಾಳ ಅವರು ಸಿಎಂ ಸಿದ್ದರಾಮಯ್ಯ (Siddaramaiah) ಅವರಲ್ಲಿ ಮನವಿ ಮಾಡಿದರು. ಕುಟುಂಬಸ್ಥರು, ಸಂಬಂಧಿಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆದಷ್ಟು ಬೇಗ ಮೃತದೇಹಗಳನ್ನು ತರಿಸುವಂತೆ ಕೈ ಮುಗಿದು ವಿನಂತಿಸಿಕೊಂಡರು.

ಶೋಭಾ ಹೊನ್ನಾಳ ಮತ್ತು ಸಂಬಂಧಿಕರು ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ ಘಟನೆ ಕುರಿತಂತೆ ತಮಗಿದ್ದ ಮಾಹಿತಿ ನೀಡಿದರು. ಈ ವೇಳೆ ಯೋಗೇಶ್ ಹೊನ್ನಾಳ, ಪ್ರತಿಭಾ ಹೊನ್ನಾಳ ಹಾಗೂ ಯಶ್ ಹೊನ್ನಾಳ ಸಾವಿನ ಕುರಿತಂತೆ ಇದುವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

 

SUSPECT DEATH
SUSPECT DEATH

ಅಲ್ಲಿನ ಪೊಲೀಸರು ಶೂಟ್ ಡೆಡ್ ಎಂದಷ್ಟೇ ಹೇಳಿದ್ದಾರೆ. ಸ್ಪಷ್ಟತೆ ದೊರೆಯುತ್ತಿಲ್ಲ. ಮೇಲಾಗಿ ಮೃತದೇಹಗಳನ್ನು ದಾವಣಗೆರೆಗೆ ತರಿಸಿಕೊಡಲು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿದರೆ ಆಗುತ್ತದೆ. ಈ ಕಾರಣಕ್ಕೆ ತಮ್ಮನ್ನು ಭೇಟಿ ಮಾಡಿದ್ದು, ಆದಷ್ಟು ಬೇಗ ಮೃತದೇಹಗಳನ್ನು ತರಿಸಿಕೊಡುವಂತೆ ಭಾರತಿ ಅವರು ಕೈ ಮುಗಿದು ಮನವಿ ಮಾಡಿದರು.

ಈ ಸುದ್ದಿಯನ್ನೂ ಓದಿ: 

Davanagere: ದಾವಣಗೆರೆ ಮೂಲದ ದಂಪತಿ ಮಗು ಸಾವಿಗೆ ಅಮೆರಿಕಾದಲ್ಲಿ ಕಣ್ಣೀರು ಸುರಿಸಿದ ನೆರೆಹೊರೆಯವರು, ಸ್ನೇಹಿತರು.. ಕ್ಯಾಂಡಲ್ ಹಿಡಿದು ಭಾವಪೂರ್ಣ ಶ್ರದ್ಧಾಂಜಲಿ

ಮೃತ ದೇಹಗಳನ್ನು ಇಲ್ಲಿಗೆ ತರಿಸುವುದು ಸೇರಿದಂತೆ ಹಲವು ತಾಂತ್ರಿಕ ನೆರವು ಕೋರಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ (Siddaramaiah) ಅವರು, ಈ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು. ಅಮೆರಿಕಾದಲ್ಲಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು. ಆದಷ್ಟು ಬೇಗ ಮೃತದೇಹ ತರಿಸಿಕೊಡುವ ಭರವಸೆ ನೀಡಿದರು. ಮಾತ್ರವಲ್ಲ, ಅಗತ್ಯ ನೆರವು ಒದಗಿಸುವಂತೆ ಮುಖ್ಯಮಂತ್ರಿಗಳು ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಸೂಚಿಸಿದರು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment