ನವದೆಹಲಿ: ನೀಟ್-ಯುಜಿ 2026 ಪರೀಕ್ಷೆಯ ಅಕ್ರಮದ ತನಿಖೆ ಚುರುಕುಗೊಂಡಿದ್ದು, ಬಂಧಿತ ಆರೋಪಿ ಶುಭಂ ಖೈರ್ನಾರ್ ಅಭ್ಯರ್ಥಿಗಳಿಗೆ ವಾಟ್ಸಾಪ್ ಮೂಲಕ 500 ರಿಂದ 600 ಅಂಕಗಳ ಭರವಸೆ ನೀಡಿದ್ದ ವಿಚಾರ ಸಿಬಿಐ ತನಿಖೆಯಿಂದ ಹೊರಬಂದಿದೆ.
ಈ ಸೋರಿಕೆ ಜಾಲವು ಮಹಾರಾಷ್ಟ್ರ ಮಾತ್ರವಲ್ಲದೆ ರಾಜಸ್ಥಾನ, ಹರಿಯಾಣ ಮತ್ತು ಕೇರಳ ಸೇರಿದಂತೆ ಹಲವು ರಾಜ್ಯಗಳಿಗೆ ಹಬ್ಬಿರುವುದು ದೃಢಪಟ್ಟಿದೆ.
ಪ್ರಮುಖ ಅಂಶಗಳು:
ಲಾಭದ ದಂಧೆ:
ನಾಸಿಕ್ ಮೂಲದ ಬಿಎಎಂಎಸ್ ವಿದ್ಯಾರ್ಥಿ ಶುಭಂ, ಪೂನಾದ ವ್ಯಕ್ತಿಯಿಂದ 10 ಲಕ್ಷ ರೂಪಾಯಿಗೆ ಪ್ರಶ್ನೆ ಪತ್ರಿಕೆ ಖರೀದಿಸಿ, ಹರಿಯಾಣದ ವ್ಯಕ್ತಿಗೆ 15 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ಎನ್ನಲಾಗಿದೆ.
ವೈಫಲ್ಯದ ಯತ್ನ:
ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನ ಕೂದಲನ್ನು ಕತ್ತರಿಸಿ ಗುರುತು ಮರೆಮಾಚಲು ಯತ್ನಿಸಿದ್ದ ಆರೋಪಿಯನ್ನು ತಾಂತ್ರಿಕ ಕಣ್ಗಾವಲು ಮೂಲಕ ಬಂಧಿಸಲಾಗಿದೆ.
ಪರೀಕ್ಷೆ ಮರುನಿಗದಿ:
ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಮೇ 3 ರಂದು ನಡೆದಿದ್ದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಜೂನ್ 21, 2026 ರಂದು ಮರುಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.





Leave a comment