Home ಕ್ರೈಂ ನ್ಯೂಸ್ ಭೀಕರ ಕೃತ್ಯ: ನೀಟ್ ವಿದ್ಯಾರ್ಥಿನಿಯ ಅಪಹರಣ, ಅತ್ಯಾಚಾರ, ಸಿಗರೇಟಿನಿಂದ ಸುಟ್ಟು ವಿಕೃತ ಟಾರ್ಚರ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಭೀಕರ ಕೃತ್ಯ: ನೀಟ್ ವಿದ್ಯಾರ್ಥಿನಿಯ ಅಪಹರಣ, ಅತ್ಯಾಚಾರ, ಸಿಗರೇಟಿನಿಂದ ಸುಟ್ಟು ವಿಕೃತ ಟಾರ್ಚರ್!

Share
ವಿದ್ಯಾರ್ಥಿನಿ
Share

ಮಹೋಬಾ (ಉತ್ತರ ಪ್ರದೇಶ): ದೇಶಾದ್ಯಂತ ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸುವ ಮತ್ತೊಂದು ಅತ್ಯಂತ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಹೋಬಾದಲ್ಲಿ ಬೆಳಕಿಗೆ ಬಂದಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಗೆ (NEET) ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ, ಬರೋಬ್ಬರಿ 16 ದಿನಗಳ ಕಾಲ ಒತ್ತೆಯಾಳಾಗಿಟ್ಟುಕೊಂಡು ಸರಣಿ ಅತ್ಯಾಚಾರ ಹಾಗೂ ಭೀಕರ ದೈಹಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ.

ಕೋಚಿಂಗ್ ಮುಗಿಸಿ ಬರುವಾಗ ಅಪಹರಣ:

ಏಪ್ರಿಲ್ 30 ರಂದು ಸಂತ್ರಸ್ತೆ ಎಂದಿನಂತೆ ತನ್ನ ಕೋಚಿಂಗ್ ತರಗತಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಕಾರಿನಲ್ಲಿ ಬಂದ ಮೋಹಿತ್ ಶ್ರೀವಾಸ್ತವ, ಅಂಕಿತ್ ಶ್ರೀವಾಸ್ತವ ಮತ್ತು ಅಲ್ಲು ರಜಪೂತ್ ನೇತೃತ್ವದ ದುಷ್ಕರ್ಮಿಗಳ ಗ್ಯಾಂಗ್ ಆಕೆಯನ್ನು ಬಲವಂತವಾಗಿ ಅಪಹರಿಸಿದೆ. ಕಾರಿನ ಒಳಗಡೆಯೇ ವಿದ್ಯಾರ್ಥಿನಿಗೆ ಮಯಕದ ಇಂಜೆಕ್ಷನ್ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಆಕೆಯ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ.

ಸಿಗರೇಟಿನಿಂದ ಸುಟ್ಟು, ಚಾಕುವಿನಿಂದ ಇರಿದು ವಿಕೃತಿ:

16 ದಿನಗಳ ಕಾಲ ಯುವತಿಯನ್ನು ಅಜ್ಞಾತ ಸ್ಥಳದಲ್ಲಿ ಬಂಧನದಲ್ಲಿಟ್ಟಿದ್ದ ನರಾಧಮರು, ಪ್ರತಿದಿನ ಮಾದಕ ದ್ರವ್ಯದ ಇಂಜೆಕ್ಷನ್‌ಗಳನ್ನು ನೀಡುತ್ತಿದ್ದರು. ಅಷ್ಟೇ ಅಲ್ಲದೆ, ಆಕೆಯ ದೇಹದ ಭಾಗಗಳಿಗೆ ಉರಿಯುವ ಸಿಗರೇಟಿನಿಂದ ಸುಟ್ಟು, ಚಾಕುವಿನಿಂದ ಇರಿದು ವಿಕೃತವಾಗಿ ಟಾರ್ಚರ್ ನೀಡಿದ್ದಾರೆ. ಪ್ರಮುಖ ಆರೋಪಿ ಮೋಹಿತ್ ಶ್ರೀವಾಸ್ತವ ಎಂಬಾತ ಸರಣಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಯಾಗುವಂತೆ ಬೆದರಿಕೆ, ಬ್ಲ್ಯಾಕ್‌ಮೇಲ್:

ಮೇ 13 ರಂದು ಯುವತಿಯನ್ನು ಪ್ರಯಾಗ್‌ರಾಜ್‌ಗೆ ಕರೆದೊಯ್ದ ಆರೋಪಿಗಳು, ಅಲ್ಲಿ ಮೋಹಿತ್‌ನ ಕುಟುಂಬಸ್ಥರ ಸಮ್ಮುಖದಲ್ಲಿ ಆಕೆಯನ್ನು ಬಲವಂತವಾಗಿ ಮದುವೆಯಾಗುವಂತೆ ಒತ್ತಾಯಿಸಿದ್ದಾರೆ. ಯುವತಿ ನಿರಾಕರಿಸಿದಾಗ, ಆಕೆಯ ಸಹೋದರನ ಫೋಟೋ ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಮದುವೆಗೆ ಒಪ್ಪಿಕೊಂಡರೆ ಮಾತ್ರ ಅಶ್ಲೀಲ ವಿಡಿಯೋಗಳನ್ನು ಡಿಲೀಟ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ.

ಪೊಲೀಸ್ ಕಾರ್ಯಾಚರಣೆ – ಮೂವರ ಬಂಧನ:

ಮೇ 1 ರಂದು ಯುವತಿಯ ತಾಯಿ ನೀಡಿದ ನಾಪತ್ತೆ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಯುವತಿಯ ಪತ್ತೆಗಾಗಿ 4 ವಿಶೇಷ ತಂಡಗಳನ್ನು ರಚಿಸಿದ್ದರು. ತನಿಖೆ ನಡೆಸಿ ಮೇ 16 ರಂದು ಪ್ರಯಾಗ್‌ರಾಜ್‌ನಲ್ಲಿ ಯುವತಿಯನ್ನು ರಕ್ಷಿಸಲಾಗಿದೆ. “ಸದ್ಯ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ವಂದನಾ ಸಿಂಗ್ ತಿಳಿಸಿದ್ದಾರೆ.

ಯೋಗಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ:

ಈ ಘಟನೆ ಉತ್ತರ ಪ್ರದೇಶದಲ್ಲಿ ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜಕೀಯ ವಲಯದಲ್ಲೂ ಬಿರುಗಾಳಿ ಎಬ್ಬಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್ ಪಕ್ಷವು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಅವರು ಈಗಾಗಲೇ ಸಂತ್ರಸ್ತೆಯೊಂದಿಗೆ ಮಾತನಾಡಿದ್ದು, ಶೀಘ್ರದಲ್ಲೇ ಕಾಂಗ್ರೆಸ್ ನಿಯೋಗ ಯುವತಿಯನ್ನು ಭೇಟಿ ಮಾಡಲಿದೆ ಎಂದು ತಿಳಿದುಬಂದಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles