Home ಉದ್ಯೋಗ ವಾರ್ತೆ RRB Recruitment 2026: ರೈಲ್ವೇ ಇಲಾಖೆಯಲ್ಲಿ 6,565 ಟೆಕ್ನಿಷಿಯನ್ ಹುದ್ದೆಗಳ ಭರ್ಜಿಗೆ ಅಧಿಸೂಚನೆ; ಅರ್ಜಿ ಸಲ್ಲಿಕೆ ಜೂನ್ 30 ರಿಂದ ಆರಂಭ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

RRB Recruitment 2026: ರೈಲ್ವೇ ಇಲಾಖೆಯಲ್ಲಿ 6,565 ಟೆಕ್ನಿಷಿಯನ್ ಹುದ್ದೆಗಳ ಭರ್ಜಿಗೆ ಅಧಿಸೂಚನೆ; ಅರ್ಜಿ ಸಲ್ಲಿಕೆ ಜೂನ್ 30 ರಿಂದ ಆರಂಭ

Share
ರೈಲ್ವೇ
Share

ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ರೈಲ್ವೇ ಇಲಾಖೆಯು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ರೈಲ್ವೇ ನೇಮಕಾತಿ ಮಂಡಳಿ (RRB) ಒಟ್ಟು 6,565 ಟೆಕ್ನಿಷಿಯನ್ ಗ್ರೇಡ್-1 (ಸಿಗ್ನಲ್) ಮತ್ತು ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳ ಭರ್ಜಿಗೆ ತಾತ್ಕಾಲಿಕ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 30, 2026 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ:

ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್: 323 ಹುದ್ದೆಗಳು

ಟೆಕ್ನಿಷಿಯನ್ ಗ್ರೇಡ್ III: 6,242 ಹುದ್ದೆಗಳು

ಒಟ್ಟು ಹುದ್ದೆಗಳು: 6,565 (ತಾತ್ಕಾಲಿಕ)

ಶೈಕ್ಷಣಿಕ ಅರ್ಹತೆ:

ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್: ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ.ಎಸ್ಸಿ (ಫಿಸಿಕ್ಸ್ / ಎಲೆಕ್ಟ್ರಾನಿಕ್ಸ್ / ಕಂಪ್ಯೂಟರ್ ಸೈನ್ಸ್ / ಐಟಿ / ಇನ್ಸ್ಟ್ರುಮೆಂಟೇಶನ್) ಅಥವಾ ಇಂಜಿನಿಯರಿಂಗ್ ಡಿಪ್ಲೊಮಾ/ಡಿಗ್ರಿ ಉತ್ತೀರ್ಣರಾಗಿರಬೇಕು.

ಟೆಕ್ನಿಷಿಯನ್ ಗ್ರೇಡ್ III: 10ನೇ ತರಗತಿ (ಮೆಟ್ರಿಕ್ಯುಲೇಷನ್) ಜೊತೆಗೆ ಸಂಬಂಧಪಟ್ಟ ಟ್ರೇಡ್‌ನಲ್ಲಿ NCVT/SCVT ಇಂದ ಐಟಿಐ (ITI) ಅಥವಾ ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿರಬೇಕು.

ವಯೋಮಿತಿ ಮತ್ತು ವೇತನ:

ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್: 18 ರಿಂದ 36 ವರ್ಷಗಳು (ಆರಂಭಿಕ ವೇತನ: ರೂ. 29,200/-)

ಟೆಕ್ನಿಷಿಯನ್ ಗ್ರೇಡ್ III: 18 ರಿಂದ 33 ವರ್ಷಗಳು (ಆರಂಭಿಕ ವೇತನ: ರೂ. 19,900/-)

(ನಿಯಮಾನುಸಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ).

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಯಾವುದೇ ಆಪ್ಟಿಟ್ಯೂಡ್ ಟೆಸ್ಟ್ (CBAT) ಇರುವುದಿಲ್ಲ. ಪರೀಕ್ಷೆಯು ಒಟ್ಟು 100 ಅಂಕಗಳಿಗೆ 90 ನಿಮಿಷಗಳ ಕಾಲ ನಡೆಯಲಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/3 ರಷ್ಟು ನೆಗೆಟಿವ್ ಅಂಕಗಳಿರುತ್ತವೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಆರಂಭ: 30 ಜೂನ್ 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಜುಲೈ 2026 (ರಾತ್ರಿ 11:59 ರವರೆಗೆ)

ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಹಾಗೂ ಆನ್‌ಲೈನ್ ಅರ್ಜಿಗಾಗಿ ರೈಲ್ವೇ ಮಂಡಳಿಯ ಅಧಿಕೃತ ಪ್ರಾದೇಶಿಕ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು.

ಅಧಿಕೃತ ವೆಬ್ ಸೈಟ್: https://www.rrbcdg.gov.in (and all regional RRB websites)

Share

Leave a comment

Leave a Reply

Your email address will not be published. Required fields are marked *